Flash News

PROTEST: ಸುಸಜ್ಜಿತ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೇ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ನಗರ ನಿತಿನ್…

ಹೊಸನಗರ: ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ಹೆರಿಗೆ ಆಸ್ಪತ್ರೆ ನಿರ್ಮಾಣವಾಗುವ ಜೊತೆಗೆ ಕೆಲದಿನಗಳ ಹಿಂದೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ದುರ್ಮರಣಕ್ಕೆೀಡಾದ ಕಡೂರಿನ ಬಾಣಂತಿ ಸುಮಾ ಅವರ ಸಾವಿಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ನಗರ ನಿತಿನ್ ಇಂದು ಸರ್ಕಾರಿ ಆಸ್ಪತ್ರೆ ಮುಂಭಾಗ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅತಿ ಹೆಚ್ಚು ಭೂ ವಿಸ್ತೀರ್ಣವನ್ನು ಹೊಂದಿರುವ ರಾಜ್ಯಕ್ಕೆ ಬೆಳಕನ್ನು ನೀಡಿ ಕತ್ತಲಾಗಿರುವ ನಮ್ಮ ತಾಲೂಕು ಇನ್ನೂ ಸಹ ಶಾಪಗ್ರಸ್ತವಾಗಿಯೇ ಉಳಿದಿದೆ ಇಲ್ಲಿ ಜನರಿಗೆ ಬೇಕಾದ ಹಲವಾರು ಮೂಲಸೌಕರ್ಯಗಳು ಮರೀಚಿಕೆಯಾಗಿದೆ ಅದರಲ್ಲಿ ಪ್ರಮುಖವಾಗಿ ನಮ್ಮ ತಾಲೂಕಿನಲ್ಲಿ ಒಂದು ಸುಸಜ್ಜಿತ ಹೆರಿಗೆ ಆಸ್ಪತ್ರೆ ಇಲ್ಲದೆ ಇರುವುದು ಬಹುದೊಡ್ಡ ಸಮಸ್ಯೆಯಾದರೆ ನಮ್ಮ ತಾಲ್ಲೂಕಿನ ಪ್ರತಿ ವರ್ಷ ನೂರಾರು ಗರ್ಬಿಣಿಯರು ಚಿಕಿತ್ಸೆಗಾಗಿ ಸಾಗರ, ತೀರ್ಥಹಳ್ಳಿ, ಶಿವಮೊಗ್ಗ ಹೀಗೆ ಬೇರೆ ಬೇರೆ ದೂರದ ತಾಲ್ಲೂಕಿಗೆ ಹೋಗುವ ಸ್ಥಿತಿ ಇದೆ‌.
ಪ್ರತಿ ವರ್ಷ ಗರ್ಭಿಣಿಯರಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಹೆರಿಗೆ ಸಂದರ್ಭದಲ್ಲಿ ಮೃತ ಪಟ್ಟಂತಹ ಬಹಳಷ್ಟು ಘಟನೆಗಳು ನಡೆದಿದೆ.  ಅವರಿಗೆ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಹೊಸನಗರ ತಾಲ್ಲೂಕು ಆಸ್ಪತ್ರೆಯಲ್ಲಿ ಸಿಕ್ಕಿದರೆ ಅವರು ಅನ್ಯಾಯವಾಗಿ ಜೀವ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದರು.
ಹಾಗೆ ಇವತ್ತು ನಮ್ಮ ತಾಲ್ಲೂಕಿನ 80% ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳಿಲ್ಲ. ಹೊಸನಗರ ತಾಲ್ಲೂಕಿನ ಹಲವು ಹಳ್ಳಿಗಳು ನೆಟ್ವರ್ಕ್ ಹಾಗೂ ಸಾರಿಗೆ ಸೌಲಭ್ಯವಿಲ್ಲದ ರಿಮೋಟ್ ಏರಿಯಾಗಳು. ಹೀಗಿರುವಾಗ ಹಳ್ಳಿಗಳಲ್ಲಿ ಯಾವುದೇ ದುರ್ಘಟನೆ ನಡೆದರು ತುರ್ತು ಚಿಕಿತ್ಸೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬಂದರೆ ಅಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ.
ಹಾಗೆ ಕೆಲ ದಿನಗಳ ಹಿಂದೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಸಹೋದರಿ ಸುಮ ಸಾವನಪ್ಪಿದ್ದು ಸಹ ತಾಲೂಕಿನ ಪ್ರಮುಖ ಕೇಂದ್ರಗಳಲ್ಲಿ ಸುಸಜ್ಜಿತ ಹೆರಿಗೆ ಆಸ್ಪತ್ರೆ ಇಲ್ಲದೆ ಇರುವುದು ಆದ್ದರಿಂದ ಇಲ್ಲಿನ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ತಾಲೂಕಿನ ಪ್ರಮುಖ ಕೇಂದ್ರದಲ್ಲಿ ಸುಸಜ್ಜಿತ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮವನ್ನು ಕೈಗೊಳ್ಳುವ ಜೊತೆಗೆ ಸಾವಿಗೀಡಾದ ಸುಮಾ ಅವರಿಗೆ ಸೂಕ್ತ ನ್ಯಾಯ ಸಿಗಬೇಕು ಈ ಎಲ್ಲಾ ಕಾರಣಗಳಿಂದ ಸರ್ಕಾರವನ್ನು ಎಚ್ಚರಿಸಲು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ದರಿಸಲಾಗಿದೆ ಎಂದು ಅವರು ತಿಳಿಸಿದರು.

PROTEST..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading