CONDOLENCE:ಚೆನ್ನಮ್ಮರ ನಿಧನಕ್ಕೆ ತಾಲೂಕು ಒಕ್ಕಲಿಗರ ಸಂಘದಿಂದ ಸಂತಾಪ..

ಹೊಸನಗರ:ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ, ಹಿರಿಯ ಚೇತನ ಶ್ರೀಮತಿ ಚೆನ್ನಮ್ಮ ಅವರ ನಿಧನಕ್ಕೆ ಹೊಸನಗರ ತಾಲೂಕು ಒಕ್ಕಲಿಗರ ಸಂಘವು ತೀವ್ರ ಸಂತಾಪ ಸೂಚಿಸಿದೆ. ಅವರ ಅಗಲಿಕೆಯು ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಸಂಘದ ಅಧ್ಯಕ್ಷ ಹಾಲಗದ್ದೆ ಉಮೇಶ್ ತಿಳಿಸಿದರು.
ಬುಧವಾರ ಪಟ್ಟಣದ ಒಕ್ಕಲಿಗ ಸಮುದಾಯ ಭವನದಲ್ಲಿ  ಶ್ರೀಮತಿ ಚೆನ್ನಮ್ಮ ಅವರ ನಿಧನಕ್ಕೆ  ಸಂತಾಪ ಸೂಚಿಸಿ ಮಾತನಾಡಿದ ಅವರು ದೇವೇಗೌಡರ ದೀರ್ಘ ರಾಜಕೀಯ ಪಯಣದಲ್ಲಿ ಶ್ರೀಮತಿ ಚೆನ್ನಮ್ಮ ಅವರು ಪಾತ್ರ ಪ್ರಮುಖವಾಗಿದ್ದು ಸರಳತೆ ಮತ್ತು ತಾಳ್ಮೆಯ ಸಾಕಾರ ಮೂರ್ತಿಯಾಗಿದ್ದ ಅವರ ಅಗಲಿಕೆ ಇಡೀ ನಾಡಿಗೆ ತುಂಬಲಾರದ ನಷ್ಟ  ಎಂದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕ ಎಚ್.ಡಿ. ರೇವಣ್ಣ ಸೇರಿದಂತೆ ಇಡೀ ಕುಟುಂಬಕ್ಕೆ ಈ ತೀವ್ರ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಬದಲ್ಲಿ ರತ್ನಾಕರ್ ಕುಂಟಗೆ, ಅಂಕಿತ ಮಕೇರಿ, ಎಎನ್ ಆದಿರಾಜ್, ಐಸಿ ಪ್ರಕಾಶ್, ಕೆ ವೆಂಕಟೇಶ್ ಹೆಗಡೆ ಬಿಟಿ ಧರ್ಮಪ್ಪ ಗೌಡ,, ಸುರೇಶ್ ಕೆಕೆ, ಪೂರ್ಣೇಶ್ ಮಲೆಬೈಲ್, ಶ್ರೀನಿವಾಸ್ ಎನ್ ಕೃಷ್ಣಮೂರ್ತಿ, ಪ್ರೀತಮ್ ಗೌಡ, ವೀಣಾ ಪುರುಷೋತ್ತಮ್ ಹಿಟಾಚಿ ಶ್ರೀಧರ್, ಉಪಸ್ಥಿತರಿದ್ದರು.

CONDOLENCE..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading