
ಹೊಸನಗರ:ಏಪ್ರಿಲ್ 30 ರಂದು ಪಟ್ಟಣದ ಹೊಸನಗರ ನಗರ ಮುಖ್ಯ ರಸ್ತೆಯಲ್ಲಿರುವ ಶ್ರೀ ವೀರಾಂಜನೇಯ ದೇವಸ್ಥಾನ ಬೀಗ ಮುರಿದು ನುಗ್ಗಿದ ಕಳ್ಳರು ಕಾಣಿಕೆ ಹುಂಡಿಯ ಹಣ ಕಳವು ಮಾಡಿದ್ದರು. ಏಪ್ರಿಲ್ 30 ರ ಬೆಳಿಗ್ಗೆ ಎಂಟು ಗಂಟೆಗೆ ಅರ್ಚಕರು ದೇವಸ್ಥಾನಕ್ಕೆ ಆಗಮಿಸಿದ್ದು ಈ ವೇಳೆ ದೇವಸ್ಥಾನದ ಬೀಗ ಮುರಿದು ಮೂರು ಕಾಣಿಕೆ ಹುಂಡಿಗಳ ಹಣವನ್ನು ತೆಗೆದಿದ್ದು ಬೆಳಕಿಗೆ ಬಂದಿರುತ್ತದೆ ಕಳ್ಳರು ದೇವಸ್ಥಾನದ ಸಿಸಿಟಿವಿಯನ್ನ ಮುರಿದಿದ್ದು ಅಲ್ಲದೆ ದೇವಸ್ಥಾನದ ವಿದ್ಯುತ್ ಸಂಪರ್ಕವನ್ನು ಸಂಪೂರ್ಣ ಸ್ಥಗಿತಗೊಳಿಸಿ ಕೃತಿಯಸೆಗಿದ್ದಾರೆ ಜೊತೆಗೆ ಸರಿಸುಮಾರು 25 ಸಾವಿರ ಹಣ ಕಳ್ಳತನವಾಗಿರುವ ಬಗ್ಗೆ ದೇವಸ್ಥಾನ ಆಡಳಿತ ಮಂಡಳಿ ದೂರನ್ನು ದಾಖಲಿಸಿತ್ತು.
ಈ ಕುರಿತಾಗಿ ತನಿಖೆ ಕೈಗೊಂಡ ಪೊಲೀಸ್ ಇಲಾಖೆ, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಹೆಚ್ಚುವರಿ ಪೋಲಿಸ್ ಅಧೀಕ್ಷಕರು ಶಿವಮೊಗ್ಗ, ಉಪಾ ಅದೀಕ್ಷಕರು ತೀರ್ಥಹಳ್ಳಿ ಉಪವಿಭಾಗ, ಎಂ ಐ ಗೌಡಪ್ಪಗೌಡ ಪೊಲೀಸ್ ವೃತ್ತ ನಿರೀಕ್ಷಕರು ಹೊಸನಗರ, ಶಂಕರ್ ಗೌಡ ಪಾಟೀಲ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹೊಸನಗರ ಇವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಿ ತನಿಖೆಯನ್ನು ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಯನ್ನ ಭದ್ರಾವತಿ ವಾಸಿ ಮೂರ್ತಿ ಬಿ @ ಕತ್ತೆ ಮೂರ್ತಿ ಎಂದು ಗುರುತಿಸಲಾಗಿದೆ. ಈ ಪ್ರಕರಣದ ಜೊತೆಯಲ್ಲಿ ಈ ಹಿಂದೆ ಬೈಕ್ ಕಳ್ಳತನವಾದ ಪ್ರಕರಣದಲ್ಲಿಯೂ ಸಹ ಇದೇ ಆರೋಪಿ ಆರೋಪಿತನಾಗಿದ್ದು ಎರಡು ಪ್ರಕರಣಗಳಲ್ಲಿ ಬೇಕಿದ್ದ ಆರೋಪಿಯನ್ನ ಬಂಧಿಸಲಾಗಿದ್ದು ಆರೋಪಿಯಿಂದ 60,000 ಬೆಲೆಬಾಳುವ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಹಾಗೂ ನಗದನ್ನ ವಶಪಡಿಸಿಕೊಳ್ಳಲಾಗಿದೆ ಈ ಕಾರ್ಯಚರಣೆಯಲ್ಲಿ ಏ ಎಸ್ ಐ ಸತೀಶ್ ರಾಜ್ ಸಿಬ್ಬಂದಿಗಳಾದ ಮಾಯಪ್ಪ ಗೋಕಾವಿ, ಸುನಿಲ್ ಪಾಲ್ಗೊಂಡಿದ್ದರು.
ARRESTED..
Discover more from Prasarana news
Subscribe to get the latest posts sent to your email.
