
ಹೊಸನಗರ: ಹೊಳೆ ದಾಟುವಾಗ ಉಕ್ಕಡ ಮಗುಚಿ ಯುವಕ ನೀರುಪಾಲಾದ ಘಟನೆ ಹೊಸನಗರ ತಾಲೂಕಿನ ಬಂಟೋಡಿಯಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ್ದು ನಾಪತ್ತೆಯಾದ ಯುವಕನಿಗಾಗಿ ಶೋಧಕಾರ್ಯ ನಡೆಯುತ್ತಿದೆ.
ತಾಲೂಕಿನ ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಟ್ಟಿನಹೊಳೆ ಗ್ರಾಮದ ಮೂವರು ಯುವಕರು ತೆರಳುತ್ತಿದ್ದ ಉಕ್ಕಡ ಮಗುಚಿದೆ. ಪೂರ್ಣೇಶ (22) ಎಂಬ ಯುವಕ ನೀರು ಪಾಲಾಗಿದ್ದಾರೆ. ಜೊತೆಯಲ್ಲಿದ್ದ ಶರತ್ ಮತ್ತು ರಂಜನ್ ಎಂಬ ಯುವಕರು ಅದೃಷ್ಟವಶಾತ್ ಬದುಕುಳಿದಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ದೌಡಾಯಿಸಿದ್ದು, ನೀರುಪಾಲಾದ ಯುವಕನ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.
ಸರ್ಕಾರದ ವಿರುದ್ಧ ಗ್ರಾಮಸ್ಥರ ಆಕ್ರೋಶ
ಚಿಂಚನೂರು ಮತ್ತು ಬಂಟೋಡಿ ನಡುವೆ ಕಾಲುಸಂಕ ನಿರ್ಮಿಸುವಂತೆ ಹಲವು ವರ್ಷಗಳಿಂದ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದರು. ಪ್ರತಿ ಬಾರಿ ಮುಳುಗಡೆ ಸಂದರ್ಭದಲ್ಲಿ ಉಕ್ಕಡದ ಮೂಲಕವೇ ಸಾಗಬೇಕಾದ ಪರಿಸ್ಥಿತಿ ಇದೆ. ದಶಕಗಳ ಬೇಡಿಕೆಗೆ ಸರ್ಕಾರ ಸ್ಪಂದಿಸದೆ ಇರುವುದರಿಂದ ಈ ದುರಂತ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು...
ಭಾನುವಾರವು ಸಹ ಮುಂದುವರೆಯಲಿದೆ ಶೋಧ ಕಾರ್ಯ..
ನಾಪತ್ತೆಯಾದ ಯುವಕ ಪೂರ್ಣೇಶ್ ಗಾಗಿ ಇಂದು ಸಹ ಶೋಧ ಕಾರ್ಯ ಮುಂದುವರೆಯಲಿದೆ.
ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಮುಳುಗು ತಜ್ಞರು ಇಂದು ಶೋಧಕ ಕಾರ್ಯ ಮುಂದುವರಿಸಲಿದ್ದಾರೆ..
THEPPA:HOSANAGARA.
Discover more from Prasarana news
Subscribe to get the latest posts sent to your email.
