HINDHU MAHASABHA: ಏಳನೇ ವರ್ಷದ ಅದ್ದೂರಿ ಗಣೇಶೋತ್ಸವಕ್ಕೆ ಭರದ ಸಿದ್ಧತೆ…

ಹೊಸನಗರ: ಅಖಿಲ ಭಾರತ ಹಿಂದೂ ಮಹಾಸಭಾ ಹೊಸನಗರ ಘಟಕದ 7ನೇ ವರ್ಷದ ಅದ್ದೂರಿ ಗಣೇಶೋತ್ಸವಕ್ಕೆ ಬರದ ಸಿದ್ಧತೆ ನಡೆಸಲಾಗುತ್ತಿದ್ದು ಆಗಸ್ಟ್ 27-08-2025ರ ಬುಧವಾರದಿಂದ ಸೆಪ್ಟೆಂಬರ್ 10-08-2025ರ ಬುಧವಾರದ ವರೆಗಿನ 15 ದಿನಗಳ ಕಾಲ ಅಂಚೆ ಕಚೇರಿ ಸಮೀಪ ಇರುವ ವೀರಸಾವರ್ಕರ್ ಮಂಟಪದಲ್ಲಿ ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುವುದು ಎಂದು ಸಮಿತಿ ಅಧ್ಯಕ್ಷರಾದ ಪ್ರಶಾಂತ್ ತಿಳಿಸಿದರು.ಈ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಮಿತಿಯ ತೀರ್ಮಾನದಂತೆ ಅತ್ಯಂತ ವಿಜ್ರಂಭಣೆಯಿಂದ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ ಗಣೇಶ ಮೂರ್ತಿ ಪ್ರತಿಷ್ಠಾಪನಾ ದಿನದಿಂದ ವಿಸರ್ಜನಾ ದಿನದವರೆಗೆ ವಿಶೇಷವಾದಂತಹ ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಆಗಸ್ಟ್ 27-08-2025ರ ಬೆಳಿಗ್ಗೆ 9:00ಗೆ ಸರಿಯಾಗಿ ಮಾವಿನ ಕೊಪ್ಪದ ಗಂಗಾಧರೇಶ್ವರ ದೇವಸ್ಥಾನದಿಂದ ಬೃಹತ್ ಪ್ರತಿಷ್ಠಾಪನ ಶೋಭಾ ಯಾತ್ರೆ ಮೂಲಕವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತದೆ. 30-08-25 ಶನಿವಾರ ಸಂಜೆ  7 ರಿಂದ 8 ರವರೆಗೆ ಕಲಾಭಾರತಿ ತಂಡ ಕಾರಣಗಿರಿಯವರಿಂದ ಭರತನಾಟ್ಯ. 31-08-2025 ರ ಮಧ್ಯಾಹ್ನ 3.30 ರಿಂದ 5.30 ವರೆಗೆ 5 ರಿಂದ 10 ನೇ ತರಗತಿ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಹಾಗೆಯೇ ಅದೇ ದಿನ ರಾತ್ರಿ 8.35 ರಿಂದ ಶ್ರೀ ಹರಿಕೃಷ್ಣ ಮತ್ತು ಸಂಗಡಿಗರು ರೀಪನ್ ಪೇಟೆ ಇವರಿಂದ ಕೆರೋಕೆ ಸಂಗೀತ ಸಂಜೆ ಗಾಯನ ಕಾರ್ಯಕ್ರಮ ವಿರುತ್ತದೆ.02-09-2025 ಸಂಜೆ 7 ರಿಂದ 8 ರ ವರೆಗೆ ಶ್ರೀಮತಿ ಅನುಪಮಾ ಸುರೇಶ್ ರವರ ರಾಗಲಹರಿ ಗಮಕ ಕಲಾಸಂಘ ಇವರಿಂದ ಗಮಕ ಕಾರ್ಯಕ್ರಮ ಹಾಗೆ 03-09-2025 ಸಂಜೆ 7 ರಿಂದ 8 ರ ವರೆಗೆ ವಿದುಷಿ ಶಾಮಾ ಕಿರುಗುಡಿಗೆ ಇವರಿಂದ ಭರತನಾಟ್ಯ ಕಾರ್ಯಕ್ರಮ ಮತ್ತು 4-09-2025 ಮದ್ಯಾಹ್ನ 3 ರಿಂದ 5 ರ ವರೆಗೆ PU ಮತ್ತು ಪದವಿ ವಿದ್ಯಾರ್ಥಿ ನಿಯರಿಗೆ ಪ್ರಬಂಧ ಸ್ಪರ್ಧೆ (ವಿಷಯ: ವರ್ತಮಾನದ ಸವಾಲುಗಳು ಮತ್ತು ಪರಿಹಾರ) ಹಾಗೆಯೇ 05-09-2025 ಬೆಳಗ್ಗೆ 11 ರಿಂದ
ಗಣಹೋಮ ಹಾಗೂ ಸತ್ಯನಾರಾಯಣ ವೃತವನ್ನು ಮತ್ತು ಸಾರ್ವಜನಿಕ ಅನ್ನಸಂತಪಣೆಯನ್ನು ಹಮ್ಮಿಕೊಳ್ಳಲಾಗಿದೆ ಅದೇ ದಿನ ಸಂಜೆ 5 ರಿಂದ 7.45 ರ ವರೆಗೆ
ದಂಪತಿಗಳಿಗಾಗಿ ಸಾಂಪ್ರದಾಯಿಕ ವಸ್ತ್ರ ವೈಭವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.6-09-2025 ರ ಸಂಜೆ 4 ರಿಂದ 5.30 ರ ವರೆಗೆ 1 ರಿಂದ 4 ನೆ ತರಗತಿ ಮಕ್ಕಳಿಗೆ ಸ್ತೋತ್ರ ಶ್ಲೋಕಗಳ ಕಂಠಪಾಠ ಸ್ಪರ್ಧೆ ಸಂಜೆ 6 ರಿಂದ 7 ರ ವರೆಗೆ ಭಜನೆ. ರಾತ್ರಿ 9 ರಿಂದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು-ಮಂದಾರ್ತಿ ಇವರಿಂದ ಈ ವರ್ಷದ ನೂತನ ಕಥಾನಕ ಯಕ್ಷಗಾನ ಪ್ರಸಂಗ ಜಗನ್ಮಾತೆ ಶ್ರೀ ವಲದುರ್ಗಿ ಮಾಡಿ ತೋರಿಸಲಾಗುವುದು.
ದಿನಾಂಕ 10-09-2025 ರ ಬುಧವಾರ ಮದ್ಯಾಹ್ನ 4 ರಿಂದ ಬೃಹತ್ ವಿಸರ್ಜನ ಶೋಭ ಯಾತ್ರೆ, "ವಿಜಯ ಸಿಂಧೂರ ಯಾತ್ರೆ"ಆರಂಭವಾಗಲಿದೆ
ಈ ಶೋಭಾ ಯಾತ್ರೆಯಲ್ಲಿ ರಾಜ್ಯದ 15ಕ್ಕೆ ಹೆಚ್ಚು ವಿವಿಧ ಸಾಂಸ್ಕೃತಿಕ ಕಲಾತಂಡಗಳ ಜೊತೆಗೂಡಿ ಗಣೇಶ ಮೂರ್ತಿಯನ್ನು ಗಣಪತಿ ದೇವಸ್ಥಾನದ ಪುಷ್ಕರಣಿಯಲ್ಲಿ ವಿಸರ್ಜಿಸಲಾಗುವುದು ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಕಾರ್ಯಕ್ರಮವನ್ನು ಅತ್ಯಂತ ವಿಜ್ರಂಬಣೆಯಿಂದ ನಡೆಸಲಾಗುವುದು ಎಂದು ತಿಳಿಸಿದರು ಭಕ್ತಾದಿಗಳು 15 ದಿನಗಳ ಕಾಲದ ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡು ಗಣೇಶೋತ್ಸವವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಕೋರಿದರು..
ಈ ಸಂದರ್ಭದಲ್ಲಿ ಸಮಿತಿಯ ಗೌರವ್ಯಾಧ್ಯಕ್ಷರಾದ ಸುಧೀಂದ್ರ ಪಂಡಿತ್ ಕಾರ್ಯದರ್ಶಿ ವಿನಯ್ ಹೆಚ್ ವಿ, ನಾಗರಾಜ ಆರ್, ಸುರೇಂದ್ರ ಕೋಟ್ಯಾನ್, ವಿಕ್ರಂ ಹೆಚ್ ಜಿ, ಸಂತೋಷ್, ನಾಗರಾಜ್, ಮುಂತಾದವರು ಉಪಸ್ಥಿತರಿದ್ದರು..

HINDHU MAHASABHA.


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe