
ಹೊಸನಗರ: ಪಟ್ಟಣದ ಶ್ರೀರಾಮ್ ಫೈನಾನ್ಸ್ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮ ಬುಧವಾರ ನೆರವೇರಿತು.
ಸಂಸ್ಥೆಯ ಮಂಗಳೂರು ವಿಭಾಗದ ವಲಯ ವ್ಯವಹಾರಗಳ ಮುಖ್ಯಸ್ಥರಾದ ಶರತ್ಚಂದ್ರ ಭಟ್ ಕಚೇರಿ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು ಬಳಿಕ ಮಾತನಾಡಿದ ಅವರು ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಸೇವೆಯನ್ನು ನೀಡುವ ಉದ್ದೇಶದಿಂದ ಕಳೆದ 15 ವರ್ಷಗಳ ಹಿಂದೆ ಸಣ್ಣ ಕಚೇರಿಯಲ್ಲಿ ಪ್ರಾರಂಭವಾದ ಶ್ರೀ ರಾಮ್ ಫೈನಾನ್ಸ್ ಇದೀಗ ಗ್ರಾಹಕರಿಗೆ ಶೀಘ್ರ ಹಾಗೂ ಗುಣಮಟ್ಟದ ಸೇವೆಗಳನ್ನು ನೀಡುತ್ತಾ ತನ್ನ ವ್ಯವಹಾರ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ ಸಂಸ್ಥೆ ಕೇವಲ ಗ್ರಾಹಕ ಸೇವೆ ಮಾತ್ರವಲ್ಲದೆ ಸಂಸ್ಥಾಪಕ ತ್ಯಾಗರಾಜರ ಆಶಯದಂತೆ ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ ಈ ನಿಟ್ಟಿನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದ್ದು ಜಿಲ್ಲೆಯಲ್ಲಿ ಈ ಬಾರಿ 750 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವನ್ನು ಪಡೆದುಕೊಂಡಿತ್ತು ಅದರಲ್ಲಿ 35 ಪ್ರತಿಭಾನ್ವಿತ ವಿದ್ಯಾರ್ಥಿಗಳು ಹೊಸನಗರ ತಾಲೂಕಿನವರಾಗಿದ್ದಾರೆ.
ಜೊತೆಗೆ ಸಂಸ್ಥೆ ವಾಹನ ಸಾಲ, ವ್ಯವಹಾರ ಸಾಲ, ವೈಯಕ್ತಿಕ ಸಾಲ, ಯೋಜನೆಯನ್ನು ನೀಡುತ್ತಿದ್ದು ಇದೀಗ ಚಿನ್ನದ ಮೇಲಿನ ಸಾಲ ಹಂಚಿಕೆಗೆ ಯೋಜನೆಯನ್ನು ರೂಪಿಸಿದೆ ಹಾಗೆಯೇ ಸಂಸ್ಥೆ ಉತ್ತಮ ಸೇವೆಯನ್ನ ನೀಡುತ್ತಾ ಬಂದ ಹಿನ್ನೆಲೆ ಗ್ರಾಹಕರಿಂದ ಪ್ರಶಂಸೆಯನ್ನು ಪಡೆದಿದೆ ಇದಕ್ಕೆಲ್ಲ ಸಂಸ್ಥೆಯಲ್ಲಿ ಶ್ರಮಪಟ್ಟು ಕೆಲಸವನ್ನು ನಿರ್ವಹಿಸುತ್ತಿರುವ ಸಿಬ್ಬಂದಿಗಳು ಸಹಕಾರ ಈ ಸಂಸ್ಥೆಗೆ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಈ ಸಂದರ್ಭದಲ್ಲಿ ಝೋನಲ್ ಕಲೆಕ್ಷನ್ ಹೆಡ್ ಬಿ. ನಾಗರಾಜ್, ಝೋನಲ್ ಸೇಲ್ಸ್ ಹೆಡ್ ಸದಾಶಿವ ಪೂಜಾರಿ, ರಿಜನಲ್ ಬಿಝೆನೆಸ್ಸ್ ಹೆಡ್ ಜಾರ್ಜ್ ಡಿ’ಸೋಜಾ, ರೀಜನಲ್ ಕಲೆಕ್ಷೆನ್ ಹೆಡ್ ಯೋಗಿಶ್ ಎಂ.ಆರ್, ಶಾಖಾ ವ್ಯವಸ್ಥಾಪಕ ಶ್ರೀಕಾಂತ್ ಸೇರಿದಂತೆ ವಿವಿಧ ಸಂಸ್ಥೆಗಳ ವಾಹನ ಡೀಲರ್‌ಗಳು ಹಾಗು ಸಂಸ್ಥೆಯ ಹಲವು ಸಿಬ್ಬಂದಿಗಳು ಇದ್ದರು.
SHRIRAM FINANCE.
Discover more from Prasarana news
Subscribe to get the latest posts sent to your email.
