INAUGURATION:ನಾಡು ಕಟ್ಟುವುದರಲ್ಲಿ ಕೆಂಪೇಗೌಡರ ದೂರದೃಷ್ಟಿ ಅಪಾರವಾದದ್ದು: ಪ್ರಸನ್ನನಾಥ ಸ್ವಾಮೀಜಿ.

ಹೊಸನಗರ:ನಾಡು ಕಟ್ಟುವುದರಲ್ಲಿ ನಾಡಪ್ರಭು ಕೆಂಪೇಗೌಡರ ಶ್ರಮ ಮತ್ತು ದೂರದೃಷ್ಟಿ ಅಪಾರವಾದುದು. ಅವರು ಹಾಕಿಕೊಟ್ಟ ಭದ್ರ ಬುನಾದಿಯೇ ಇಂದಿನ ಬೆಳೆಯುತ್ತಿರುವ ಬೆಂಗಳೂರು. ಅವರ ದೂರದೃಷ್ಟಿಯ ಆಡಳಿತ ಮತ್ತು ಜನಪರ ಕಾಳಜಿಯಿಂದಾಗಿ ಅವರನ್ನು ಇಂದಿಗೂ 'ಬೆಂಗಳೂರು ನಿರ್ಮಾಪಕ' ಎಂದು ಸ್ಮರಿಸಲಾಗುತ್ತದೆ ಎಂದು ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು.
ತಾಲೂಕು ಒಕ್ಕಲಿಗರ ಸಂಘ
ಏರ್ಪಡಿಸಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಹಾಗೂ ನವಿಕೃತ ಸಂಘದ ಕಚೇರಿ ಮತ್ತು ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು ಸಂಘ  ಬೆಳವಣಿಗೆಯಾಗಬೇಕಾದರೆ ಸಾಕಷ್ಟು ಅಡೆತಡೆಗಳು ಬರುವುದು ಸಹಜ ಅವೆಲ್ಲವನ್ನ ದಾಟಿ ಹೊಸನಗರ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಉಮೇಶ್ ಹಾಲಗದ್ದೆ ಮತ್ತು ಸದಸ್ಯರುಗಳು ಒಂದು ಉತ್ತಮವಾದ ಕಾರ್ಯವನ್ನ ಸಾಧಿಸಿದ್ದೀರಿ ಮುಂದೆಯೂ ಸಂಘವು ಇನ್ನಷ್ಟು ಅಭಿವೃದ್ಧಿ ಹೊಂದಲು ಸಮುದಾಯದ ಪ್ರತಿಯೊಬ್ಬರ ಸಲಹೆ ಸಾಕಾರ ಅಗತ್ಯವಾಗಿ ಬೇಕಿದೆ ಎಂದರು.


ಇದಕ್ಕೂ ಮೊದಲು ಮಾತನಾಡಿದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ  ಆರಗ ಜ್ಞಾನೇಂದ್ರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರ ವಿಶೇಷ ಶ್ರಮದಿಂದ ಸಂಘವು ಉತ್ತಮವಾದ ಬೆಳವಣಿಗೆಯನ್ನು ಹೊಂದುತ್ತಿದ್ದು ಅದಕ್ಕೆ ಉದಾಹರಣೆ ಎನ್ನುವುದಕ್ಕೆ ಈ ನವಿಕೃತ ಕಟ್ಟಡವೇ ಸಾಕ್ಷಿ. ಒಂದು ಸಮುದಾಯದ ಕಟ್ಟಡವನ್ನ ಕಡಿಮೆ ಸಮಯದಲ್ಲಿ ಇಷ್ಟೊಂದು ವ್ಯವಸ್ಥಿತವಾಗಿ ನಿರ್ಮಾಣ ಮಾಡಿರುವುದು ನಿಜಕ್ಕೂ ಸವಾಲಿನ ಕೆಲಸ ಎಂದರು ಅಲ್ಲದೆ ಶಾಸಕನಾಗಿ ಸಮುದಾಯದವನಾಗಿ ಈ ಸಂಘದ ಎಳಿಗೆಗೆ ನಿರಂತರವಾಗಿ ಸಹಕಾರವನ್ನು ನೀಡುವುದಾಗಿ ಅವರು ತಿಳಿಸಿದರು.
ಬಳಿಕ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನಾನು ತೀರ್ಥಹಳ್ಳಿಯ ಒಕ್ಕಲಿಗ ಸಂಘಕ್ಕು ಹೊಸನಗರದ ಒಕ್ಕಲಿಗ ಸಂಘಕ್ಕು ಸಹಕಾರವನ್ನು ನೀಡಿದ್ದೇನೆ ಈ ಹಿಂದೆ ನಾನು ಶಾಸಕನಾಗಿದಾಗ ಹೊಸನಗರ ಒಕ್ಕಲಿಗ ಸಂಘಕ್ಕೆ 5 ಲಕ್ಷ ಹಣವನ್ನು ದೇಣಿಗೆಯಾಗಿ ನೀಡಿದ್ದು ಅದು ಸಂಘದ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ತಿಳಿಸಿದರು ಮುಂದೆಯೂ ಸಹ ಸಂಘ ಹಾಗೂ ಸಮುದಾಯದ ಎಳಿಗೆಗೇ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಾಲಗದ್ದೆ ಉಮೇಶ್ ಮಾತನಾಡಿ ಸಂಘದ ಸರ್ವ ಸದಸ್ಯರ ಸಹಕಾರದಿಂದ ವ್ಯವಸ್ಥಿತವಾದ ಕಟ್ಟಡವನ್ನ ನಿರ್ಮಿಸಿಕೊಂಡಿದ್ದೇವೆ ಈ ಹಿಂದೆ ಸಮುದಾಯದ ಬಹಳಷ್ಟು ಪ್ರಮುಖರು ಸಮಾಜದ ಏಳಿಗೆಗೆ ದುಡಿದಿದ್ದು ಅವರ ಹಾದಿಯಲ್ಲಿ ನಾವು ಮುಂದುವರೆಯುತ್ತಿದ್ದೇವೆ ಇದಕ್ಕೆ ಹಾಲಿ ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಬಹಳಷ್ಟು ಸಹಕಾರವನ್ನು ನೀಡಿದ್ದು ಅವರ ಸಹಕಾರಕ್ಕೆ ಸಂಘವು ಸದಾ ಚಿರಋಣಿಯಾಗಿರುತ್ತದೆ ಅಲ್ಲದೆ ಈ ಸಂದರ್ಭದಲ್ಲಿ ಸಮುದಾಯದ ಪ್ರತಿಭಾನ್ವಿತ ಮಕ್ಕಳನ್ನ ಗುರುತಿಸಿ ಅವರನ್ನು ಗೌರವಿಸುತ್ತೇವೆ ಜೊತೆಗೆ ಸಂಘವನ್ನ ತಳ ಮಟ್ಟದಿಂದ ಅಭಿವೃದ್ಧಿಪಡಿಸಿ ಇಲ್ಲಿಯವರೆಗೆ ತಂದು ನಿಲ್ಲಲು ಸಹಕರಿಸಿದ ಸಮುದಾಯದ ಹಿರಿಯ ಮುಖಂಡರನ್ನು ಸಹ ಗೌರವಿಸುವುದು ನಮ್ಮ ಕರ್ತವ್ಯವಾಗಿದ್ದು ಆ ಒಂದು ಕಾರ್ಯವನ್ನ ಈ ದಿನ ನೆರವೇರಿಸಲಿದ್ದೇವೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ ಏನ್ ಜಯಶೀಲ ಗೌಡ ಮಾಜಿ ಅಧ್ಯಕ್ಷರಾದ ಪಟೇಲ್ ಗರುಡಪ್ಪ ಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ರಮೇಶ್ ಹೆಗಡೆ, ಸುದರ್ಶನ್ ತಾಯಿ ಮನೆ, ಎಚ್ ವಿ ರಾಮಪ್ಪಗೌಡ, ತಾಲೂಕು ಸಂಘದ ಪದಾಧಿಕಾರಿಗಳಾದ ರತ್ನಾಕರ್ ಕುಂಟಗೆ, ಅಂಕಿತ ಮಕೇರಿ, ಎಎನ್ ಆದಿರಾಜ್, ಐಸಿ ಪ್ರಕಾಶ್, ಕೆ ವೆಂಕಟೇಶ್ ಹೆಗಡೆ ಬಿಟಿ ಧರ್ಮಪ್ಪ ಗೌಡ, ವಾಟಗದ್ದೆ ದಿನೇಶ್, ಸುರೇಶ್ ಕೆಕೆ, ಪೂರ್ಣೇಶ್ ಮಲೆಬೈಲ್, ಶ್ರೀನಿವಾಸ್ ಎನ್ ಕೃಷ್ಣಮೂರ್ತಿ, ಪ್ರೀತಮ್ ಗೌಡ, ವೀಣಾ ಪುರುಷೋತ್ತಮ್ ಹಿಟಾಚಿ ಶ್ರೀಧರ್, ವಿಷ್ಣು ಕೃಷ್ಣಪ್ಪಗೌಡ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಕೆ ಶ್ರೀಪತಿ ಹಳಗುಂದ ಕಾರ್ಯಕ್ರಮವನ್ನು ನಿರ್ವಹಿಸಿದರು

INAUGURATION..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading