VIVEKANANDA JAYANTI: ಹೊಸನಗರ ಬಿಜೆಪಿ ಯುವ ಮೋರ್ಚಾ ವತಿಯಿಂದ “ವಿವೇಕ ನಡಿಗೆ”….

ಹೊಸನಗರ: ವಿವೇಕಾನಂದರ ಜಯಂತಿ ಅಂಗವಾಗಿ ಹೊಸನಗರ ಬಿಜೆಪಿ ಯುವ ಮೋರ್ಚಾ ವತಿಯಿಂದ "ವಿವೇಕ ನಡಿಗೆ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮಾವಿನಕೊಪ್ಪ ಗಂಗಾಧರೇಶ್ವರ ದೇವಸ್ಥಾನ ದಿಂದ ಆರಂಭಗೊಂಡ ವಿವೇಕ ನಡಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಪ್ರಮುಖರಾದ ದೇವಾನಂದ್ ಸ್ವಾಮಿ ವಿವೇಕಾನಂದರು ತಮ್ಮ ಬೋಧನೆಗಳಿಂದ ಪ್ರಪಂಚದಾದ್ಯಂತ ಲಕ್ಷಾಂತರ ಯುವಕರನ್ನು ಪ್ರೇರೇಪಿಸಿದರು. ಚಿಕಾಗೋದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ ಅವರ ಭಾರತದ ಆಧ್ಯಾತ್ಮಿಕತೆ-ಚಾಲಿತ ಸಂಸ್ಕೃತಿ ಮತ್ತು ದೃಢವಾದ ಇತಿಹಾಸದ ಕುರಿತು ಅವರ ಪ್ರಸಿದ್ಧ ಭಾಷಣವು ಅಮೆರಿಕನ್ನರಿಂದ, ವಿಶೇಷವಾಗಿ ಬೌದ್ಧಿಕ ವಲಯದಿಂದ ಪ್ರಶಂಸೆಯನ್ನು ಗಳಿಸಿತು.
ಅವರ ಬಲವಾದ ವ್ಯಕ್ತಿತ್ವ, ವಿಜ್ಞಾನ ಮತ್ತು ವೇದಾಂತದಲ್ಲಿ ಅಪಾರ ಜ್ಞಾನ, ಮತ್ತು ಮಾನವ ಮತ್ತು ಪ್ರಾಣಿಗಳ ಜೀವನದ ಬಗ್ಗೆ ಸಹಾನುಭೂತಿ, ಅವರನ್ನು ಶಾಂತಿ ಮತ್ತು ಮಾನವೀಯತೆಯ ಮೌಲ್ಯಗಳ ಗ್ರಂಥವಾಗಿದ್ದರು
ವಿವೇಕಾನಂದರ ಬೋಧನೆಗಳು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಲೇ ಇವೆ. ಪ್ರಧಾನವಾಗಿ ಹಿಂದೂ ಸಂತನಾಗಿದ್ದರೂ, ವಿವೇಕಾನಂದರು ಯಾವಾಗಲೂ ಮಾನವೀಯತೆಯನ್ನು ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಪಾದಿಸುತ್ತಿದ್ದರು ಎಲ್ಲರೂ ಈ ವಿವೇಕ ನಡಿಗೆ ಕಾರ್ಯಕ್ರಮದಲ್ಲಿ ಹೊಸನಗರ ಮಂಡಲದ ಮಲ್ಲಿಕಾರ್ಜುನ್, ಶ್ರೀಧರ್ ಉಡುಪ, ಹಾಲ್ಗದ್ದೆ ಉಮೇಶ್, ಸುಧಾಕರ್, ಶ್ರೀಪತಿ ರಾವ್. ಯುವ ಮೋರ್ಚಾ ಅಧ್ಯಕ್ಷರಾದ ವಿಶ್ವನಾಥ್ ಗಂದರಳ್ಳಿ,, ಪ್ರಧಾನ ಕಾರ್ಯದರ್ಶಿಗಳಾದ ಅಂಕಿತ ಮಕೇರಿ, ಅಭಿಲಾಶ್ ಚಿಕ್ಕಮಣತಿ. ಸೋಶಿಯಲ್ ಮೀಡಿಯಾ ಗಗನ್ ಎಲ್ ಗುಡ್ಡೇಕಪ್ಪ ಯುವ ಮೋರ್ಚಾ ಅಧ್ಯಕ್ಷರಾದ ಮಹೇಂದರ್  ಹಾಗೂ ಪಕ್ಷದ ವಿವಿಧ ಜವಾಬ್ದಾರಿಯುತ ಕಾರ್ಯಕರ್ತರು ಉಪಸ್ಥಿತರಿದ್ದರು...

VIVEKANANDA JAYANTI..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading