
ಹೊಸನಗರ:ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಭಾಗವಾಗಿ ಹೊಸನಗರ ಪೊಲೀಸ್ ಠಾಣ ವೃತ ನಿರೀಕ್ಷಕರದ ಮುತ್ತನಗೌಡ ಹಾಗೂ ಪಿಎಸ್ಐ ಶಂಕರ್ ಗೌಡ ಪಾಟೀಲ್ ಹೊಸನಗರ ಠಾಣಾ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ನಿವಾಸಿಗಳಿಗೆ ಕಾರ್ಯಕ್ರಮದ ಮಾಹಿತಿ ನೀಡಿದರು..
ಅಧಿಕಾರಿಗಳು ಮನೆ ಮನೆಗೆ ತೆರಳಿ ಕರಪತ್ರಗಳನ್ನು ಹಂಚಿದರು.ಹಾಗೆಯೇ ವೃತ್ತ ನಿರೀಕ್ಷಕರಾದ ಮುತ್ತನ ಗೌಡ ಸಾರ್ವಜನಿಕರಿಗೆ ಮಾತನಾಡಿ ನಿಮ್ಮ ನೆರೆಹೊರೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದ್ದರೆ ಅಥವಾ ಮಕ್ಕಳಿಗೆ ತೊಂದರೆಯಾಗುತ್ತಿದ್ದರೆ, ಆ ಮಾಹಿತಿಗಳನ್ನು ಪೊಲೀಸರ ಬಳಿ ಹಂಚಿಕೊಳ್ಳಬಹುದು ಜೊತೆಗೆ ಯಾವುದೇ ತುರ್ತು ಸಂದರ್ಭಗಳಲ್ಲಿ ನೀವು ಪೊಲೀಸ್ ಇಲಾಖೆ ಸಹಾಯವನ್ನು ಪಡೆಯಬಹುದು ಈ ಸಂದರ್ಭದಲ್ಲಿ ಅವರು ತಿಳಿಸಿದರು.
ಹಾಗೆಯೇ ಜನರೊಂದಿಗೆ ಸಮನ್ವಯ ಸಾಧಿಸಲು ಇದೊಂದು ಉತ್ತಮ ಕಾರ್ಯಕ್ರಮವಾಗಿದೆ. ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಇರುವ ಅಭಿಪ್ರಾಯವನ್ನು ಉತ್ತಮಗೊಳಿಸಲು ಈ ಕಾರ್ಯಕ್ರಮ ಅನುಕೂಲವಾಗಿದೆ’ ಜನ ಸಾಮಾನ್ಯರು ಕಷ್ಟದ ಸಮಯದಲ್ಲಿ ಬಳಸಬಹುದಾದ ತುರ್ತು ಕರೆಗಳ ಬಗ್ಗೆಯು ಈ ಸಂದರ್ಭದಲ್ಲಿ ನಿವಾಸಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಬದಲ್ಲಿ ಪೊಲೀಸ್ ಸಿಬ್ಬಂದಿಯಾದ ವೀರೇಶ್ ಹಾಜರಿದ್ದರು..
HOSANAGARA POLICE.
Discover more from Prasarana news
Subscribe to get the latest posts sent to your email.
