S I R:”ಎಸ್ ಐ ಆರ್”ಎಂಬ ಹುನ್ನಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ:ಕಲಗೋಡು ರತ್ನಾಕರ್..

ಹೊಸನಗರ: ಎಸ್ ಐ ಆರ್ ಎಂಬ ಹುನ್ನಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಯಾಗುತ್ತಿದ್ದು ಇದು ಮತದಾರರ ಹಕ್ಕನ್ನ ಕಸಿಯುವ ಹೊನ್ನಾರವಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕಲಗೋಡು ರತ್ನಾಕರ್ ಆರೋಪಿಸಿದರು.
ಗುರುವಾರ ಪಟ್ಟಣದ ಗಾಂಧಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಚುನಾವಣಾ ಆಯೋಗವನ್ನು ಬಳಸಿಕೊಂಡು ಕೇಂದ್ರ ಸರ್ಕಾರ ಮತದಾರರ ಹಕ್ಕನ್ನ ಕಸಿಯುವ ಕೆಲಸವನ್ನು ಮಾಡುತ್ತಿದೆ ಇದರಿಂದ ಮತದಾರ ಸರ್ಕಾರದ ಎಲ್ಲಾ ಸವಲತ್ತುಗಳಿಂದ ವಂಚಿತನಾಗುತ್ತಾನೆ ಹಿಂದಿಯೂ ಸಹ ಮತಪಟ್ಟಿ ಪರಿಷ್ಕರಣೆ ಕಾರ್ಯ ನಡೆದಿತ್ತು ಆದರೆ ಆ ಸಂದರ್ಭದಲ್ಲಿ ಯಾವೊಬ್ಬ ಮತದಾರರು ತನ್ನ ಹಕ್ಕನ್ನ ಕಳೆದುಕೊಂಡಿರಲಿಲ್ಲ ಆದರೆ ಇದೀಗ ಕೇಂದ್ರ ಸರ್ಕಾರ ಎಸ್ಐಆರ್ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮರಣ ಶಾಸನವನ್ನು ರೂಪಿಸಲು ಹೊರಟಿದೆ ಎಂದರು.
ಪಶ್ಚಿಮ ಬಂಗಾಳದಲ್ಲಿ 91 ಲಕ್ಷ ಮತದಾರರನ್ನು ಅನರ್ಹ ಗೊಳಿಸುವ ಮೂಲಕ ಬಿಜೆಪಿ ತನ್ನ ರಾಜಕೀಯ ದಾರಿಯನ್ನ ಸುಲಭ ಮಾಡಿಕೊಂಡಿದ್ದು ಅಂತಹದ್ದೆ ದಾರಿಯನ್ನ ರಾಜ್ಯದಲ್ಲಿ ಮಾಡಲು ಹೊರಟಿದೆ ಇದಕ್ಕೆ ರಾಜ್ಯ ಸರ್ಕಾರ ಎಂದಿಗೂ ಅವಕಾಶವನ್ನು ನೀಡುವುದಿಲ್ಲ ಈಗಾಗಲೇ ರಾಜ್ಯದ ಹಿರಿಯ ನಾಯಕರಾದ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಬಿಕೆ ಹರಿಪ್ರಸಾದ್ ಮತದಾನದಿಂದ ಯಾರೊಬ್ಬರೂ ವಂಚಿತರಾಗಬಾರದು ಎಂಬ ಕಾರಣದಿಂದ ವಿಶೇಷವಾದ ಸಮಿತಿಯನ್ನು ರಚಿಸಿದ್ದು ಪ್ರತಿ ಬೂತ್ ಮಟ್ಟದಲ್ಲಿ ಒಬ್ಬ ಉಸ್ತುವಾರಿಯನ್ನು ನೇಮಕ ಮಾಡಲಾಗಿದೆ ಅವರು ಅಲ್ಲಿನ ಮತದರಿಗೆ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾರರಿಗೆ ನೆರವಾಗಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಬದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿಜಿ ಚಂದ್ರಮೌಳಿ ಮುಖಂಡರಾದ ಪ್ರಭಾಕರ್ , ಸದಾಶಿವ ಶೆಟ್ಟಿ, ಅಶ್ವಿನಿ ಕುಮಾರ್, ಗುರುರಾಜ್, ಕೃಷ್ಣಮೂರ್ತಿ, ಚಂದ್ರಮೂರ್ತಿ, ಚನ್ನಬಸಪ್ಪ, ಅಣ್ಣಪ್ಪ, ಉಬೇದ್, ಗುರು ಜಯನಗರ ಉಪಸ್ಥಿತರಿದ್ದರು.

S  I R...


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading