
ಹೊಸನಗರ:ಪಟ್ಟಣದ ಕಲ್ಲು ಹಳ್ಳ ಸಮೀಪ ಇರುವ ಹಿಂದು ರುದ್ರಭೂಮಿ ನಿರ್ವಹಣೆ ಇಲ್ಲದೆ ಸಂಪೂರ್ಣ ಪಾಳುಬಿದ್ದ ಸ್ಥಿತಿಗೆ ತಲುಪಿ ಮಳೆ ಗಳದಲ್ಲಿ ಶವಾ ಸಂಸ್ಕಾರಕ್ಕೆ ಬಹಳ ಸಮಸ್ಯೆ ಉಂಟಾಗಿ ಶವಸಂಸ್ಕಾರಕ್ಕೆ ಬಂದವರು ಬಹಳಷ್ಟು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು ಇದನ್ನ ಮನಗಂಡು ಈ ಹಿಂದೆ ಪಟ್ಟಣ ಪಂಚಾಯತ್ ಬಿಜೆಪಿ ಸದಸ್ಯರ ಘಟಕವು ಸಂಸದರಾದ ಬಿ ವೈ ರಾಘವೇಂದ್ರ ಅವರಿಗೆ ಮನವಿಯನ್ನು ಸಲ್ಲಿಸಿತ್ತು ಇದಕ್ಕೆ ಸ್ಪಂದಿಸಿದ ಸಂಸದ ಬಿ ವೈ ರಾಘವೇಂದ್ರ ತಮ್ಮ ವಿಶೇಷ ನಿದಿ ಇಂದ 5 ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಿದರು ಇದೀಗ ಸ್ಥಳೀಯರ ಬಹುದಿನದ ಬೇಡಿಕೆ ಈಡೇರಿದ್ದು ರುದ್ರಭೂಮಿಯಲ್ಲಿ ವ್ಯವಸ್ಥಿತ ಸಿಲಿಕಾನ್ ಚೇಂಬರ್ ಹಾಗೂ ಮೇಲ್ಚಾವಣಿ ನಿರ್ಮಾಣಗೊಂಡಿದೆ..
ಅಭಿನಂದನೆ.
2005ರಲ್ಲಿ ಎಂ.ಎನ್. ಸುಧಾಕರ್ ಅವರು ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ವೀರೇಂದ್ರ ಹೆಗ್ಗಡೆಯವರಿಗೆ ಮನವಿ ಸಲ್ಲಿಸಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ಇಲ್ಲಿ ಸಿಲಿಕಾನ್ ಛೇಂಬರ್ ಅಳವಡಿಸಲಾಗಿತ್ತು. ಆದರೆ, ದಶಕಗಳ ಕಾಲದ ಬಳಕೆಯಿಂದಾಗಿ ಈ ಛೇಂಬರ್ ಹಾಗೂ ಮೇಲ್ಛಾವಣಿ ನಾದುರಸ್ತಿಗೊಂಡು ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದರುಸಾರ್ವಜನಿಕರ ಈ ಸಮಸ್ಯೆಯನ್ನು ಮನಗಂಡ ಪಟ್ಟಣ ಪಂಚಾಯತಿ ಬಿಜೆಪಿ ಘಟಕವು ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿದ ಸಂಸದರು ತಮ್ಮ ನಿಧಿಯಿಂದ 5 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದರು. ನಿರ್ಮಿತಿ ಕೇಂದ್ರದ ಮೂಲಕ ಅತ್ಯಂತ ವೇಗವಾಗಿ ಕಾಮಗಾರಿ ನಡೆದಿದ್ದು, ಮಳೆಗಾಲ ಆರಂಭವಾಗುವ ಮೊದಲೇ ಸಿದ್ಧಗೊಂಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ನೂತನ ವ್ಯವಸ್ಥೆಯಿಂದಾಗಿ ಅತ್ಯಂತ ಕಡಿಮೆ ಕಟ್ಟಿಗೆ ಬಳಸಿ, ಮಳೆ ನೀರಿನ ಅಡೆತಡೆಯಿಲ್ಲದೆ ಗೌರವಯುತವಾಗಿ ಅಂತ್ಯಸಂಸ್ಕಾರ ನಡೆಸಲು ಅನುಕೂಲವಾಗಿದೆ.
ಸ್ಮಶಾನಕ್ಕೆ ಅನುದಾನ ನೀಡಿದ ಸಂಸದರಾದ ಬಿ ವೈ ರಾಘವೇಂದ್ರ ಅವರಿಗೆ ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಎಂ ಎನ್ ಸುಧಾಕರ್ ಹೊಸನಗರ ಜನತೆಯ ಪರವಾಗಿ ವಿಶೇಷ ಅಭಿನಂದನೆ ತಿಳಿಸಿದ್ದಾರೆ....
PRASARANANEWS.
Discover more from Prasarana news
Subscribe to get the latest posts sent to your email.
