RSS HOSANAGARA:ಅ.11 ರಂದು ಹೊಸನಗರದಲ್ಲಿ ಆರ್ ಎಸ್ ಎಸ್ ಪಥ ಸಂಚಲನ..

ಹೊಸನಗರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಗೊಂಡು ನೂರು ವರ್ಷಗಳು ಸಂದ ಹಿನ್ನಲೆಯಲ್ಲಿ  ಇದೇ ಅಕ್ಟೋಬರ್ 11ರ ಶನಿವಾರ ಮಧ್ಯಾಹ್ನ 3-45ಕ್ಕೆ ಪಟ್ಟಣದಲ್ಲಿ ನೂರಾರು ಗಣವೇಶಧಾರಿಗಳಿಂದ ಪಥ ಸಂಚಲನ  ಹಮ್ಮಿಕೊಳ್ಳಲಾಗಿದೆ.

ಇಲ್ಲಿನ ದ್ಯಾವರ್ಸದ ಅಶೋಕ ರೈಸ್ ಮಿಲ್ ಆವರಣದಿಂದ ನಗರ ಮತ್ತು ಕಸಬಾ ಹೋಬಳಿ ಸ್ವಯಂ ಸೇವಕರ ಗಣವಸ್ತ್ರಧಾರಿಗಳ ತಂಡ ಮಧ್ಯಾಹ್ನ 3-45ಕ್ಕೆ ಹಿಂದೂ ದೇಶ ಪರ ವಿವಿಧ ಘೋಷಣೆಗಳೊಂದಿಗೆ  ಪಟ್ಟಣ ನೆಹರು ರಸ್ತೆ ಮೂಲಕ ಸಾಗಿ ಹಳೆ ಕೋರ್ಟ್ ಸರ್ಕಲ್ ತಲುಪುತ್ತದೆ.
ಕೆರೆಹಳ್ಳಿ ಹಾಗು ಹಂಚಾ ಹೋಬಳಿ ಸ್ವಯಂ ಸೇವಕರ  ತಂಡ ಮಾವಿನಕೊಪ್ಪ ವೃತ್ತದಿಂದ ಶಿವಮೊಗ್ಗ ರಸ್ತೆ ಮೂಲಕ  ಸಾಗಿ ಬಂದು ಏಕಕಾಲಕ್ಕೆ ಹಳೆ ಕೋರ್ಟ್ ಸರ್ಕಲ್ ನಲ್ಲಿ ಎರಡೂ ತಂಡಗಳು ಸಮ್ಮಿಲನಗೊಂಡು ಬಳಿಕ ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ನಡೆಯುವ ಬೃಹತ್ ಗಣವಸ್ತ್ರಧಾರಿಗಳ ಸಮಾವೇಶದಲ್ಲಿ ಒಟ್ಟಾಗಿ ಪಾಲ್ಗೊಳ್ಳಲಿದ್ದಾರೆ.

  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಪ್ರಾಂತ ಸಾಮರಸ್ಯ ಗತಿ ವಿಧಿ ಸಹ ಸಂಯೋಜಕ ಜಿ.ವಿ.ರಾಜೇಶ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದು ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘದ ತಾಲೂಕು ಪ್ರಮುಖ್ ನಾಗರಾಜ್ ಕೋರಿದ್ದಾರೆ.

RSS HOSANAGARA..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading