
ಹೊಸನಗರ:ಅನುಭವ ಮಂಟಪ, ಮುರುಘರಾಜೇಂದ್ರ ಮಠ, ಚಿತ್ರದುರ್ಗ ಇವರ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಅಸ್ಮಿತಾ ಸಿಟಿ ವುಮೆನ್ ಲೀಗ್ 2025-2026 ಮತ್ತು 6 ನೇ ಕರ್ನಾಟಕ ರಾಜ್ಯ ಯೋಗಾಸನ ಸ್ಪರ್ಧೆಯ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಹೊಸನಗರದ ಕ್ರಿಶ್ಚಿಯನ್ ಕಾಲೋನಿಯ ಕುಮಾರಿ ಸಹನಾ ಗೋನ್ಸಾಲ್ವಿಸ್ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಅಸ್ಮಿತಾ ಸಿಟಿ ವುಮೆನ್ ಲೀಗ್ 2025-2026 ರ ಯೋಗಾಸನ ಸ್ಪರ್ಧೆಯು 22-08-2025 ರ ಶುಕ್ರವಾರ ನಡೆದಿದ್ದು, ಇದರಲ್ಲಿ ಸಾಂಪ್ರದಾಯಿಕ ಯೋಗಾಸನ (Traditional Yoga) ವಿಭಾಗದ 18 ವರ್ಷದೊಳಗಿನವರ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾಳೆ. ಇದೇ ಲೀಗಿನ ಲೆಗ್ ಬ್ಯಾಲೆನ್ಸಿಂಗ್ ವಿಭಾಗದಲ್ಲಿಯೂ ದ್ವಿತೀಯ ಸ್ಥಾನ ಗಳಿಸಿರುತ್ತಾಳೆ. ದಿನಾಂಕ 22-08-2025 ರಿಂದ 24-08-2025 ರವರೆಗೆ ನಡೆದ 6 ನೇ ಕರ್ನಾಟಕ ರಾಜ್ಯ ಯೋಗಾಸನ ಸ್ಪರ್ಧೆಯ ಚಾಂಪಿಯನ್ಶಿಪ್ 2025-2026 ಸ್ಪರ್ಧೆಗಳ 14 ವರ್ಷದೊಳಗಿನವರ ಬ್ಯಾಕ್ ಬೆಂಡಿಂಗ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾಳೆ ಮತ್ತು ಇದೇ ಚಾಂಪಿಯನ್ಶಿಪ್ನ ಲೆಗ್ ಬ್ಯಾಲೆನ್ಸಿಂಗ್ ವಿಭಾಗದಲ್ಲಿಯೂ ದ್ವಿತೀಯ ಸ್ಥಾನಗಳಿಸಿರುತ್ತಾಳೆ. ರಾಷ್ಟ್ರಮಟ್ಟದ ಯೋಗಾ ಸ್ಪರ್ಧೆಗಳಿಗೆ ಆಯ್ಕೆಯಾಗಿರುವ ಕುಮಾರಿ ಸಹನಾ ಗೋನ್ಸಾಲ್ವಿಸ್ ಹೊಸನಗರದ ಕ್ರಿಶ್ಚಿಯನ್ ಕಾಲೋನಿಯ ನಿವಾಸಿಗಳಾದ ಶ್ರೀಯುತ ನವೀನ್ ಗೋನ್ಸಾಲ್ವಿಸ್ ಮತ್ತು ಶ್ರೀಮತಿ ಸೆಲಿನ್ ಗೋನ್ಸಾಲ್ವಿಸ್ ಇವರ ಮಗಳಾಗಿದ್ದು, ಹೋಲಿ ರಿಡೀಮರ್ ಕಾನ್ವೆಂಟಿನಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಕುಮಾರಿ ಸಹನಾ ಗೋನ್ಸಾಲ್ವಿಸ್ ಸಾಗರದ ಗುರುಕುಲಂ ಯೋಗಾಸನಾ ಕೇಂದ್ರದಲ್ಲಿ ಶ್ರೀಯುತ ಶ್ರೀಧರ ಮೂರ್ತಿ ಮತ್ತು ಕುಮಾರಿ ಸಂಧ್ಯಾ ಶ್ರೀಧರ ಮೂರ್ತಿಯವರಿಂದ ತರಬೇತಿ ಪಡೆಯುತ್ತಿದ್ದಾಳೆ...
HOSANAGARA NEWS
Discover more from Prasarana news
Subscribe to get the latest posts sent to your email.
