HALASU MELA:ಸಹಕಾರಿ ಸಂಘಗಳು ಗುಣಮಟ್ಟದ ಕಾರ್ಯಕ್ರಮಕ್ಕೆ ಹೆಚ್ಚು ಒತ್ತನ ನೀಡುತ್ತದೆ:ವಿನಯ್ ಕುಮಾರ್.

ಹೊಸನಗರ: ಯಾವುದೇ ಸಹಕಾರಿ ಸಂಘಗಳು ಗುಣಮಟ್ಟದ ಕಾರ್ಯಕ್ರಮ ಆಯೋಜನೆಗೆ ಹೆಚ್ಚು  ಒತ್ತನ್ನು ನೀಡುತ್ತದೆ ಈ ಮೂಲಕ ರೈತರಿಗೆ ಜನಸಾಮಾನ್ಯರಿಗೆ ಅನುಕೂಲವಾಗುವ ಕಾರ್ಯಕ್ರಮವನ್ನು ಆಯೋಜಿಸುತ್ತದೆ ಎಂದು ಕಳುರೂ ಶ್ರೀ ರಾಮೇಶ್ವರ ಸಹಕಾರ ಸಂಘದ ಅಧ್ಯಕ್ಷರಾದ ವಿನಯ್ ಕುಮಾರ್ ತಿಳಿಸಿದರು.
ಸಂಘದ ವಜ್ರ ಮಹೋತ್ಸವ ಕಟ್ಟಡದಲ್ಲಿ ಮೂರು ದಿನಗಳ ಕಾಲ ಆಯೋಜನೆಗೊಂಡಿದ್ದ ಹಲಸು ಹಾಗೂ ಆಹಾರಮೇಳದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ ಹಲಸು ಹಾಗೂ ಆಹಾರಮೇಳ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದ್ದು ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿ ರೈತ ಬಾಂಧವರು ಸಾರ್ವಜನಿಕರು ಪಾಲ್ಗೊಂಡಿದ್ದು ಆಯೋಜಕರಿಗೆ ಇದು ತೃಪ್ತಿಯನ್ನ ತಂದಿದೆ ಎಂದು ಅವರು ತಿಳಿಸಿದರು.
ಈ ಒಂದು ಮೇಳದಲ್ಲಿ ನಮ್ಮ ಉದ್ದೇಶದಂತೆ ನಿರೀಕ್ಷೆಗೂ ಮೀರಿದಂತ ವಿವಿಧ ಜಾತಿಯ ಹಣ್ಣುಗಳ ಗಿಡಗಳು ಮಾರಾಟವಾಗಿದ್ದು ಪರಿಸರ ಅಭಿವೃದ್ಧಿಗೆ ಈ ಹಲಸು ಮತ್ತು ಆಹಾರ ಮೇಳ ಪೂರಕವಾಗಿದೆ ಎಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಕಾರ್ಯಕ್ರಮಕ್ಕೆ ರಾಜರತ್ನ ಇವೆಂಟ್ಸ್ ಹಾಗೂ ಜನಸ್ನೇಹಿ ಂಸೆ ಸಹಯೋಗದಲ್ಲಿ  ತಾಲೂಕಿನ ವಿವಿಧ ಸಹಕಾರಿ ಸಂಸ್ಥೆಗಳು ಸಂಘ-ಸಂಸ್ಥೆಗಳು ಉತ್ತಮವಾದ ಸಹಕಾರವನ್ನು ನೀಡಿದ್ದು ಕಾರ್ಯಕ್ರಮದ ಯಶಸ್ವಿಗೆ ಇನ್ನೊಂದು ಪೂರಕ ಅಂಶವಾಗಿದೆ ಈ ಕಾರ್ಯಕ್ರಮದ ಯಶಸ್ಸು ಮುಂದಿನ ದಿನಗಳಲ್ಲಿ ಇನ್ನು ಇಂತಹ ದೊಡ್ಡ ಪ್ರಮಾಣದಲ್ಲಿ ರೈತರಿಗೆ ಅನುಕೂಲವಾಗುವಂತಹ ಕಾರ್ಯಕ್ರಮವನ್ನು ಆಯೋಜಿಸಲು ಉತ್ತೇಜನವನ್ನು ನೀಡಿದೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕಿನ ವಿವಿಧ ಕೃಷಿಕರನ್ನು ಸನ್ಮಾನಿಸಲಾಯಿತು ಸಮಾರೋಪ ಸಮಾರಂಭದಲ್ಲಿ ಪ್ರಮುಖರಾದ ವಾಟಗೋಡು ಸುರೇಶ್, ದೇವಾನಂದ್, ಘರ್ತಿಕೆರೆ ರಾಘವೇಂದ್ರ, ಪೂರ್ಣೇಶ್ ಮಲೆಬೈಲ್, ಮುಂತಾದವರು ಉಪಸ್ಥಿತರಿದ್ದರು.

HALASU MELA..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading