
ಹೊಸನಗರ:ಕರ್ನಾಟಕ ಸರ್ಕಾರದ ಗೃಹ ಜ್ಯೋತಿ ಯೋಜನೆಯ, ಪಾರದರ್ಶಕತೆಗಾಗಿ ಮೆಸ್ಕಾಂ ಸಿಬ್ಬಂದಿಗಳು ಕಡ್ಡಾಯವಾಗಿ ಫಲಾನುಭವಿಗಳ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ ಆದ್ದರಿಂದ ಯಾವುದೇ ಫಲಾನುಭವಿಗಳಲ್ಲಿ ಗೊಂದಲಗಳು ಬೇಡ ಎಂದು ತಾಲೂಕು ಗ್ಯಾರಂಟಿಗಳು ಅಧ್ಯಕ್ಷ ಚಿದಂಬರ ಹೂವಿನ ಕೋಣೆ ತಿಳಿಸಿದರು.
ಈ ಕುರಿತಾಗಿ ಮೆಸ್ಕಾಂ ಕಛೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಜೋತಿ ಯೋಜನೆ ಯಥಸ್ಥಿತಿ ಮುಂದುವರೆಯಲಿದ್ದು ಯೋಜನೆಯ ದುರುಪಯೋಗವನ್ನು ತಡೆಯಲು ಅರ್ಹ ಫಲಾನುಭವಿಗಳಿಗೆ ಯೋಜನೆಯನ್ನು ತಲುಪಿಸುವ ಉದ್ದೇಶದಿಂದ ಈ ಪ್ರಕ್ರಿಯೆಯನ್ನು ಆರಂಭಿಸಿದ್ದು ಮೆಸ್ಕಾಂ ಅಧಿಕಾರಿಗಳು ಕಡ್ಡಾಯವಾಗಿ ಪ್ರತಿಯೊಬ್ಬ ಫಲಾನುಭವಿಗಳ ಮನೆಗೆ ಭೇಟಿ ನೀಡಿ ದಾಖಲೆಗಳನ್ನು ಸಂಗ್ರಹಿಸಿ ದ್ದಾರೆ ಎಂದು ತಿಳಿಸಿದರು.
ಅಲ್ಲದೆ ತಾಲೂಕಿನ ಕೆಲ ಭಾಗಗಳಲ್ಲಿ ನಿಯೋಜಿತ ಸಿಬ್ಬಂದಿಗಳು ಗ್ರಾಮಸ್ಥರನ್ನು ಒಂದೆಡೆ ಸೇರಿ ದಾಖಲೆಯನ್ನು ನೀಡುವಂತೆ ತಿಳಿಸಿರುವುದಾಗಿ ದೂರು ಬಂದಿದ್ದು ಈ ಬಗ್ಗೆ ಅಧಿಕಾರಿಗಳಿಗೆ ಸರ್ಕಾರದ ಆದೇಶದಂತೆ ಮನೆ ಮನೆಗೆ ತೆರಳಿ ಪರಿಷ್ಕರಣಿ ಕಾರ್ಯ ನಡೆಸುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಆದ್ದರಿಂದ ಫಲಾನುಭವಿಗಳು ಗೊಂದಲಕ್ಕೀಡಾಗದೆ ಪರಿಷ್ಕರಣೆಗೆ ಬೇಕಾದ ಅಗತ್ಯ ದಾಖಲೆಗಳನ್ನು ನೀಡಿ ಅಧಿಕಾರಿಗಳಿಗೆ ಸಹಕಾರವನ್ನು ನೀಡುವಂತೆ ಮನವಿಯನ್ನು ಮಾಡಿದರು.
ಬಳಿಕ ಮಾತನಾಡಿದ ಜಿಲ್ಲಾ ಗ್ಯಾರಂಟಿ ಅನುಸ್ತಾನ ಸಮಿತಿ ಸದಸ್ಯರಾದ ಅಮೀರ್ ಹಮ್ಜಾ ಗೃಹಜೋತಿ ಯೋಜನೆಯನ್ನು ಪಡೆಯಲು ಬಾಡಿಗೆ ಮನೆಯಲ್ಲಿ ವಾಸಿಸುವವರು ಯಾವುದೇ ರೀತಿಯ ಬಾಡಿಗೆ ಕರಾರು ಪತ್ರವನ್ನು ನೀಡುವ ಅವಶ್ಯಕತೆ ಇಲ್ಲ ಬದಲಿಗೆ ನಿಮ್ಮ ಮನೆಯ ಮಾಲೀಕರು ಹಾಗೂ ನಿಮ್ಮ ಸ್ವ ಇಚ್ಚ ಹೇಳಿಕೆಯನ್ನು ದಾಖಲೆಯಾಗಿ ಪರಿಗಣಿಸಲಾಗುವುದು ಜೊತೆಗೆ ಜಿಲ್ಲೆಯಲ್ಲಿ ಈಗಾಗಲೇ ಗೃಹ ಜ್ಯೋತಿ ಪರಿಷ್ಕರಣೆ ಶೇಕಡ 30ರಷ್ಟು ಮುಕ್ತಾಯಗೊಂಡಿದೆ ತಾಲೂಕಿನಲ್ಲಿ ಶೇಕಡ 25ರಷ್ಟು ಪೂರ್ಣಗೊಂಡಿದ್ದು ಇನ್ನು ಹೆಚ್ಚಿನ ಕಾಲಾವಕಾಶವಿದ್ದು ಯಾವುದೇ ಫಲಾನುಭವಿಗಳು ತರತುರಿಯ ಪರಿಷ್ಕರಣೆಗೆ ಮುಂದಾಗಿ ಗೊಂದಲ ಪಡುವ ಅವಶ್ಯಕತೆ ಇಲ್ಲ ಬದಲಿಗೆ ನಿಯೋಜಿತ ಸಿಬ್ಬಂದಿಗಳೇ ನಿಮ್ಮ ಮನೆಗೆ ಬಂದು ದಾಖಲೆಯನ್ನು ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ್, ಎಸ್ಓ ಮಾಯಣ್ಣ,ಸಂತೃಪ್ತಿ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು..
GUARANTEE SCHEME..
Discover more from Prasarana news
Subscribe to get the latest posts sent to your email.
