
ರಿಪ್ಪನ್‌ಪೇಟೆ: ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಿಸುವಂತೆ, ಗ್ರಾಮದಲ್ಲಿ ಶಾಂತಿ-ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹೇಳಿದರು.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಗೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ – “ಪ್ರತಿ ಧರ್ಮವೂ ಶ್ರೇಷ್ಠ, ಜಾತಿ-ಧರ್ಮ ಭೇದವಿಲ್ಲದೆ ಎಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಂಡು ಬೇರೆ ಬೇರೆ ಧರ್ಮದ 9ಹಬ್ಬಗಳಲ್ಲಿ ಭಾವೈಕ್ಯತೆಯಿಂದ ಪಾಲ್ಗೊಳ್ಳಬೇಕು. ಹಬ್ಬ-ಹರಿದಿನಗಳನ್ನು ಸಂಭ್ರಮಿಸುವಾಗ ಶಾಂತಿ-ಸುವ್ಯವಸ್ಥೆ ಕಾಪಾಡುವುದು ಎಲ್ಲರ ಹೊಣೆಗಾರಿಕೆ” ಎಂದು ತಿಳಿಸಿದರು.
ಗಣಪತಿ ಸೇವಾ ಸಮಿತಿಯ ಕಾರ್ಯಕರ್ತರು ಪೆಂಡಾಲ್ ಹತ್ತಿರ ಹಾಗೂ ವಿಸರ್ಜನೆ ಮೆರವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಹೊರಗಿನಿಂದ ಬರುವವರ ಮೇಲೆ ನಿಗಾ ಇಟ್ಟು ತಕ್ಷಣ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಿದರು. ಸ್ವಯಂಸೇವಕರು ಅನುಭವಿಗಳ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುವಂತೆ ಹಾಗೂ ಇಲಾಖೆ ನೀಡಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಆರ್. ರಾಘವೇಂದ್ರ ಮಾತನಾಡಿ – ರಿಪ್ಪನ್‌ಪೇಟೆಯ ಪೊಲೀಸ್ ವಸತಿಗೃಹಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವ ಬಗ್ಗೆ ವರಿಷ್ಠಾಧಿಕಾರಿಗಳ ಗಮನಸೆಳೆದರು.
ಸಭೆಯಲ್ಲಿ ಆರ್.ಎ. ಚಾಬುಸಾಬ್, ಧನಲಕ್ಷ್ಮಿ, ಎಂ.ಬಿ. ಮಂಜುನಾಥ್, ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ, ಎಂ. ಸುರೇಶ್, ಅಶೀಫ್ ಭಾಷಾ, ನಿರೂಪ್ ಕುಮಾರ್ ಸೇರಿದಂತೆ ಹಲವು ಗಣ್ಯರು ಮಾತನಾಡಿದರು.
ಶಾಂತಿ ಸಭೆಯಲ್ಲಿ ತೀರ್ಥಹಳ್ಳಿ ಡಿವೈಎಸ್‌ಪಿ ಅರವಿಂದ ಕಲುಗುಜ್ಜಿ, ವೃತ್ತ ನಿರೀಕ್ಷಕ ಗುರುಣ್ಣ ಹೆಬ್ಬಾಳ್ಕರ್, ಪಿಎಸ್‌ಐ ರಾಜುರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿವರ್ಗ ಹಾಜರಿದ್ದರು...
RIPPONPET NEWS.
Discover more from Prasarana news
Subscribe to get the latest posts sent to your email.
