
ಹೊಸನಗರ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಕೊಡಚಾದ್ರಿ ಸಮೀಪ ಪ್ರವಾಸಿಗನೊಬ್ಬ ಹೃದಯಘಾತಕ್ಕೆ ಬಲಿಯಾದ ಘಟನೆ ಸಂಭವಿಸಿದೆ.
ಬೆಂಗಳೂರು ಮೂಲದ ಶ್ರೀಕಾಂತ್ (28) ಎಂಬುವರು ಕೊಡಚಾದ್ರಿ ಶಿಖರ ವೀಕ್ಷಣೆಗಾಗಿ ಸ್ನೇಹಿತರೊಂದಿಗೆ ದಿನಾಂಕ 17-07-2026 ಆಗಮಿಸಿದ್ದು ಸಂಪೇಕಟ್ಟೆ ಸಮೀಪದ ಕಟ್ಟಿನಹೊಳೆಯ ತಮ್ಮ ಸ್ನೇಹಿತರ ಮನೆಯಲ್ಲಿ ತಂಗಿದ್ದು ಇಂದು ಮುಂಜಾನೆ ಕೊಡಚಾದ್ರಿ ಶಿಖರ ವೀಕ್ಷಣೆಗೆ ಹೊರಡುವ ಯೋಜನೆ ರೂಪಿಸಿದ್ದರು ಆದರೆ ರಾತ್ರಿ ಅವರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ತಂಗಿದ್ದ ಮನೆಯಲ್ಲಿಯೇ ರಾತ್ರಿ ಕುಸಿದು ಬಿದ್ದಿತ್ತು ಕೂಡಲೇ ಅವರನ್ನು ಅವರೊಡನೆ ಬಂದಿದ್ದ ಸ್ನೇಹಿತರು ಹೊಸನಗರ ಸರ್ಕಾರಿ ಆಸ್ಪತ್ರೆಗೆ ಕರತರಲಾಗಿದ್ದು ಶ್ರೀಕಾಂತ್ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.
ತಿಂಗಳ ಅಂತರದಲ್ಲಿ ಎರಡು ದುರ್ಘಟನೆ..
ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಚಾದ್ರಿ ತಪ್ಪಲು ಹಾಗೂ ಅದರ ಸಮೀಪದಲ್ಲಿ ತಿಂಗಳ ಅಂತರದಲ್ಲಿ ಹೃದಯಾಘಾತಕ್ಕೆ ಇಬ್ಬರು ಪ್ರವಾಸಿಗರು ಸಾವನ್ನಪ್ಪಿದ್ದಾರೆ.
ಮೃತ ಶ್ರೀಕಾಂತ್ ಮೃತ ದೇಹವನ್ನು ಹೊಸನಗರ ಸರ್ಕಾರಿ ಆಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದ್ದು ಕುಟುಂಬಸ್ಥರು ಬಂಧ ಬಳಿಕ ಮುಂದಿನ ಪ್ರಕ್ರಿಯೆ ನಡೆಯಲಿದ್ದು ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ...
KODACHADRI..
Discover more from Prasarana news
Subscribe to get the latest posts sent to your email.
