SOCIAL SERVICE:ಸೇವಾ ಕಾರ್ಯದ ಮೂಲಕ ಬಿಜೆಪಿ ಮುಖಂಡ ಹಾಲಗದ್ದೆ ಉಮೇಶ್ ಹುಟ್ಟುಹಬ್ಬ ಆಚರಣೆ..

ಹೊಸನಗರ: ಹುಟ್ಟುಹಬ್ಬ ಕೇವಲ ಆಚರಣೆಯಾಗದೆ ಆ ದಿನವನ್ನು ಸಮಾಜಮುಖಿ ಕಾರ್ಯಗಳಿಗೆ ಮೀಸಲಿಡುವ ಮೂಲಕ ಆಚರಣೆಯನ್ನು ಮಾಡಬೇಕು ಈ ನಿಟ್ಟಿನಲ್ಲಿ ಸಾಮಾಜಿಕ ಸೇವಾ ಕಾರ್ಯದ ಮೂಲಕ ಬಿಜೆಪಿ ಮುಖಂಡ ಹಾಲಗದ್ದೆ ಉಮೇಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.


ತಮ್ಮ ಹುಟ್ಟು ಹಬ್ಬದ ಅಂಗವಾಗಿ ಸ್ನೇಹಿತರು ಹಾಗೂ ಬೆಂಬಲಿಗರ ಜೊತೆಗೂಡಿ ಇಂದು ಗೋಶಾಲೆಗಳಿಗೆ ಹುಲ್ಲುಗಳನ್ನು ವಿತರಿಸುವ ಜೊತೆಗೆ ಹೊಸನಗರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲನ್ನು ವಿತರಿಸಿದರು. ವಿತರಿಸಿದ ಬಳಿಕ ಮಾತನಾಡಿದ ಅವರು ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಇಂತಹ ಕಾರ್ಯಗಳಿಂದ ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಹುಟ್ಟುಹಬ್ಬಕ್ಕೆ ಅರ್ಥಪೂರ್ಣವಾದ ಆಚರಣೆಯ ಸ್ಪರ್ಶವನ್ನು ನೀಡವ ಉದೇಶದಿಂದ ಒಂದಿಷ್ಟು ಸೇವ ಕಾರ್ಯವನ್ನ ಈ ದಿನ ಮಾಡಿದ್ದು ಮುಂದಿನ ದಿನಗಳಲ್ಲಿಯೂ ಸಹ ಸಮಾಜಮುಖಿ ಕಾರ್ಯಗಳಲ್ಲಿ ನನ್ನನ್ನ ತೊಡಗಿಸಿಕೊಳ್ಳಲಿದ್ದೇನೆ ಎಂದರು.

ಸಂಸದರಾದ ಬಿ ವೈ ರಾಘವೇಂದ್ರ ಮಾಜಿ ಸಚಿವ ಹರತಾಳು ಹಾಲಪ್ಪ ಹಾಗೂ ಶಾಸಕರಾದ ಅರಗ ಜ್ಞಾನೇಂದ್ರ ಅವರು ಕರೆ ಮಾಡಿ ಶುಭಾಶಯ ವನ್ನ ತಿಳಿಸಿದ್ದು  ಒಬ್ಬ ಸಾಮಾನ್ಯ ಕಾರ್ಯಕರ್ತನ ಹುಟ್ಟು ಹಬ್ಬವನ್ನು ನೆನಪಿಸಿ ಕೊಂಡು ಶುಭ ಕೋರಿದ್ದು ಅತ್ಯಂತ ಸಂತೋಷ ವಾಗಿದೆ ಹಾಗೆಯೇ ಈ ಸೇವಾ ಕಾರ್ಯದಲ್ಲಿ   ನನ್ನೊಂದಿಗೆ ಪಾಲ್ಗೊಂಡ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸುವೆ ಎಂದರು..

SOCIAL SERVICE...


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading