RIPPONPET NEWS:ಆನೆ ದಾಳಿಯಿಂದ ಹಾನಿಗೊಳಗಾದ ರೈತರ ಹೊಲಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ – ತಕ್ಷಣ ಪರಿಹಾರ ಕ್ರಮಕ್ಕೆ ಸೂಚನೆ.

ರಿಪ್ಪನ್‌ಪೇಟೆ:ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಕೆರೆಹಳ್ಳಿ ಹೋಬಳಿ, ಅರಸಾಳು–ಕೆಂಚನಾಲ–ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಕಾಣಿಸಿಕೊಂಡ ಆನೆಗಳ ದಾಳಿಯಿಂದ ಬಾಳೆ, ಭತ್ತ ಸೇರಿದಂತೆ ಹಲವು ಬೆಳೆಗಳು ನಾಶವಾದ ಪ್ರದೇಶಗಳಿಗೆ ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೈತರಿಗೆ ತಕ್ಷಣ ಧೈರ್ಯ ತುಂಬಿದ ಶಾಸಕರು ವೈಯಕ್ತಿಕ ಧನಸಹಾಯ ಹಸ್ತಾಂತರಿಸಿ, ಅರಣ್ಯ ಇಲಾಖೆಗೆ “ಯಾವುದೇ ತಡವಿಲ್ಲದೆ ಹಾನಿಗೊಳಗಾದ ರೈತರಿಗೆ ಸರ್ಕಾರದ ಪರಿಹಾರ ನೀಡಲು ಕ್ರಮ ಕೈಗೊಳ್ಳಿ” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಶಾಸಕರು ಮಾತನಾಡಿ,
“ಮಸರೂರು–ಮಾಣಿಕೆರೆ–ಹೊನ್ನಕೊಪ್ಪ–ಕಮದೂರು ಪ್ರದೇಶಗಳಲ್ಲಿ ಆನೆ ದಾಳಿ ಮರುಕಳಿಸುತ್ತಿದೆ. ಕಳೆದ ವರ್ಷವೂ ಇದೇ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿತ್ತು. ಮುಂದಿನ ದಿನಗಳಲ್ಲಿ ಆನೆಗಳು ಪ್ರವೇಶಿಸದಂತೆ ಸೋಲಾರ್ ಗಾರ್ಡ್ ಅಳವಡಿಕೆಗೆ ತಕ್ಷಣ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದರು.

ಬೆಳ್ಳೂರು  ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಳಸೆ ಗ್ರಾಮದಲ್ಲಿಯೂ ಇದೇ ರೀತಿಯಾಗಿ ಜಮೀನುಗಳಿಗೆ ಆನೆ ದಾಳಿ ನಡೆದಿದ್ದು, “ರೈತರು ಕೈಗೆ ಬಂದ ತುತ್ತು ಬಾಯಿಗೆ ಇಲ್ಲದ ಸ್ಥಿತಿಗೆ ತಲುಪಿದ್ದಾರೆ; ಯಾರನ್ನೂ ಬಿಟ್ಟುಬಿಡದೇ ಪರಿಹಾರ ನೀಡಬೇಕು” ಎಂದು ಶಾಸಕರು ಅಧಿಕಾರಿಗಳಿಗೆ ಆದೇಶಿಸಿದರು.

ಅರಣ್ಯ ಜಾಗ ಆಕ್ರಮಣೆ ಕುರಿತ ನೋಟಿಸ್ ವಿವಾದ
ಮಸರೂರು–ಮಾಣಿಕೆರೆ ಸರ್ವೇ ಸಂಖ್ಯೆಯ ಅರಣ್ಯ ಜಾಗಕ್ಕೆ ಸಂಬಂಧಿಸಿದಂತೆ ರೈತನೊಬ್ಬರಿಗೆ ನೀಡಲಾಗಿದ್ದ ನೋಟಿಸ್‌ ಅನ್ನು ಶಾಸಕರಿಗೆ ತೋರಿಸಿದಾಗ, ಶಾಸಕರು ಸ್ಥಳದಲ್ಲಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡು, “ರೈತರೊಡನೆ ಇದೇ ರೀತಿಯಾಗಿ ವರ್ತಿಸಿದರೆ ಇಲಾಖೆಯ ಮೇಲೆಯೇ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.

“ಮಾಜಿ ಶಾಸಕರು ಮತ್ತು ಬಿಜೆಪಿ ರಾಜಕೀಯ ಆರೋಪ ಮಾಡುವುದು ಉದ್ದೇಶಪೂರ್ವಕ”
ಆನೆ ದಾಳಿ ಹಿನ್ನೆಲೆಯಲ್ಲಿ ಮಾಜಿ ಶಾಸಕರು ಮತ್ತು ವಿರೋಧಪಕ್ಷದವರು ಮಾಡಿರುವ ಆರೋಪಗಳನ್ನು ತಿರಸ್ಕರಿಸಿದ ಗೋಪಾಲಕೃಷ್ಣ ಬೇಳೂರು,
“ಅವರು ಶಾಸಕರಾಗಿದ್ದಾಗಲೂ ಅನೇಕ ಬಾರಿ ಆನೆ ದಾಳಿ ಸಂಭವಿಸಿ ಬೆಳೆ ಹಾನಿಯಾಗಿದೆ. ಆಗ ಯಾವ ಅರಣ್ಯ ಅಧಿಕಾರಿಯ ಮೇಲೆ ಕ್ರಮ ಜರುಗಿಸಿದ್ದಾರೆ? ಈಗ ರಾಜಕೀಯ ಲಾಭಕ್ಕಾಗಿ ಆರೋಪ ಮಾಡುವುದು ನ್ಯಾಯವಲ್ಲ,” ಎಂದು ಪ್ರತಿಕ್ರಿಯಿಸಿದರು.

ಈ ಭೇಟಿ ಸಂದರ್ಭದಲ್ಲಿ ಶಿವಮೊಗ್ಗ ವೃತ್ತದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ, ವನ್ಯಜೀವಿ ವಿಭಾಗದ ಅಧಿಕಾರಿಗಳು, ಹೊಸನಗರ ತಹಶೀಲ್ದಾರ್ ಭರತ್‌ರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ. ಈಶ್ವರಪ್ಪಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರುಮೌಳಿಗೌಡ , ಪಿಂಚನ ಅಲ್ಲ ಗ್ರಾಮ ಪಂಚಾಯಿತಿ ಸದಸ್ಯ  ಉಬೆದುಲ್ಲಾ ಷರೀಫ್ ರಿಪ್ಪನ್ ಪೇಟೆ ಕಾಂಗ್ರೆಸ್ ಘಟಕ ಅಧ್ಯಕ್ಷ ಗಣಪತಿ ಗವ ಟೂರು, ಗ್ರಾಮ ಪಂಚಾಯಿತಿ ಅಧ್ಯಕ್ಷ ಧನಲಕ್ಷ್ಮಿ ಗಂಗಾಧರ್ ಸದಸ್ಯರಾದ ಮಧುಸೂದನ್ ಡಿ. ಈ. ಆಶಿಫ್ ಬಾಷಾ, ನಿರುಪ್ ಕುಮಾರ್, ಪ್ರಕಾಶ್ ಪಾಲೇಕರ್, ಕಾಂಗ್ರೆಸ್ ಮುಖಂಡರುಗಳಾದ ಕಲೀಲ್ ಶರೀಫ್, ಕೆರೆಹಳ್ಳಿ ರವಿ,ಬಿ ಎಸ್ ಎನ್ ಎಲ್ ಶ್ರೀಧರ್, ಗೋಪಾಲಕೃಷ್ಣ ಜಿ ಆರ್   ಹಾಗೂ ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

RIPPONPET NEWS..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading