ELECTRICITY PROBLEM: “ದೀಪದ ಕೆಳಗೆ ಕತ್ತಲು”ವಿದ್ಯುತ್ ವಿಚಾರದಲ್ಲಿ ಹೊಸನಗರಕ್ಕೆ ಸರಿ ಹೊಂದುವ ಗಾದೆ:ಎಂ.ಎನ್.ಸುಧಾಕರ್ .

ಹೊಸನಗರ:ರಾಜ್ಯಕ್ಕೆ ಬೆಳಕು ನೀಡುವ ತಾಲೂಕು ಎಂಬ ಹೆಗ್ಗಳಿಕೆ ,ಇಲ್ಲಿ ವಸತಿ ಜಾಗ ಕಮ್ಮಿ ಮುಳುಗಡೆ ಜಾಗವೇ ಜಾಸ್ತಿ ,ಹಲವಾರು ವಿದ್ಯುತ್ ಯೋಜನೆಗಳಿಂದ ನೀರಿನಿಂದಲೇ ತುಂಬಿ ತಾನು ಬೆಂಕಿಯಲ್ಲಿ ಉರಿಯುತ್ತಾ ಬೇರೆಯವರಿಗೆ ಬೆಳಕು ನೀಡುವ ದೀಪದ ಜಾಗದಲ್ಲಿ ನಮ್ಮ ತಾಲೂಕು .ಇದ್ಯಾವುದೆ ಅರಿವು ಇಲ್ಲದ ಅಧಿಕಾರಿಗಳಿಂದ ನಿರಂತರ ಕತ್ತಲಲ್ಲೇ ಕಳೆಯುವ ಸ್ಥಿತಿ ನಮ್ಮ ತಾಲೂಕಿನ ಪರಿಸ್ಥಿತಿ .ಗಾಳಿ ,ಮಳೆ ,ಗುಡುಗು ಮತ್ತು ಸಿಡಿಲಿಂದ ವಿದ್ಯುತ್ ವ್ಯತ್ಯಯ ಕಾರಣ ಸಾಮಾನ್ಯ ಆದ್ರೆ ನಮ್ಮ ತಾಲ್ಲೂಕಿನಲ್ಲಿ ಇದ್ಯಾವುದು ಇಲ್ಲದೇನು ಕರೆಂಟ್ ನಾಪತ್ತೆ ಆಗುತ್ತೆ .ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಾಗರದಿಂದ ಹೊಸನಗರಕ್ಕೆ ಬರುವ 33kv ಮಾರ್ಗದಲ್ಲಿ ಮರಗಳಿಂದ ಸಮಸ್ಯೆ ಅಂತ ಇದು ಪ್ರತಿ ವರ್ಷದ ಉತ್ತರ ಮತ್ತೊಂದು ಅರಣ್ಯ ಇಲಾಖೆಯವರು ನಮ್ಮೊಂದಿಗೆ ಸ್ಪಂದಿಸುತ್ತಿಲ್ಲ ಅಂತ ,ಈ ಮುಖ್ಯ ಲೈನ್ ವ್ಯವಸ್ಥಿತವಾಗಿ ಇಡಲು ಪ್ರತಿ ತಿಂಗಳು ಮೂರು ಲಕ್ಷ ರೂಪಾಯಿ ವ್ಯಯ ಮಾಡುತ್ತಿದ್ದು ಅವರಿಂದ ಸರಿಯಾಗಿ ಕೆಲಸ ತೆಗೆದುಕೊಳ್ಳೋ ಕೆಲಸ ಆಗದೆ ಅವರ ಬಿಲ್ ಮಾತ್ರ ಪ್ರತಿ ತಿಂಗಳು ಸುಗಮವಾಗಿ ಪಾಸ್ ಆಗುತ್ತಿರುವುದು ನೋಡಿದರೆ ಅಧಿಕಾರಿಗಳು ಗುತ್ತಿಗೆಯನ್ನು ಬೇರೆವರ ಹೆಸರಿನಲ್ಲಿ ಇವರೇ ನಿರ್ವಸಿಸುತ್ತಿದ್ದಾರೆ ಅನ್ನೋ ಅನುಮಾನ ಸಾರ್ವಜನಿಕರಲ್ಲಿ .ಬಹಳ ವರ್ಷಗಳಿಂದ ಇಲ್ಲೇ ಇರುವ ಅಧಿಕಾರಿಗಳಿಗೆ  ಇಲ್ಲಿನ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ ಅಂದ್ರೆ ಮೇಲ್ನೋಟಕ್ಕೆ ಇವರಿಗೆ ಇಲ್ಲಿನ ಮುಗ್ಧ ಜನರಿಗೆ ಯಾಮಾರಿಸೋ ಕೆಲಸ ಮಾಡುತ್ತಿರುವ ಹಾಗೆ ಕಾಣುತ್ತಿದೆ .ಇನ್ನೊಂದು ವಾರದಲ್ಲಿ ಸಮರ್ಪಕ ವಿದ್ಯುತ್ ನೀಡದಿದ್ದಲ್ಲಿ ಅಧಿಕಾರಿಗಳನ್ನೆ ನೇರ ಹೊಣೆ ಮಾಡಿ ಅವರ ಕಚೇರಿಯಲ್ಲೇ ದಿಗ್ಬಂಧನ ಹಾಕಿ ಅವರ ಮೇಲಾಧಿಕಾರಿಗಳು ಬರೋವರೆಗೆ ಪ್ರತಿಭಟಿಸೋದು ಅನಿವಾರ್ಯ ಎಂಬ ಎಚ್ಚರಿಯನ್ನು ಪಟ್ಟಣ ಪಂಚಾಯತ್ ಮಾಜೀ ಅಧ್ಯಕ್ಷರು ಹಾಗೂ ಶಿವಮೊಗ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾ ಅಧ್ಯಕ್ಷರಾದ ಎಂ.ಎನ್.ಸುಧಾಕರ್ ಎಚ್ಚರಿಕೆ ನೀಡ್ಡಿದ್ದರೆ.

ELECTRICITY PROBLEM..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading