
ಹೊಸನಗರ : ಇದೇ ಡಿಸೆಂಬರ್ 29ರ ಭಾನುವಾರ ಪಟ್ಟಣದ ಮಲೆನಾಡು ಪ್ರೌಢಶಾಲೆಯಲ್ಲಿ ಬೆಳಗ್ಗೆ 9ಗಂಟೆಯಿಂದ ಸಂಜೆ 4ರ ವರಗೆ ನಡೆಯುವ ಇಲ್ಲಿನ ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಇದರ ಆಡಳಿತ ಮಂಡಳಿಯ ಸಾಲಗಾರರಲ್ಲದ ಕ್ಷೇತ್ರ (ಸಾಮಾನ್ಯ) ನಿರ್ದೇಶಕ ಸ್ಥಾನದ ಅಭ್ಯರ್ಥಿಯಾಗಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಜಿ.ನಾಗರಾಜ್ ತಮ್ಮ ಅಪಾರ ಬೆಂಬಲಿಗರೊಂದಿಗೆ ಶುಕ್ರವಾರ ಚುನಾವಣಾ ಅಧಿಕಾರಿ ವಿನಾಯಕ ನಾವಡ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

ಈ ವೇಳೆ ಪ್ರಮುಖರಾದ ಹರತಾಳು ಜಯಶೀಲಪ್ಪಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ದುಮ್ಮ ಅಶೋಕಗೌಡ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಡಿ.ಎಂ.ಸದಾಶಿವ ಶ್ರೇಷ್ಠಿ, ಎಂ.ಪಿ.ಸುರೇಶ್, ಪ್ರವೀಣ್ ಬೃಂದಾವನ, ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಸದಸ್ಯ ಮಹೇಂದ್ರ ಶೇಟ್, ಟೌನ್ ಘಟಕದ ಅಧ್ಯಕ್ಷ ಕೆ.ಎಸ್.ಗುರುರಾಜ್, ಕೆ.ಸುರೇಶ್ ಕುಮಾರ್, ಕಳೂರು ಕೃಷ್ಣಮೂರ್ತಿ, ಗೋಪಾಲಕೃಷ್ಣ, ಏರಗಿ ಉಮೇಶ್, ಮಂಡಾನಿ ಲೋಕೇಶ್, ಮಹಾಬಲರಾವ್, ಟೀಕಪ್ಪ, ಟೀಕಾನಾಯ್ಕ್, ನೇತ್ರಾವತಿ ಭಟ್, ಜಂಬಳ್ಳಿ ಗಣಪತಿ, ನಾಗಪ್ಪ ವಡಗೇರಿ, ರಾಮಪ್ಪ ಸಿಮೆಂಟ್, ಶ್ರೀಧರ್ ಗುಳ್ಳೇಕೊಪ್ಪ, ಇಲಿಯಾಸ್, ಅರವಿಂದ್ ಹೆಚ್.ಕೆ, ಸ್ವಾಮಿ ನೇರ್ಲೆ, ರಾಮಕೃಷ್ಣ, ಹೆಚ್.ಎಂ.ನಿತ್ಯಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
SOCIETY:ELECTION
Discover more from Prasarana news
Subscribe to get the latest posts sent to your email.
