SPORTS NEWS:ಮಲೆನಾಡು ಪ್ರೌಢಶಾಲೆ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ..

ಹೊಸನಗರ: ಶಿವಮೊಗ್ಗ ಜಿಲ್ಲಾ ಮಟ್ಟದ 17 ವರ್ಷ ವಯೋಮಿತಿಯ ಅಥ್ಲೆಟಿಕ್ ವಿಭಾಗದಲ್ಲಿ ಹೊಸನಗರ ಪಟ್ಟಣದ ಮಲೆನಾಡು ಪ್ರೌಢಶಾಲೆಯ ಐದು ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
  ಅರ್ಚನಾ 3000 ಮೀ. ಪ್ರಥಮ,
ರವೀಶ 5000 ಮೀ. ನಡಿಗೆ  ಪ್ರಥಮ ಸ್ಥಾನ ಪಡೆದಿದ್ದಾರೆ.
ಪೋಲೋ ವಾಲ್ಟ್ ಆಟದಲ್ಲಿ ಸಾಗರ್ ,  ಆದರ್ಶ ಜಿ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ.
ಸುಬ್ರಹ್ಮಣ್ಯ  ಚಕ್ರ ಎಸೆತ  ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿಶೇಷವಾಗಿ  ಮೊಟ್ಟಮೊದಲ ಬಾರಿಗೆ  ಪೋಲೊ ವಾಲ್ಟ್ ಜಿಗಿತದ ಸ್ಪರ್ಧೆಯಲ್ಲಿ ಇದುವರೆಗಿನ ಶಿವಮೊಗ್ಗ ಜಿಲ್ಲೆಯ 2.62ಮೀಟರ್ ಎತ್ತರದ ರೆಕಾರ್ಡ್ ಬ್ರೇಕ್ ಮಾಡಿ 2.90 ರೆಕಾರ್ಡನ್ನು ಹೊಸನಗರ  ಮಲೆನಾಡು ಪ್ರೌಢಶಾಲೆಯ  ಸಾಗರ್ ಹಾಗೂ ಆದರ್ಶ ವಿದ್ಯಾರ್ಥಿಗಳು ಸೃಷ್ಟಿಸಿದ್ದಾರೆ ಎಂದು ಶಾಲಾ ದೈಹಿಕ ಶಿಕ್ಷಕ ಸುರೇಶ್ ಮಲೆನಾಡು ಪತ್ರಿಕೆಗೆ ತಿಳಿಸಿದ್ದಾರೆ.  ವಿದ್ಯಾರ್ಥಿಗಳ ಈ ಸಾಧನೆಗೆ ಮಲೆನಾಡು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎನ್. ಸುಧಾಕರ್  ಮತ್ತು   ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ಪೋಷಕರು ಅಭಿನಂದಿಸಿದ್ದಾರೆ.

SPORTS NEWS..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading