HOSANAGARA                   ಕನ್ನಡ ರಥ ಬರಮಾಡಿಕೊಂಡ ತಾಲೂಕು ಆಡಳಿತ.



ಹೊಸನಗರ: ಭಾನುವಾರ ಪಟ್ಟಣಕ್ಕೆ ಆಗಮಿಸಿದ ಕನ್ನಡ ರಥವನ್ನು ತಾಲೂಕು ಆಡಳಿತ ಮೆರವಣಿಗೆ ಮೂಲಕ ಬರಮಾಡಿಕೊಂಡಿತ್ತು
ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ಯಾತ್ರೆ ನಿನ್ನೆ ಹೊಸನಗರ ಪಟ್ಟಣವನ್ನು ಪ್ರವೇಶಿಸಿತು.


ತಾಲೂಕು ಕಚೇರಿ, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್,ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು
ಭವ್ಯ ಸ್ವಾಗತವನ್ನು ಕೋರುವ ಮೂಲಕ ತೇರನ್ನ ಬರಮಾಡಿಕೊಂಡರು ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಿ ಮಂಜುನಾಥ್, ತಾಲ್ಲೂಕ್ ಅಧ್ಯಕ್ಷರಾದ ತಮ ನರಸಿಂಹ, ಪಟ್ಟಣ ಪಂಚಯತ್ ಅಧ್ಯಕ್ಷ ನಾಗಪ್ಪ, ಉಪಾಧ್ಯಕ್ಷೆ ಚಂದ್ರಕಲಾ ನಾಗರಾಜ್, ಇಒ ನರೇಂದ್ರ ಕುಮಾರ್, ತಾಲ್ಲೂಕು ಕಚೇರಿ ಯ ಉಪತಸೀಲ್ದಾರ್ ರಾಕೇಶ್ ಫ್ರಾನ್ಸಿಸ್, ಎಂ ಗುಡ್ಡೆ ಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್, ಚಿರಾಗ್, ಪಟ್ಟಣ ಪಂಚಾಯತ್ ಸದಸ್ಯ ಅಶ್ವಿನ್ ಕುಮಾರ್ , ಪಟ್ಟಣ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮೇಶ್, ಪಿಡಿಒ ಕಾವೇರಮ್ಮ, ಗುರುರಾಜ್ , ಹಾಗು ಗುರು ಜಯನಗರ ಇನ್ನೂ ಮುಂತಾದವರು ಇದ್ದರು,

ಕನ್ನಡ ರಥ ಯಾತ್ರೆ.


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading