PROTEST:ಪಕ್ಕ ಪೋಡಿ ವಿಳಂಬ.. ತಾಲ್ಲೂಕು ಕಚೇರಿ ಪಡಸಾಲೆಯಲ್ಲಿ ಏಕಾಂಗಿಯಾಗಿ ಧರಣಿ ಕುಳಿತ ರೈತ.


ಹೊಸನಗರ : ತಮಗೆ ಮಂಜೂರಾದ ಜಮೀನಿನ ಪಕ್ಕ ಪೋಡಿ ಮಾಡಿಕೊಡುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ರೈತರೊಬ್ಬರು ಮಂಗಳವಾರ ಏಕಾಂಗಿಯಾಗಿ ತಾಲ್ಲೂಕು ಕಚೇರಿ ಪಡಸಾಲೆಯಲ್ಲಿ ಧರಣಿ ನಡೆಸಿ ಗಮನ ಸೆಳೆದರು.
ಮೇಲಿನ ಬೆಸಿಗೆ ಗ್ರಾಮ ಪಂಚಾಯಿತಿ ಎಲ್.ಗುಡ್ಡೆಕೊಪ್ಪ ನಿವಾಸಿ  ರೈತ ರಾಮನಾಯ್ಕ ಅವರು ತಮ್ಮ  ಜಮೀನಿಗೆ ಸಂಬಂಧಿಸಿದ ಕಚೇರಿ ಕೆಲಸಗಳು ಆಗುತ್ತಿಲ್ಲ. ವರ್ಷಗಟ್ಟಲೇ ಇಲಾಖೆ ಅಲೆದು ಸಾಕಾಗಿದೆ ಎಂದು ಆರೋಪಿಸಿ ಕಚೇರಿಯಲ್ಲಿ ಧರಣಿ ಕುಳಿತರು.
ತಮ್ಮ ಕುಟುಂಬಕ್ಕೆ ಸುಮಾರು 50 ವರ್ಷಗಳ ಹಿಂದೆ 4 ಎಕರೆ ಸಾಗುವಳಿ ಜಮೀನು ಮಂಜೂರು ಆಗಿದೆ. ಪಕ್ಕ ಪೋಡಿ ಆಗಬೇಕಾಗಿದೆ. ಅರಣ್ಯ ಇಲಾಖೆಯ ಅಭಿಪ್ರಾಯದ ಸಮಸ್ಯೆಯಿಂದ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವ ಇಲಾಖೆಯಲ್ಲಿ ಕೇಳಿದರೂ ಸೂಕ್ತ ಉತ್ತರ ನೀಡುತ್ತಿಲ್ಲ.  ಹತ್ತಾರು ವರ್ಷಗಳಿಂದ ಇಲಾಖೆ ಅಲೆದು ಅಲೆದು ಸಾಕಾಗಿದೆ. ತಾಲ್ಲೂಕು ಕಚೇರಿಯಲ್ಲಿ ಬಡ ರೈತರ ಸಮಸ್ಯೆ ಕೇಳುವವರಿಲ್ಲ ಎಂದು ದೂರಿದರು.
ಇಲಾಖೆ  ಆವರಣದಲ್ಲಿ ರೈತ  ಧರಣಿ ಕುಳಿತ  ವಿಷಯ ಶಾಸಕ ಆರಗ ಜ್ಞಾನೇಂದ್ರ ಅವರ ಗಮನಕ್ಕೆ ಬಂದಿದ್ದು ಅವರು ಸೂಚನೆ ಮೇರೆಗೆ  ತಹಸೀಲ್ದಾರ್  ಭರತ್ ರಾಜ್ ಧರಣಿ ನಿರತ  ರೈತ  ರಾಮನಾಯ್ಕ ಅವರನ್ನು ಮನವೊಲಿಸಿದ್ದಾರೆ. ಅಧಿಕಾರಿಗಳ  ಭರವಸೆ ಮೇರೆಗೆ ಧರಣಿ ಹಿಂದಕ್ಕೆ ಪಡೆಯಲಾಗಿದೆ.  ಈ ಸಂಧರ್ಭದಲ್ಲಿ  ಶಾಸಕರ ಆಪ್ತ ‌ಸಹಾಯಕ ರಾಜೇಶ್ ಹಿರೇಮನೆ, ಜಿಲ್ಲಾ ಪಂಚಾಯಿತಿ  ಮಾಜಿ ಸದಸ್ಯ ಉಮೇಶ್ ಹೊಸನಗರ, ತ.ಮಾ. ನರಸಿಂಹ ಇದ್ದರು.

PROTEST..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading