
ನಿಟ್ಟೂರು:ಸಿಇಟಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿಚಾರ ಅಸಂಖ್ಯ ಬ್ರಾಹ್ಮಣರ ಭಾವನೆಗೆ ಧಕ್ಕೆ ತಂದಿದ್ದು, ಇದನ್ನು ನಾವು ಖಂಡಿಸುತ್ತೇವೆ’ ಎಂದು ರಾಜ್ಯ ಬ್ರಾಹ್ಮಣ ಸಮಾಜದ ಕೇಂದ್ರ ಕಾರ್ಯಕಾರಿಣಿ ಸದಸ್ಯ ರವೀಶ್ ನಿಟ್ಟೂರು ತಿಳಿಸಿದರು.
ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಅವರು ಮೊನ್ನೆ ಸಿಇಟಿ ಪರೀಕ್ಷೆಯಲ್ಲಿ ಅಧಿಕಾರಿಗಳಿಗೆ ಜನಿವಾರ ಕಾಣಿಸಿತು ಕೂಡಲೇ ಅದನ್ನು ತೆಗೆಸುವ ಕೆಲಸವನ್ನು ಅಧಿಕಾರಿಗಳು ಮಾಡಿದ್ದು ಈ ಬಾರಿ ಸಹ ನೆಪ ಮಾತ್ರಕ್ಕೆ ಸರ್ಕಾರ ಮಧ್ಯಪ್ರವೇಶಿಸಿ ಮೂವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿತು ಆದರೆ ಅವರನ್ನು ಒಂದೆರಡು ತಿಂಗಳುಗಳ ಕಾಲ ಅಮಾನತ್ತಿನಲ್ಲಿಡುವುದು ಅಷ್ಟೇ ಮತ್ತೆ ಅವರಿಗೆ ಬಡ್ತಿ ಸಿಕ್ಕರು ಸಿಗಬಹುದು ಏಕೆಂದರೆ ಕಳೆದ ವರ್ಷವೂ ಪ್ರಕರಣ ನಡೆದಿತ್ತು.
ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸಲು ಕಾರಣ ನಾವಿರೋದು ಕೇವಲ ಎರಡು ಪರ್ಸೆಂಟ್ ನಷ್ಟು ನಮ್ಮ ವೋಟು ಯಾರಿಗೂ ಬೇಡ ಸದಾ ನಮ್ಮ ಮೇಲೆ ಅನಿಷ್ಠಕೆಲ್ಲ ಅಂಗಾರಕ ಕಾರಣ ಎಂಬಂತೆ ಹಿಂದೂ ಸಮಾಜದ ಆನಿಷ್ಠ ಗಳಿಗೆ ಬ್ರಾಹ್ಮಣವೇ ಕಾರಣ ಎಂಬಂತಾಗಿದೆ ಎಂದರು.
ಜನಿವಾರ ಎಂದರೆ ಅದು ಕೇವಲ ಮೂರು ಎಳೆಗಳ ಹತ್ತಿಯ ದಾರ ಮಾತ್ರ ಅಲ್ಲ. ಅದು ವಿಪ್ರರೂ ಸೇರಿದಂತೆ ಆರ್ಯ ವೈಶ್ಯರು, ಕ್ಷತ್ರಿಯ ಸಮುದಾಯದವರ ಆಚಾರ, ವಿಚಾರ, ಅನುಷ್ಠಾನದ ಸಂಕೇತವಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪ್ರಕರಣ ಈಗಾಗಲೇ ರಾಜ್ಯಾದ್ಯಂತ ಸದ್ದು ಮಾಡಿದೆ. ನಾವೂ ಪ್ರಕರಣ ಖಂಡಿಸುತ್ತೇವೆ ಮತ್ತು ಈ ಬಗ್ಗೆ ರಾಜ್ಯ ಸರ್ಕಾರವು ಕಠಿಣ ಕ್ರಮವನ್ನು ವಹಿಸಿರುವುದರ ಜೊತೆಗೆ ಇಂತಹ ಘಟನೆಗಳು ಮತ್ತೆ ಮರುಕಳಿಸಿದಂತೆ ಕಠಿಣ ಕ್ರಮವನ್ನು ಜಾರಿಗೆ ತರಬೇಕಾಗಿ ಅವರು ಆಗ್ರಹಿಸಿದರು.
PRASARANANEWS..
Discover more from Prasarana news
Subscribe to get the latest posts sent to your email.
