
ಹೊಸನಗರ; ಕ್ಷೇತ್ರದ ಜನಪ್ರಿಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರ ವಿರುದ್ಧ ಸುಳ್ಳು ಆರೋಪ ಮಾಡುವ ಮೊದಲು ಎಚ್ಚರವಿರಲಿ ಇಲ್ಲವಾದಲ್ಲಿ ಹರತಾಳು ಹಾಲಪ್ಪ ವಿರುದ್ಧ ಕಾಂಗ್ರೆಸ್ ಪಕ್ಷ ಪ್ರತಿಭಟಿಸಲಿದೆ ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿಜಿ ಚಂದ್ರಮೌಳಿ ತಿಳಿಸಿದರು.
ಭಾನುವಾರ ಹೊಸನಗರ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಶನಿವಾರ ಮಾಜಿ ಶಾಸಕರಾದ ಹರತಾಳು ಹಾಲಪ್ಪನವರ ನೇತೃತ್ವದಲ್ಲಿ ಬಿಜೆಪಿ ಒಂದಿಷ್ಟು ಸುಳ್ಳು ಆರೋಪಗಳನ್ನ ಮಾಡಿ ನಮ್ಮ ಶಾಸಕರಾದ ಗೋಪಾಲಕೃಷ್ಣ ಬೇಳೂರು ಹಾಗೂ ಪಕ್ಷದ ಕೆಲ ಮುಖಂಡರ ಬಗ್ಗೆ ಕೀಳು ಮಠದ ಹೇಳಿಕೆಗಳನ್ನು ನೀಡಿ ಪ್ರತಿಭಟನೆಯನ್ನು ಮಾಡಿದರು
ಕ್ಷೇತ್ರದಲ್ಲಿ ಶಾಸಕರಿಂದ ದಬ್ಬಾಳಿಕೆ ನಡೆಯುತ್ತಿದೆ, ಅಧಿಕಾರಿಗಳು ಅವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಅಲ್ಲದೆ ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತವಾಗಿದೆ ಎಂಬ ಸುಳ್ಳು ಆರೋಪಗಳನ್ನ ಮಾಜಿ ಶಾಸಕರು ಮಾಡಿದ್ದಾರೆ.
ಆರೋಪ ಮಾಡುವ ಮೊದಲು ಮಾಹಿತಿಯನ್ನು ಪಡೆದುಕೊಳ್ಳಿ ಕ್ಷೇತ್ರದಲ್ಲಿ ಇವರಿಗೆ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯಗಳು ನಡೆದಿವೆ ಈಗಾಗಲೇ 30 ಕಿಮಿ ಸಂಪರ್ಕ ರಸ್ತೆಗಳಿಗೆ ಟೆಂಡರ್ ಪ್ರಕ್ರಿಯೆ ನಡೆದಿದೆ ಇತಿಹಾಸದಲ್ಲಿಯೇ ಮೊದಲು ಎಂಬಂತೆ 234 ಕಾಲು ಸಂಕವನ್ನು ಕ್ಷೇತ್ರಕ್ಕೆ ನಮ್ಮ ಶಾಸಕರು ತಂದಿದ್ದಾರೆ ಮುಖ್ಯರಸ್ತೆಯ ಕಾಮಗಾರಿಯ ಟೆಂಡರ್ ಸಹ ಕರಿಯಲಾಗಿದೆ ಆದರೆ ಮಳೆ ಕಾರಣದಿಂದಾಗಿ ರಸ್ತೆ ಕಾಮಗಾರಿಗಳು ಮಾಡಿಲ್ಲ ಡಿಸೆಂಬರ್ ಒಳಗಾಗಿ ಅವುಗಳನ್ನ ಮುಗಿಸಲಿದ್ದಾರೆ ಅಲ್ಲದೆ ಯಾವೊಬ್ಬ ಅಧಿಕಾರಿಯೂ ಅವರ ಕೈಗೊಂಬೆಯಂತೆ ವರ್ತಿಸುತ್ತಿಲ್ಲ ಕಾನೂನುಡಿಯಲ್ಲಿ ಕಾನೂನಿನ ಮೂಲಕವಾಗಿ ಅಧಿಕಾರಿಗಳು ಕಾರ್ಯವನ್ನ ನಿರ್ವಹಿಸುತ್ತಿದ್ದಾರೆ ನಿಮ್ಮ ಅವಧಿಯಲ್ಲಿ ಹಿರಿಯ ಅಧಿಕಾರಿಗಳಿಗೆ ಏಕವಚನದಲ್ಲಿ ಮಾತನಾಡಿಸುತ್ತಿದ್ದ ನೀವು ಈಗ ನಮ್ಮ ಶಾಸಕರಿಗೆ ಮಾತನಾಡುತ್ತಿದ್ದೀರಿ ಎಂದರು ದಬ್ಬಾಳಿಕೆ ಪದವನ್ನು ಬಳಸಿರುವ ಮಾಜಿ ಶಾಸಕರ ಇತಿಹಾಸವನ್ನು ತೆಗೆದರೆ ಹಿಂದೆ ಸಾಗರ ಕಾಲೇಜಿನಲ್ಲಿ ನಡೆದ ಗಲಾಟೆ ಹಾಗೂ ಹೊಸನಗರ ತಾಲೂಕು ಪಂಚಾಯತಿಯ ಚುನಾವಣೆಯ ಸಂದರ್ಭದಲ್ಲಿ ರೌಡಿಗಳನ್ನು ಕರೆಸಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆಯನ್ನು ನಡೆಸಿದ್ದು ಇವೆಲ್ಲವೂ ಇಂದಿಗೂ ಜನರು ಮರೆತಿಲ್ಲ ಎಂದರು.
ಹಾಗೆಯೇ ಶಾಸಕರಾದ ಆಪ್ತ ಕಾರ್ಯದರ್ಶಿ ಸಣಕ್ಕಿ ಮಂಜು ಅವರು ತಾಲೂಕು ದಂಡಾಧಿಕಾರಿಗಳು ಕೋರ್ಟನ ನಡೆಸುವಾಗ ಇವರಲ್ಲಿ ಕುಳಿತಿದ್ದರು ಎಂಬ ನಿಮ್ಮ ಆರೋಪ ನಿಜವಾದರೆ ಅದಕ್ಕೆ ದಾಖಲೆಗಳನ್ನು ಕೊಡಿ
ಹಾಗೆಯೇ ಒಬ್ಬ ಅಧಿಕಾರಿ ಹಲವು ಇಲಾಖೆಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳುವ ನೀವು ನಿಮ್ಮ ಅಧಿಕಾರ ಅವಧಿಯಲ್ಲಿ ಈ ರೀತಿ ಆಗಿರಲಿಲ್ಲವೇ ಪಶುಸಂಗೋಪನ ಇಲಾಖೆಯ ಅಧಿಕಾರಿಯೊಬ್ಬರು ತಾಲೂಕ್ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ನಿಮ್ಮ ಅವಧಿಯಲ್ಲಿ ಅಲ್ಲವೇ.
ವಿನಾಕಾರಣ ಆರೋಪ ಮಾಡುವ ಮೊದಲು ನಿಮ್ಮ ಹಿಂಬಾಲಕರಿಂದ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ ನಮ್ಮ ಶಾಸಕರು ಪಕ್ಷಬೇಧವಿಲ್ಲದೆ ಜಾತಿ ಧರ್ಮಗಳಲ್ಲದೆ ಎಲ್ಲರ ಜೊತೆಯಲ್ಲೂ ಸಮಾನವಾಗಿ ನಡೆದುಕೊಳ್ಳುತ್ತಿದ್ದಾರೆ ಕಷ್ಟದಲ್ಲಿರುವವರಿಗೆ ಕೈಲಾದ ಸಹಾಯವನ್ನು ಮಾಡಿದ್ದಾರೆ ಇವೆಲ್ಲವನ್ನ ಮಾಡಿದ ಕಾರಣಕ್ಕೆ ಜನರು ಅವರನ್ನು ಇಂದು ಶಾಸಕರನ್ನಾಗಿ ಮಾಡಿದ್ದು ನಿಮ್ಮನ್ನ ಕ್ಷೇತ್ರದಿಂದ ಹೊರಕಳಿಸಿದ್ದಾರೆ ಅವರ ಏಳಿಗೆಯನ್ನು ಜನಪ್ರಿಯತೆಯನ್ನು ಸಹಿಸಲು ಸಾಧ್ಯವಾಗದ ನಿಮಗೆ ಈ ರೀತಿಯ ಅಪಪ್ರಚಾರ ಬಿಟ್ಟು ಬೇರೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು ಅಲ್ಲದೆ ಈ ರೀತಿಯ ಸುಳ್ಳು ಆರೋಪಗಳು ಮತ್ತೆ ಮರುಕಳಿಸಿದರೆ ನಿಮ್ಮ ವಿರುದ್ಧ ಪ್ರತಿಭಟನೆಯನ್ನು ಮಾಡುವುದಾಗಿ ಮಾಜಿ ಶಾಸಕ ಹರತಾಳು ಹಾಲಪ್ಪ ಹಾಗೂ ಅವರ ಹಿಂಬಾಲಕರಿಗೆ ಎಚ್ಚರಿಕೆಯನ್ನು ನೀಡಿದರು ಈ ಪತ್ರಿಕಾಗೋಷ್ಠಿಯಿಂದ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಚಿದಂಬರ್ ಹೂವಿನ ಕೋಣೆ, ಈಶ್ವರಪ್ಪ ಗೌಡ, ಎಂಪಿ ಸುರೇಶ್, ಸದಾಶಿವ ಶೆಟ್ಟಿ, ವಿನಯ್ ಕುಮಾರ್ ದುಮ್ಮ,ಮಂಜು ಸುಣ್ಣಕ್ಕಿ ಅಣ್ಣಪ್ಪ, ಇಂದ್ರೇಶ್,ಗಣಪತಿ, ಗುರು ಜಯನಗರ, ಊಬೇದ್ ಮುಂತಾದವರು ಉಪಸ್ಥಿತರಿದ್ದರು.
HOSANAGARA CONGRESS..
