
ಹೊಸನಗರ: ತಾಲ್ಲೂಕು ಅರಸಾಳು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಾರೋಹಿತ್ತಲು ಬಳಿಯಲ್ಲಿ ವ್ಯಕ್ತಿಯೊಬ್ಬರು ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ನಿನ್ನೇ ರಾತ್ರಿ ನಡೆದಿದೆ. ಡೈರಿಗೆ ಹಾಲು ಹಾಕಿ ಮನೆಗೆ ವಾಪಸ್ ಬರುವ ವೇಳೆ ನಿಯಂತ್ರಣ ತಪ್ಪಿ ಅವರು ಬೈಕ್ ಸಮೇತ ಹಳ್ಳಕ್ಕೆ ಬಿದ್ದಿದ್ದಾರೆ.
ಇಲ್ಲಿನ ಕಡೆಗದ್ದೆ ಸಮೀಪದ ಗೇರುಗಲ್ಲು ಗ್ರಾಮದ ನಿವಾಸಿ (55) ವರ್ಷದ ದೇವೇಂದ್ರಪ್ಪ ನಿನ್ನೆ ಸಂಜೆ ಡೈರಿಗೆ ಹಾಲು ಹಾಕಲು ತೆರಳಿದ್ದರು. ಆ ಬಳಿಕ ಮನೆಗೆ ವಾಪಸ್ ಬರುವಾಗ, ಈ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಬರುತ್ತಿದ್ದ ಅವರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಹೊಂಡಕ್ಕೆ ಬಿದ್ದಿದ್ದಾರೆ. ಹೊಂಡದಲ್ಲಿ ನೀರು ತುಂಬಿತ್ತು. ಪರಿಣಾಮ ಅಲ್ಲಿಯೇ ಅವರು ಸಾವನ್ನಪ್ಪಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕರು ಆಪ್ತ ಕಾರ್ಯದರ್ಶಿ.

ಶಾಸಕರಾದ ಗೋಪಾಲಕೃಷ್ಣ ಬೇಳೂರು ವಿಧಾನಸಭಾ ಅಧಿವೇಶನದಲ್ಲಿರುವ ಹಿನ್ನೆಲೆ ಅವರ ಸೂಚನೆ ಮೇರೆಗೆ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಮೃತ ದೇಹ ಮರಣೋತ್ತರ ಪರೀಕ್ಷೆ ಮುಗಿಯುವ ತನಕ ಕುಟುಂಬಸ್ಥರೊಂದಿಗೆ ಇದ್ದು ಧೈರ್ಯ ತುಂಬಿದರು ಈ ಸಂದರ್ಭದಲ್ಲಿವಿದ್ಯಾಧರ, ಪರಮೇಶ್ವರ್, ಬಿ.ಪಿ ರಾಮಚಂದ್ರ, ಅಮೀರ್ ಹಂಜಾ, ಈಶ್ವರಪ್ಪ ಗೌಡ, ರಿಪ್ಪನ್ ಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್ ಎಸ್ ಪಿ ಉಪಸ್ಥಿತರಿದ್ದರು.
RIPPAN PETE: DEATH
Discover more from Prasarana news
Subscribe to get the latest posts sent to your email.
