HOSANAGARA NEWS:  ಬಾಣಿಗ ಸುವರ್ಧಿನಿ ನೃತ್ಯ ಶಾಲೆಗೆ ಶೇ.100ಪಲಿತಾಂಶ..

ಹೊಸನಗರ: ಡಾ. ಗಂಗೂಬಾಯಿ ಹಾನಗಲ್ ನೃತ್ಯ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕರ್ನಾಟಕ ವತಿಯಿಂದ ಮೇ ತಿಂಗಳಲ್ಲಿ ನಡೆದ ಭರತ ನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಬಾಣಿಗ ಸುವರ್ಧಿನಿ ನೃತ್ಯ ಶಾಲೆ ಶೇ..100. ಫಲಿತಾಂಶ ಪಡೆದು ಸಾಧನೆ ಮಾಡಿದೆ.

ವಿದುಷಿ ಶ್ರೀಮತಿ ಶ್ವೇತಾ ವಿಷ್ಣು ಜೋಯಿಸ್ ಇವರ ನೇತೃತ್ವದಲ್ಲಿ ನಡೆಯುತ್ತಿರುವ ಸುವರ್ಧಿನಿ ನೃತ್ಯ ಶಾಲೆಯಿಂದ ನಾಲ್ಕು ವಿದ್ಯಾರ್ಥಿಗಳು ಭರತ ನಾಟ್ಯ ಜ್ಯೂನಿಯರ್ ಪರೀಕ್ಷೆ ಪಡೆದಿದ್ದು ಎಲ್ಲರೂ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಕು. ಮಾನ್ವಿತಾ ಪರಮೇಶ್ವರ್ ಶೇ.98 ಅಂಕ, ಕು. ಚುಕ್ಕಿ ಎಂ. ಬ್ಯಾಣದ ಶೇ.89 ಅಂಕ, ಕು. ದೀಪ ಶೇ.84ಅಂಕ, ಕು. ರಕ್ಷಿತಾ ಶೇ.72ಅಂಕ ಪಡೆಯುವ ಮೂಲಕ ಸಂಸ್ಥೆಯ ಹಿರಿಮೆ ಹೆಚ್ಚಿಸಿದ್ದಾರೆ.
ವಿದುಷಿ ಶ್ರೀಮತಿ ಶ್ವೇತಾ ವಿಷ್ಣು ಜೋಯಿಸ್ ಅವರು ಮೈಸೂರು ಹಿರಿಯ ಭರತ ನಾಟ್ಯ ಗುರು ವಿದುಷಿ ಚೇತನಾ ರಾಧಾಕೃಷ್ಣ ಅವರ ಬಳಿ ವಿದ್ವತ್ ಮುಗಿಸಿದ್ದು, ಪ್ರಸ್ತುತ ಬಾಣಿಗ, ಬಟ್ಟೆಮಲ್ಲಪ್ಪ, ಹೆಬ್ಬೈಲು, ಹೊಸನಗರ ಸೇರಿದಂತೆ ತಾಲ್ಲೂಕಿನ ಹಲವೆಡೆ ಭರತ ನಾಟ್ಯ ತರಗತಿ ನಡೆಸುತ್ತಿದ್ದಾರೆ. ನೂರಾರು ವಿದ್ಯಾರ್ಥಿಗಳು ಇವರ ಬಳಿ ಭರತ ನಾಟ್ಯ, ಭಗವದ್ಗೀತೆ,  ಭಜನ್ ಗಳನ್ನು ಕಲಿಯುತ್ತಿದ್ದಾರೆ.
ಕುಗ್ರಾಮಗಳಲ್ಲೂ ಭರತ ನಾಟ್ಯದ ಅಭಿರುಚಿ ಬಿತ್ತುತ್ತಿರುವ ಗುರುಗಳನ್ನು ಹಾಗೂ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗ್ರಾಮಸ್ಥರು ಮತ್ತು ಸ್ಥಳೀಯ ಸಂಘ ಸಂಸ್ಥೆ ,ಶಿಕ್ಷಣ ಸಂಸ್ಥೆಗಳು ಅಭಿನಂದಿಸಿವೆ.

HOSANAGARA NEWS.


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe