
ಹೊಸನಗರ: ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿ ಪೂಜೆಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಸೋಮವಾರ ನೆರವೇರಿಸಿದರು.
ಹೊಸನಗರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ಯೋಜನೆ ಅಡಿ ನಿರ್ಮಾಣವಾದ ನೂತನ ಕೊಠಡಿಗಳನ್ನು ಹಾಗೆಯೇ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 9ನೇ ವಾರ್ಡ್ ನ ಮಸೀದಿ ರಸ್ತೆ ಮುಂಭಾಗದಿಂದ ಕಾಳಿಕಾಪುರ ಹೋಗುವ ರಸ್ತೆಯವರೆಗೆ ಸರಿಸುಮಾರು 20 ಲಕ್ಷ ಅನುದಾನದ ಕಾಂಕ್ರೀಟ್ ರಸ್ತೆ ಕಾಮಗಾರಿ ಭೂಮಿ ಪೂಜೆಯನ್ನು ಜೊತೆಗೆ ನಗರೂತ್ತಾನ ಯೋಜನೆ ಅಡಿ ಒಟ್ಟೂರು ಕೆರೆಯ ಹೈ ಮಾಸ್ಕ ವಿದ್ಯುತ್ ದೀಪಗಳ ಉದ್ಘಾಟನೆಯನ್ನು ನೆರವೇರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಿದ್ದು ಹೊಸನಗರಕ್ಕೆ ಹೊಸತನವನ್ನು ನೀಡುವ ಉದ್ದೇಶವನ್ನು ಹೊಂದಿದ್ದೇನೆ ಈಗಾಗಲೇ ಖಾಸಗಿ ಬಸ್ ನಿಲ್ದಾಣ ನವೀಕರಣ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಸ್ತೆ ಕಾಮಗಾರಿಗಳು ಫುಡ್ ಕೋರ್ಟ್ ಅಲ್ಲದೆ ವಿವಿಧ ಕಾಮಗಾರಿಗಳಿಗೆ ಅನುದಾನವನ್ನ ತಂದಿದ್ದು ಈಗಾಗಲೇ ಬಹಳಷ್ಟು ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿದ್ದೇನೆ ಇನ್ನಷ್ಟು ಕಾಮಗಾರಿಗಳು ಶೀಘ್ರ ಆರಂಭವಾಗಲಿದ್ದು ಹೊಸನಗರದ ಸಂಪೂರ್ಣ ಅಭಿವೃದ್ಧಿಗೆ ನಾನು ಬದ್ಧನಿದ್ದೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು..ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕಲಗೋಡು ರತ್ನಾಕರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ್ ಹೂವಿನ ಕೋಣೆ, ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ಸುಮಾ ಸುಬ್ರಮಣ್ಯ, ಚಂದ್ರಕಲಾ, ಗುಲಾಬಿ ಮರಿಯಪ್ಪ, ಗುರುರಾಜ್, ನಾಸಿರ್, ಮಾಧು ಶೆಟ್ಟಿ, ಎಂಪಿ ಸುರೇಶ್, ಮಂಜುನಾಥ್ ಡಿ ಶೆಟ್ಟಿ, ಗುರೂ ಜಯನಗರ, ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು...
INAUGURATION..
Discover more from Prasarana news
Subscribe to get the latest posts sent to your email.
