
ಹೊಸನಗರ: ರೈತ ದಿನಾಚರಣೆ ಅಂಗವಾಗಿ ತೋಟಗಾರಿಕೆ, ಕೃಷಿ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಸಹಯೋಗದಲ್ಲಿ ಇಲ್ಲಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಡಿ.23ರ ಸೋಮವಾರ ಮಧ್ಯಾಹ್ನ 3-30ಕ್ಕೆ ರೈತಾಪಿಗಳಿಗಾಗಿ 'ಸಂಧ್ಯಾ ಶಿಬಿರ - ಕಿಸಾನ್ ಗೋಷ್ಠಿ' ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಎಸ್ ಬಿ ಐ ಪ್ರಾದೇಶಿಕ ಕಚೇರಿಯ ಮ್ಯಾನೇಜರ್ ವಿಜಯಸಾಯಿ ಮದಗಲ್ಲು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪುಟ್ಟನಾಯ್ಕ, ಸಹಾಯಕ ಕೃಷಿ ನಿರ್ದೇಶಕ ಸಚಿನ್ ಜಿ ಹೆಗಡೆ, ಪಶುವೈದ್ಯ ಡಾ. ನಟರಾಜ್ ಟಿ ಹಿರೇಮಠ, ಮೀನುಗಾರಿಕೆ ಇಲಾಖೆಯ ಮೇಲ್ವಿಚಾರಕಿ ಬಿ.ಎಂ.ಬಸಮ್ಮ ಭಾಗವಹಿಸಲಿದ್ದಾರೆ.
ರಿಪ್ಪನ್ ಪೇಟೆ, ಮಾಸ್ತಿಕಟ್ಟೆ, ಗರ್ತಿಕೆರೆ ಹಾಗು ಹೊಸನಗರ ಎಸ್ ಬಿ ಐ ವ್ಯಾಪ್ತಿಯ ರೈತಾಪಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೊಸನಗರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖಾ ವ್ಯವಸ್ಥಾಪಕ ಜಯಂತ್ ಘೋಷ್ ಕೋರಿದ್ದಾರೆ.
HOSANAGARA.
Discover more from Prasarana news
Subscribe to get the latest posts sent to your email.
