
ಹೊಸನಗರ: ವಿಜಯದಶಮಿ ಅಂಗವಾಗಿ ಪಟ್ಟಣದ ವಿವಿಧ ದೇವರ ಪಲ್ಲಕ್ಕಿ ಉತ್ಸವದ ಮೂಲಕ್ಕಾಗಿ ತೆರಳಿ ಯೆಡಚಿಟ್ಟೆ ಗ್ರಾಮದ ಕಳೂರು ರಾಮೇಶ್ವರ ದೇವಸ್ಥಾನದಲ್ಲಿ ಬನ್ನಿ ಮುಡಿಯುವ ಮೂಲಕ ದಸರಾ ಹಬ್ಬವನ್ನು ಭಾವೈಕ್ಯತೆಯಿಂದ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು..


ತಾಲೂಕು ದಂಡಾಧಿಕಾರಿಗಳಾದ ರಶ್ಮಿ ಹೆಚ್ ಜೇ ಸಂಪ್ರದಾಯದಂತೆ ಮೈಸೂರು ಪೇಟ ಧರಿಸಿ ತಾಲೂಕು ಕಚೇರಿಯಲ್ಲಿ ತಾಯಿ ಭುವನೇಶ್ವರಿಗೆ ಪೂಜೆಯನ್ನು ಸಲ್ಲಿಸಿ ಪಟ್ಟಣದ ವಿವಿಧ ದೇವರ ಪಲ್ಲಕ್ಕಿ ಹಾಗೂ ರಾಜ್ಯದ ವಿವಿಧ ಸಾಂಸ್ಕೃತಿಕ ಕಲಾತಂಡಗಳ ಜೊತೆಗೂಡಿ ಮೆರವಣಿಗೆ ಮೂಲಕವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಏಡಚಿಟ್ಟಿ ಗ್ರಾಮದಲ್ಲಿರುವ ಕಳೂರೂ ರಾಮೇಶ್ವರ ದೇವಸ್ಥಾನಕ್ಕೆ ತೆರಳಿ ಆಲ್ಲಿ ದೇವರಿಗೆ ಪೂಜೆಯನ್ನು ಸಲಿಸಿದ ಬಳಿಕ ಬನ್ನಿ ಮಂಟಪಕ್ಕೆ ಪೂಜೆಯನ್ನು ನೆರವೇರಿಸಿ ಬಾಳೆ ಕಂಬವನ್ನು ಕತ್ತರಿಸುವ ಮೂಲಕ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.


ವಿಶಿಷ್ಟ ಸಾಂಸ್ಕೃತಿಕ ಕಲಾತಂಡದೊಂದಿಗೆ ಮೆರವಣಿಗೆ
ಹೊಸನಗರ ಪಟ್ಟಣ ವ್ಯಾಪ್ತಿಯಲ್ಲಿ ದಸರಾ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಇದೆ ಮೊದಲೆಂಬಂತೆ ರಾಜ್ಯದ ವಿವಿಧ ವಿಶಿಷ್ಟ ಕಾಲ ತಂಡದೊಂದಿಗೆ ತಾಲೂಕು ಕಚೇರಿಯಿಂದ ಬನ್ನಿಮಂಟಪದ ವರೆಗೆ ದಸರಾ ಆಚರಣೆ ಸಮಿತಿಯ ಅಧ್ಯಕ್ಷರಾದ ಡಿ ಆರ್ ವಿನಯ್ ಕುಮಾರ್ ಅಧ್ಯಕ್ಷತೆಯಲ್ಲಿ ಅದ್ದೂರಿ ಮೆರವಣಿಗೆಯ ಮೂಲಕ ತೆರಳಲಾಯಿತು ವಿಶಿಷ್ಟ ಸ್ತಬ್ಧ ಚಿತ್ರಗಳು, ಡೊಳ್ಳು ಕುಣಿತ, ಕೋಲಾಟ, ಗೊಂಬೆ ಕುಣಿತ, ಚಂಡೆ, ಕೀಲು ಕುದುರೆ, ವಿಶಿಷ್ಟ ಆಕೃತಿಯ ಗೊಂಬೆಗಳು, ಕುದುರೆ, ಎತ್ತುಗಳು ಕಾರ್ಯಕ್ರಮದ ವೈಭವವನ್ನು ಹೆಚ್ಚಿಸಿತು ಅಲ್ಲದೆ ಮೆರವಣಿಗೆ ಆರಂಭದಿಂದಲೂ ಕೊನೆಯ ತನಕ ಕಿಕ್ಕಿರಿದು ಜನರು ಕಾರ್ಯಕ್ರಮವನ್ನು ವೀಕ್ಷಿಸಿದ್ದು ವಿಶೇಷವಾಗಿತ್ತು.


ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಬಾಗಿ..
ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಭಾಗಿಯಾಗಿದ್ದರು ಸ್ವಲ್ಪ ಹೊತ್ತುಗಳ ಕಾಲ ಮೆರವಣಿಗೆಯಲ್ಲಿ ಪಾಲ್ಗೊಂಡ ಅವರು ಬಳಿಕ ಬನ್ನಿ ಮಂಟಪಕ್ಕೆ ಆಗಮಿಸಿ ಬನ್ನಿ ಮುಡಿಯುವ ಕಾರ್ಯಕ್ರಮ ಬಳಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಭಿಕರಿಗೆ ಹಬ್ಬದ ಶುಭಾಶಯಗಳು ತಿಳಿಸಿದರು.

ಅದ್ದೂರಿ ಕಾರ್ಯಕ್ರಮದಲ್ಲಿ ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಜಿಎನ್, ಪಟ್ಟಣ ಪಂಚಾಯತ್ ಸದಸ್ಯ ಸಿಂತಿಯಾ ಸೇರವು, ಶಾಹಿನ ನಾಸಿರ್, ಕೃಷ್ಣವೇಣಿ, ಗ್ಯಾರೆಂಟಿ ಸಮಿತಿ ಅಧ್ಯಕ್ಷರಾದ ಚಿದಂಬರ್ ಹೂವಿನ ಕೋಣೆ, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಹರೀಶ್ ಎಂ ಎನ್ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಮೌಳಿ, ಬಾಬು ಕಾಮತ್, ಮಂಜು ಸಣ್ಣಕ್ಕಿ, ನಾಸಿರ್, ಮಾಧವ ಶೆಟ್ಟಿ, ಉದಯ್ ಗೌಡ, ಸತೀಶ್ ಬಾವಿಕಟ್ಟೆ, ಚಿರಾಗ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
HOSANAGARA DASARA
