G K B MEETING:ಮಳೆ ಹಾನಿಯನ್ನು ತಕ್ಷಣವೇ ಸಮೀಕ್ಷೆ ಮಾಡಿ ವರದಿ ಸಲ್ಲಿಸಿ: ಬೇಳೂರು ಗೋಪಾಲಕೃಷ್ಣ..

ಹೊಸನಗರ:ಮಳೆ ಹಾನಿ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು ಸಭೆ ನಡೆಸಿದರು.
ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ದುರಸ್ತಿ ಮತ್ತು ಪರಿಹಾರ ವಿತರಣೆ ಹಾಗೂ ಅದರಲ್ಲಿ ವಾಸಿಸುವವರಿಗೆ ಮೂಲಸೌಕರ್ಯವನ್ನು ಶೀಘ್ರಗತಿಯಲ್ಲಿ ಕಲ್ಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಜೊತೆಗೆ ಮಳೆಯಿಂದ ಮನೆಗಳಿಗೆ ಅಥವಾ ಕೃಷಿ ಗೆ ಆಗಿರುವ ಹಾನಿಗಳನ್ನು ಜಂಟಿ ಸಮೀಕ್ಷೆಯ ಮೂಲಕ ವರದಿಯನ್ನು ಸಲ್ಲಿಸಿ ಹಾನಿಗೊಳಗಾದವರಿಗೆ ಸೂಕ್ತವಾದ ಪರಿಹಾರವನ್ನು ನೀಡುವಂತ ಕೆಲಸ ಮಾಡಬೇಕು ಎಂದರು.
ಕುಡಿಯುವ ನೀರು ರಸ್ತೆ ದುರಸ್ತಿ ವಿದ್ಯುತ್ ಸಂಪರ್ಕಗಳ ಕುರಿತಾಗಿ ಆಯಾ ಇಲಾಖೆ ಅಧಿಕಾರಿಗಳು ಎಲ್ಲ ಸಮಯದಲ್ಲಿಯೂ ಕಾರ್ಯ ಪ್ರವೃತ್ತರಾಗಿರಬೇಕು ಜೊತೆಗೆ ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯತೆಯನ್ನ ಕಾಯ್ದುಕೊಂಡರೆ ಮಾತ್ರ ನಿಮ್ಮಿಂದ ಉತ್ತಮವಾದ ಕೆಲಸವನ್ನು ನಿರ್ವಹಿಸಲು ಸಾಧ್ಯ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಯಾವುದೇ ಭೂ ಒತ್ತುವರಿ ತೆರವಿಗೆ ಮೊದಲು ಅದನ್ನ ನನ್ನ ಗಮನಕ್ಕೆ ತರಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದಲ್ಲದೆ ಜೊತೆಗೆ ಜೆಜೆಎಮ್ ಕಾಮಗಾರಿಗೆ ಇನ್ನಷ್ಟು ಚುರುಕನ್ನ ನೀಡುವಂತೆ ತಿಳಿಸಿದ್ದು.
ಯಾವುದೇ ಶಾಲೆಗಳ ಕಟ್ಟಡಗಳು ಸೋರುವಂತಹ ಬೀಳುವಂತೆ ಸ್ಥಿತಿಯಲ್ಲಿದ್ದಲ್ಲಿ ಅವುಗಳನ್ನು ಕೂಡಲೇ ನನ್ನ ಗಮನಕ್ಕೆ ತಂದು ದುರಸ್ತಿ ಮಾಡಬೇಕು ಜೊತೆಗೆ ಮಳೆಗಾಲ ಸಂದರ್ಭದಲ್ಲಿ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತ ಕ್ರಮವನ್ನು ವಹಿಸುವ ಜೊತೆಗೆ ಶಾಲಾ ದಾಖಲಾತಿಗಳ ಬಗ್ಗೆ ಹೆಚ್ಚಿನ ಗಮನವನ್ನು ಹರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು ಹಾಗೂ ಅಂಗನವಾಡಿ ಮತ್ತು ಹಾಸ್ಟೆಲ್ ಗಳಲ್ಲಿ ಮಕ್ಕಳಿಗೆ ಗುಡಮಟ್ಟದ ಆಹಾರವನ್ನು ನೀಡುವ ಜೊತೆಗೆ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಶುಚಿತ್ವದ ಬಗ್ಗೆ ಗಮನಹರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಭೆಯಲ್ಲಿ ತಹಸಿಲ್ದಾರ್ ಭರತ್ ರಾಜ್, ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರ ಕುಮಾರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ ಹೂವಿನ ಕೋಣೆ, ಪೊಲೀಸ್ ವೃತ್ತ ನಿರೀಕ್ಷಕರಾದ ಗೌಡಪ್ಪಗೌಡ ಹಾಜರಿದ್ದರು.

G K B MEETING..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading