G K B:ಹೊಸನಗರ ತಾಲೂಕನ್ನು ‘ಬರಪೀಡಿತ ಪ್ರದೇಶ’ ಎಂದು ಘೋಷಿಸಲು ಆಗ್ರಹಿಸಿ ಗ್ರಾಮಸ್ಥರಿಂದ ಶಾಸಕರಿಗೆ ಮನವಿ.

ಹೊಸನಗರ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕನ್ನು ಭಾರಪೀಡಿತ ಪ್ರದೇಶವೆಂದು ಘೋಷಿಸುವಂತೆ ತಾಲೂಕಿನ ಸೊನಲೆ, ವಾರಂಬಳ್ಳಿ, ಕೊಳಗಿ, ಈರಗೋಡು, ನಿವಣೆ ಮತ್ತು ಬಿಳ್ಳೂಡಿ ಗ್ರಾಮದ ಗ್ರಾಮಸ್ಥರು ಶಾಸಕರಾದ ಗೋಪಾಲಕೃಷ್ಣ ಬೇಳೂರು ರವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.ಶನಿವಾರ ಶಾಸಕರ ನಿವಾಸಕ್ಕೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರದಲ್ಲಿ ಹೊಸನಗರ ತಾಲೂಕು ಅಣೆಕಟ್ಟುಗಳ ಅಗರವಾಗಿ ಒಂದಿಷ್ಟು ರೈತರ ಬದುಕು ಬೀದಿಗೆ ಬಂದಿದೆ ಇದಾದ ನಂತರ ಅಂತ ಹಂತವಾಗಿ ಒಂದೊಂದು ಸಮಸ್ಯೆ ಮಲೆನಾಡ ರೈತರಿಗೆ ಒದ್ದಾಡುತ್ತಿರುವ ಸಮಯದಲ್ಲಿ ಇದೀಗ ಮಳೆಯ ಕೊರತೆಯಿಂದಾಗಿ ಬೆಳೆಯಿಲ್ಲದೆ ರೈತರು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಈ ಬಾರಿಯೂ ಸಹ ಈ ಭಾಗದಲ್ಲಿ ಅತಿ ಕಡಿಮೆ ಮಳೆಯಾಗಿದ್ದು ಕೆಲವೊಂದು ಪ್ರದೇಶಗಳಲ್ಲಿ ಮಾತ್ರ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಿದೆ ಆದುದರಿಂದ ಇವೆಲ್ಲವನ್ನ ಗಮನದಲ್ಲಿಟ್ಟುಕೊಂಡು ಹೊಸನಗರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಹೊಸನಗರವನ್ನು ಸೇರಿಸುವಂತೆ ನಿಮ್ಮ ಮೂಲಕ ಸರ್ಕಾರಕ್ಕೆ ಮನವಿಯನ್ನ ಮಾಡುವುದಾಗಿ ತಿಳಿಸಿದರು. ಸೊನಲೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ, ಸುರೇಶ್, ಗಿರೀಶ್, ಮಂಜುನಾಥ್, ಶ್ರೀಧರ್, ಶಂಕ್ರಪ್ಪ, ಹಾಲಪ್ಪ, ಸುರೇಶ್, ಯೋಗೇಂದ್ರ, ಮಂಜು ನಾಯಕ್, ಧರ್ಮಪ್ಪ, ಶೇಖರಪ್ಪ, ಸೋಮಶೇಖರ್ ಮುಂತಾದವರು ಉಪಸ್ಥಿತರಿದ್ದರು.

G K B..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading