
ಹೊಸನಗರ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಗಾಳಿ–ಮಳೆಗೆ ಹೊಸನಗರ ತಾಲೂಕಿನಾದ್ಯಂತ 170ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಹೊಸನಗರ ಜನತೆ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ.ರು ರಸ್ತೆ ಬದಿ ವಿದ್ಯುತ್ ಕಂಬದ ಮೇಲೆ ಭಾರಿ ಮರ ಉರುಳಿ ಬಿದ್ದು, ಕಂಬ ಮುರಿದಿದೆ. ಅಲ್ಲದೇ ಪಟ್ಟಣ ಸೇರಿ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ಜನರು ಕತ್ತಲಲ್ಲಿ ಕಾಲ ಕಳೆಯುತ್ತಿದ್ದಾರೆ. ಮೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿ ಕಂಬ ಬದಲಿಸುವ ಪ್ರಯತ್ನ ಮುಂದುವರಿಸಿದ್ದಾರೆ.
ಈಗಾಗಲೇ ವಿದ್ಯುತ್ ಕಂಬಗಳ ಮರುಜೋಡನೆ ಕಾರ್ಯ ಬರದಿಂದ ಸಾಗುತ್ತಿದ್ದು ಶೀಘ್ರ ವಿದ್ಯುತ್ ಸಂಪರ್ಕವನ್ನು ಒದಗಿಸುವುದಾಗಿ ಇಲಾಖೆ ತಿಳಿಸಿದೆ .
MESCOM..
Discover more from Prasarana news
Subscribe to get the latest posts sent to your email.
