TEMPLE:ಹೊಸನಗರ: ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ ನಿಧಿಕುಂಭ ಸ್ಥಾಪನೆ ಕಾರ್ಯಕ್ರಮ.

ಹೊಸನಗರ: ಪಟ್ಟಣದ ಗಂಗನಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾವಿನ ಕೊಪ್ಪದಲ್ಲಿ 3 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ ಶ್ರೀ ಗಂಗಾಧರೇಶ್ವರ ದೇವರಿಗೆ ನಿಧಿಕುಂಭ ಸ್ಥಾಪನೆ ಕಾರ್ಯಕ್ರಮವನ್ನು ದಿನಾಂಕ 12-07-2026 ರ ಬೆಳಿಗ್ಗೆ 11:30 ರಿಂದ ಏರ್ಪಡಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷರಾದ ಪ್ರವೀಣ್ ಬೃಂದಾವನ ತಿಳಿಸಿದ್ದಾರೆ.
ಈ ಕುರಿತಾಗಿ ಮಾತನಾಡಿದ ಅವರು ಈ ಒಂದು ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತಾದಿಗಳು ಚಿನ್ನ ಬೆಳ್ಳಿ ರತ್ನಗಳನ್ನು ಸಮರ್ಥಿಸಲು ಅವಕಾಶವಿದ್ದು ಈ ಸೇವಾ ಕಾರ್ಯ ದಿನಾಂಕ 11-07-2026 ರ ಬೆಳಿಗ್ಗೆ 9:00 ಆರಂಭವಾಗಲಿದೆ ಎಂದು ತಿಳಿಸಿದರು.
ಈ ದೇವಸ್ಥಾನದ ಜೀವಾಧಾರ ಕಾರ್ಯದಲ್ಲಿ ಭಕ್ತಾದಿಗಳು ಭಕ್ತಿ ಮತ್ತು ಶ್ರದ್ಧೆಯಿಂದ ಕೈಜೋಡಿಸಿ ಪುಣ್ಯಕ್ಷೇತ್ರದ ಜೀರ್ಣೋದ್ಧಾರದಲ್ಲಿ ಸಹಕರಿಸಬೇಕೆಂದು ಅವರು ಮನವಿಯನ್ನು ಮಾಡಿದರು ಅಲ್ಲದೆ ಈ ಒಂದು ಕಾರ್ಯಕ್ರಮಕ್ಕೆ ಬೆಳ್ಳಿ ನಾಣ್ಯವನ್ನು ಸಮರ್ಪಿಸುವವರು ದೇವಸ್ಥಾನ ಸಮಿತಿಯಲ್ಲಿ 600 ರೂಗಳನ್ನು ನೀಡಿ ರಶೀದಿ ಪಡೆದುಕೊಳ್ಳಬಹುದು ಜೊತೆಗೆ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಉದರ ಧನ ಸಹಾಯವನ್ನು ನೀಡುವವರು ಕೆಳಗೆ ನೀಡಿರುವ ಕ್ಯೂಆರ್ ಕೋಡ್ ಮೂಲಕವಾಗಿ ನೂತನ ಶಿಲಾಮಯ ದೇವಸ್ಥಾನಕ್ಕೆ ದೇಣಿಗೆಯನ್ನು ನೀಡಬಹುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ನಾಗರಾಜ್ ಕಾಮತ್, ಗಣೇಶ್, ರಘು, ಗೌತಮ್ ರಾಜ್, ಗಣಪತಿ, ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

TEMPLE..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading