
ಹೊಸನಗರ:2026-27 ನೇ ಸಾಲಿನ ಕುವೆಂಪು ವಿಶ್ವವಿದ್ಯಾಲಯ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ಗುಡ್ಡಗಾಡು ಓಟ ಸ್ಪರ್ಧೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆ ಇಲ್ಲಿ ಆಯೋಜಿಸಿದ್ದು, ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾಪಟುಗಳು ಭಾಗವಹಿಸಿ ಉತ್ತಮ ಸಾಧನೆ ಮಾಡಿರುತ್ತಾರೆ. ಪುರುಷರ ತಂಡವು ದ್ವಿತೀಯ ಚಾಂಪಿಯನ್ ಹಾಗೂ ಮಹಿಳೆಯರ ತಂಡವು ತೃತೀಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮಹಿಳೆಯರ ವಿಭಾಗದಲ್ಲಿ ಕು.ಪುಷ್ಪ ಎಂ.ಪಿ ಪ್ರಥಮ ಸ್ಥಾನ ಗಳಿಸಿವುದರೊಂದಿಗೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆಯುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಹಿಳೆಯರ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಭಾಗವಹಿಸಲು ಕುವೆಂಪು ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆಯಾಗಿರುತ್ತಾರೆ.
ಭಾಗವಹಿಸಿದ ವಿದ್ಯಾರ್ಥಿಗಳು ಎಡದಿಂದ ಸುಬ್ರಹ್ಮಣ್ಯ, ವಿನಾಯಕ, ಅಭಿಲಾಷ್, ಪ್ರಮೋದ್, ಶ್ರೇಯಸ್, ಅಕ್ಷಯ್, ಪ್ರೇಮ ಜಿ, ಪುಷ್ಪ ಎಂ.ಪಿ, ತ್ರಿವೇಣಿ, ಶಿಲ್ಪಾ, ಸೂರ್ಯ ವಿಜೇತ ಕ್ರೀಡಾಪಟುಗಳಿಗೆ ಹಾಗೂ ತರಬೇತುದಾರರಾದ ಶ್ರೀ. ಸುಬ್ರಹ್ಮಣ್ಯ ಬಿ.ಜಿ ಮತ್ತು ಕ್ರೀಡಾ ಸಂಚಾಲಕರಾದ ಶ್ರೀ. ಮಂಜುನಾಥ್ ಡಿ ರವರಿಗೆ ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಅಧ್ಯಾಪಕ, ಅಧ್ಯಾಪಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.
SPORTS..
Discover more from Prasarana news
Subscribe to get the latest posts sent to your email.
