KODACHADRI COLLEGE: ಶಿಕ್ಷಣಕ್ಕೆ ಪೂರಕ ವಾತಾವರಣವನ್ನು ಕಲ್ಪಿಸುವೆ: ಗೋಪಾಲಕೃಷ್ಣ ಬೇಳೂರು..

ಹೊಸನಗರ: ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳಿಗೆ  ಸುಸಜ್ಜಿತ ಕಟ್ಟಡ ಹಾಗೂ ಕಲಿಕೆಗೆ 'ಪೂರಕ ವಾತಾವರಣ ಒದಗಿಸುವುದು ನನ್ನ ಉದ್ದೇಶ ನಾನೆಂದಿಗೂ ಶಿಕ್ಷಣಕ್ಕೆ ಮೊದಲ ಆದ್ಯತೆಯನ್ನು ನೀಡುತ್ತೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು
ಹೊಸನಗರ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನೂತನ ಗ್ರಂಥಾಲಯ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ  ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಯೋಜನೆ ಅಡಿ ಅನುದಾನಗಳನ್ನು ತಂದು ಕಂಪ್ಯೂಟರ್ ಲ್ಯಾಬ್, ಕಟ್ಟಡ ನವೀಕರಣ, ಸಭಾಂಗಣ ನಿರ್ಮಾಣ, ಕಾಮಗಾರಿಯನ್ನು ಪೂರ್ಣಗೊಳಿಸಿದ್ದು ಇದೀಗ ಸುಮಾರು 2 ಕೋಟಿ ಅನುದಾನದಲ್ಲಿ ಗ್ರಂಥಾಲಯ ಕಟ್ಟಡ ಶಂಕುಸ್ಥಾಪನೆಯನ್ನು ನೆರವೇರಿಸಿದ್ದೇನೆ ಅಲ್ಲದೆ ಕಾಲೇಜಿಗೆ ಶೇಕಡ 90ರಷ್ಟು ಅಗತ್ಯ ಸೌಲಭ್ಯವನ್ನು ಮಾಡಿಕೊಟ್ಟಿದ್ದೇನೆ ಎಂದರು.

ಕಾಲೇಜುಗಳಲ್ಲಿ ಶಿಕ್ಷಣಕ್ಕೆ ಪೂರಕವಾದಂತಹ ವಾತಾವರಣ ನಿರ್ಮಾಣವಾದರೆ ಮಾತ್ರ ಪೋಷಕರು ಮಕ್ಕಳನ್ನು ಅ ವಿದ್ಯಾ ಸಂಸ್ಥೆಗೆ ಕಳಿಸುತ್ತಾರೆ ಈ ನಿಟ್ಟಿನಲ್ಲಿ ಹೊಸನಗರ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತ್ಯಂತ ವ್ಯವಸ್ಥಿತವಾದ ವಾತಾವರಣವನ್ನು ಹೊಂದಿದೆ ಜೊತೆಗೆ ಶೀಘ್ರವಾಗಿ ಕಾಲೇಜು ಕಟ್ಟಡಕ್ಕೆ ಬಣ್ಣವನ್ನು ಹೆಚ್ಚುವ ಕೆಲಸ ಆರಂಭವಾಗಲಿದ್ದು ವಿದ್ಯಾರ್ಥಿಗಳು ಯಾವುದೇ ಕೊರತೆ ಇಲ್ಲದೆ ಶಿಕ್ಷಣವನ್ನ ಈ ಕಾಲೇಜಿನಲ್ಲಿ ಪೂರೈಸಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಉಮೇಶ್,
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಜಿ ಎನ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಚಿದಂಬರ್ ಹೂವಿನ ಕೋಣೆ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಮಾಸ್ತಿ ಕಟ್ಟೆ, ಗ್ರಾಮ ಪಂಚಾಯತ್ ಸದಸ್ಯ ಮಹೇಂದ್ರ,ಸುದೀಪ್, ಮುಖಂಡರಾದ ಸದಾಶಿವ, ಲೋಕೇಶಪ್ಪ, ಮುಂತಾದವರು ಉಪಸ್ಥಿತರಿದ್ದರು.

KODACHADRI COLLEGE.


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading