H M S:ಪ್ರತಿಷ್ಠಿತ ಹೊಸನಗರ ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಗಣೇಶ್ ಮಧುಕರ್ ಆಯ್ಕೆ…

ಹೊಸನಗರ: ತಾಲೂಕಿನ ಪ್ರತಿಷ್ಠಿತ ಅಖಿಲ ಭಾರತ ಹಿಂದೂ ಮಹಾಸಭಾ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಗಣೇಶ್ ಮಧುಕರ್ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ವಿನಾಯಕ ಶ್ರೇಷ್ಟಿ, ಕಾರ್ಯದರ್ಶಿಯಾಗಿ ಅನುಪ ಅರವಿಂದ್, ಪ್ರಧಾನ ಕೋಶಾಧಿಕಾರಿಯಾಗಿ ನಾಗರಾಜ್ ಅರ್, ಹಾಗೂ ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾಗಿ ಮಂಜುನಾಥ್ ಪೂಜಾರಿ ಮುಂದಿನ ಎರಡು ಅವಧಿಗೆ ಆಯ್ಕೆ ಮಾಡಲಾಗಿದೆ.
ಆಯ್ಕೆ ಪ್ರಕ್ರಿಯೆ ಬಳಿಕ ಮಾತನಾಡಿದ ಸಮಿತಿಯ ನೂತನ ಅಧ್ಯಕ್ಷ ಗಣೇಶ್ ಮದುಕರ್ ಸಮಾಜದ ಸಂಘಟನೆ, ಸೇವಾ ಕಾರ್ಯ, ಗೋಸೇವೆ, ವ್ಯಕ್ತಿತ್ವ ವಿಕಾಸದ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿರುವ ಹೊಸನಗರ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಸಮಿತಿ ಅವಕಾಶವನ್ನು ಮಾಡಿಕೊಟ್ಟಿದ್ದು ಸಮಿತಿಯ ಪ್ರತಿಯೊಬ್ಬ ಸದಸ್ಯ ನಗು ಧನ್ಯವಾದಗಳು ತಿಳಿಸುತ್ತೇನೆ   ಎಂದರು. ನಮ್ಮ ಸಮಿತಿ ಧಾರ್ಮಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಎಲ್ಲ ರಾಜಕೀಯ ಪಕ್ಷದ ಕಾರ್ಯಕರ್ತರು ಸಮಾಜದ ಎಲ್ಲಾ ಸಮುದಾಯದವರ ಜೊತೆಗೂಡಿ ಸಂಘಟಿತ ಸಮಾಜದ ಮೂಲಕ ಈ ಒಂದು ಧಾರ್ಮಿಕ ಕಾರ್ಯವನ್ನು ಯಶಸ್ವಿಗೊಳಿಸಿಕೊಡಲಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ರಮೇಶ್ ಹಲಸಿನ ಕಟ್ಟೆ, ರಾಧಾಕೃಷ್ಣ ಪೂಜಾರಿ, ಸುರೇಂದ್ರ ಕೋಟ್ಯಾನ್, ಆಟೋ ಪ್ರಶಾಂತ್, ಸಂತೋಷ್ ಶ್ರೀ ನಂದಿ, ವಿನಯ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

H M S..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading