
ಹೊಸನಗರ:ಸತ್ಯ, ಪ್ರಾಮಾಣಿಕತೆಯ ಜತೆಗೆ ಜನಪರ ಹೋರಾಟ ನಡೆಸಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ತತ್ತ್ವಾದರ್ಶಗಳನ್ನು ಎಲ್ಲರೂ ಪಾಲನೆ ಮಾಡಬೇಕಿದೆ ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರ ಮೌಳಿ ಬಿಜಿ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧೀಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಹಿಂಸೆಯೇ ಗಾಂಧಿಜೀಯವರ ಅಸ್ತ್ರವಾಗಿತ್ತು. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳನ್ನು ಗೌರವಿಸಲು ಅವರ ಜನ್ಮದಿನವಾದ ಅಕ್ಟೋಬರ್ 2 ಅನ್ನು ರಾಷ್ಟ್ರೀಯ ರಜಾದಿನವೆಂದು ಗುರುತಿಸಲಾಗಿದೆ. ವಿಶ್ವಸಂಸ್ಥೆಯು ಗಾಂಧಿ ಜಯಂತಿಯನ್ನು ‘ಅಂತರಾಷ್ಟ್ರೀಯ ಅಹಿಂಸಾ ದಿನ’ ಎಂದು ಆಚರಿಸಿ ಮಹಾತ್ಮ ಗಾಂಧಿಗೆ ತಮ್ಮ ಗೌರವ ನಮನಗಳನ್ನು ಸಲ್ಲಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂಪಿ ಸುರೇಶ್, ಪ್ರಭಾಕರ್, ಬಾಬು ಕಾಮತ್, ಚಂದ್ರಕಲಾ ನಾಗರಾಜ್, ರಾಧಿಕಾ ರತ್ನಾಕರ್, ನಾಗರಾಜ್, ಗುರುರಾಜ್, ಸ್ವಾಮಿ, ಲೋಕೇಶಪ್ಪ, ಗುಲಾಬಿ ಮರಿಯಪ್ಪ, ಗುರು ಜಯನಗರ ಉಪಸ್ಥಿತರಿದ್ದರು.
GANDHI JAYANTHI..
Discover more from Prasarana news
Subscribe to get the latest posts sent to your email.
