CHAIN SNATCHING: ಹೊಸನಗರ:ಸರಗಳ್ಳತನ ಕೇಸ್: ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳು ಅಂದರ್..

ಹೊಸನಗರ: ಮಾಂಗಲ್ಯ ಸರ ಕಳ್ಳತನವಾದ ಕೆಲವೇ ಗಂಟೆಗಳಲ್ಲಿ  ಪ್ರಕರಣವನ್ನು ಬೇದಿಸಿ ಆರೋಪಿಗಳನ್ನ ಬಂಧಿಸುವಲ್ಲಿ ಹೊಸನಗರ ಪೊಲೀಸರು ಯಶಸ್ವಿಯಾದ ಘಟನೆ ಮಂಗಳವಾರ ನಡೆದಿದ್ದು ತಾಲೂಕಿನ ಸೋನಲೆ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಸುಮಾರು 7 ಗಂಟೆ ಸಮಯ. ಗಾಯತ್ರಿ ಎಂಬುವವರ ಮನೆಯ ಬಾಗಿಲು ಬಡಿದ ಇಬ್ಬರು ಅಪರಿಚಿತರು, ಕುಡಿಯಲು ನೀರು ಬೇಕೆಂದು ಕೇಳಿದ್ದಾರೆ. ಮುಗ್ಧರಾಗಿ ನಂಬಿ ನೀರು ಕೊಡಲು ಹೋದ ಮಹಿಳೆಯ ಕುತ್ತಿಗೆಯಲ್ಲಿದ್ದ 13 ಗ್ರಾಂ ತೂಕದ ಚಿನ್ನದ ಸರವನ್ನು ಕ್ಷಣಾರ್ಧದಲ್ಲಿ ದೋಚಿದ ದುಷ್ಕರ್ಮಿಗಳು, ಬೈಕ್ ಏರಿ ಸ್ಥಳದಿಂದ ಪರಾರಿಯಾಗಿದ್ದಾರೆ.ಘಟನೆ ನಡೆದ ತಕ್ಷಣ ಎಚ್ಚೆತ್ತ ಕುಟುಂಬಸ್ಥರು 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಹೊಸನಗರ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.
ಸರ್ಕಲ್ ಇನ್ಸ್‌ಪೆಕ್ಟರ್ ಗೌಡಪ್ಪ ಗೌಡರ್ ಮತ್ತು ಸಬ್ ಇನ್ಸ್‌ಪೆಕ್ಟರ್ ಶಂಕರಗೌಡ ಪಾಟೀಲ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಯಿತು.
ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು ಅವರು ಪರಾರಿಯಾದ ಮಾರ್ಗವನ್ನು ಬೆನ್ನಟ್ಟಿದ್ದಾರೆ. ತನಿಖೆಯ ಫಲವಾಗಿ, ಸೊನಲೆಯಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿರುವ ತಟ್ಟಿಕೆವಿ ಗ್ರಾಮದ ನೂತನವಾಗಿ ನಿರ್ಮಾಣವಾಗುತ್ತಿದ್ದ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಆರೋಪಿಗಳನ್ನ ಮಹಮ್ಮದ್ ಗೌಸಿಫ್ (33): ಉಡುಪಿ ಜಿಲ್ಲೆ , ರೋಷನ್ (44) ಮಂಗಳೂರು ಜಿಲ್ಲೆ ಎಂದು ಗುರುತಿಸಲಾಗಿದೆ.
ಇಬ್ಬರೂ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಈ ಕಾರ್ಯಚರಣೆಯಲ್ಲಿ ಸಿಬ್ಬಂದಿಗಳಾದ ಗಿರಿಪ್ರಸಾದ್, ಶಿವಕುಮಾರ್ ನಾಯ್ಕ, ಸಂದೀಪ್ ವೈ.ಎಸ್.ಉಮೇಶ್, ಮಹೇಶ್,ಮಾಯಪ್ಪ ಗೋಕಾವಿ,ಗಂಗಪ್ಪ ಬಟೋಲಿ.ಸುನಿಲ್ ಗೌಡೂರ್.ಸುನಿಲ್ ಕಟ್ಟಿ,ಗೋಪಾಲಕೃಷ್ಣ, ಚಾಲಕರಾದ ಜೈ ಜಗದೀಶ್, ಮಧುಸೂಧನ್ ಪಾಲ್ಗೊಂಡಿದ್ದರು.

CHAIN SNATCHING..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading