
ಹೊಸನಗರ: ತಾಲೂಕಿನ ಸೊನಾಲೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು ಇದಕ್ಕೆ ಮೆಸ್ಕಾಂ ಇಲಾಖೆ ಹಾಗೂ ಅರಣ್ಯ ಇಲಾಖೆ ನಡುವಿನ ಸಮನ್ವಯ ಕೊರತೆ ಕಾರಣವಾಗಿದೆ ಎಂದು ಮಾಜಿ ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಏನ್ ಆರೋಪಿಸಿದ್ದಾರೆ.
ಈ ಕುರಿತಾಗಿ ಮಾತನಾಡಿದ ಅವರು
ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಅಕೇಶಿಯ ಸೇರಿ ವಿವಿಧ ಜಾತಿಯ ಮರಗಳು ವಿದ್ಯುತ್ ತಂತಿಗಳ ಮೇಲೆ ವಾಲಿದ್ದು ಇದನ್ನು ಮೆಸ್ಕಾಂ ಇಲಾಖೆಯ ಗಮನಕ್ಕೆ ತಂದರೆ ಅರಣ್ಯ ಇಲಾಖೆಗೆ ತಿಳಿಸುವಂತೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೆ ಮೆಸ್ಕಾಂ ಇಲಾಖೆಗೆ ತಿಳಿಸುವಂತೆ ಅಧಿಕಾರಿಗಳು ಹರಕೆ ಉತ್ತರವನ್ನು ನೀಡುತ್ತಾರೆ ಸೋಮವಾರ ಗ್ರಾಮದ ಆರೋಗ್ಯ ಕೇಂದ್ರ ಮುಂಬಾಗ ಮರ ಬಿದ್ದು ವಿದ್ಯುತ್ ಕಂಬಕ್ಕೆ ಹನಿಯಾಗಿ ವಿದ್ಯುತ್ ಸಂಪರ್ಕ ಕಡಿತ ಗೊಂಡಿತು ಇದರ ದುರಸ್ಥಿ ಕಾರ್ಯ ನಡೆಯುವ ವೇಳೆ ಅ ಮರ ಬಿದ್ದ ಜಾಗದಿಂದ ಸಲ್ಪ ದೂರದಲ್ಲಿ ಮಾತೊಂದು ಮರ ಬೀಳುವ ಹಂತದಲ್ಲಿ ಅದನ್ನು ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳ ಗಮನಕ್ಕೆ ತಂದಾಗ ಅವರು ಅದನ್ನ ಅರಣ್ಯ ಇಲಾಖೆ ಗಮನಕ್ಕೆ ತರುವಂತೆ ತಿಳಿಸಿದರು ಆದರೆ ಅದನ್ನು ಕಡಿಯೋ ಕೆಲಸ ಯಾವ ಇಲಾಖೆಯು ಮಾಡದ ಕಾರಣ ಇಂದು ಅ ಮರ ವಿದ್ಯುತ್ ಕಂಬದ ಮೇಲೆ ಬಿದ್ದು ಮತ್ತೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎರಡು ಇಲಾಖೆ ಸಮನ್ವಯ ಕೊರತೆಯಿಂದಾಗಿ ಗ್ರಾಮ ಕತ್ತಲಲ್ಲಿ ಕಾಲ ಕಳೆಯುವಂತಹದ್ದು ಈ ಕುರಿತಾಗಿ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಅಥವಾ ಗ್ರಾಮಸ್ಥರಿಗೆ ಸರಿಯಾದ ಮಾಹಿತಿಯನ್ನು ನೀಡಬೇಕು ಇಂಥ ಸಂದರ್ಭದಲ್ಲಿ ಯಾವ ಇಲಾಖೆ ಯಾವ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂಬುದನ್ನು ಎಂದು ಅವರು ಆಗ್ರಹಿಸಿದ್ದಾರೆ.
POWER CUT. .
Discover more from Prasarana news
Subscribe to get the latest posts sent to your email.
