
ಹೊಸನಗರ:ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 40 ವರ್ಷಗಳಿಗೂ ಹೆಚ್ಚುಕಾಲ ಪಕ್ಷಕೆ ದುಡಿದಿರುವ ಹಿರಿಯ ಕಾಂಗ್ರೆಸ್ ನಾಯಕರಾದ ಹೇಚ್ ಎಸ್ ಸುಂದರೇಶ್ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದುಈ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಏನ್ ಸತೀಶ್ ಆಗ್ರಹಿಸಿದ್ದಾರೆ.
ಶುಕ್ರವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ತನ್ನ ಬಳಿ ಸಚಿವ ಮಧು ಬಂಗಾರಪ್ಪ ಅತ್ಯಾಪ್ತನೊಬ್ಬ ಸೂಡಾ ಕಚೇರಿಗೆ ಬಂದು 25 ಲಕ್ಷ ರೂಪಾಯಿ ಲಂಚ ಕೇಳಿದ್ದಾರೆ ಎಂದು ಸುಂದರೇಶ್ ಹೇಳಿರುವುದು ಆಘಾತಕಾರಿಯಾಗಿದೆ. ಯಾರೋ ವಿರೋಧಪಕ್ಷದ ನಾಯಕರು ಇದನ್ನು ಹೇಳಿದ್ದರೆ ಹಗುರವಾಗಿ ಪರಿಗಣಿಸಬಹುದಿತ್ತು. ಆದರೆ ಶಿವಮೊಗ್ಗದಲ್ಲಿ ಕಾಂಗ್ರೆಸ್ಸನ್ನು ಕಟ್ಟಿ ಬೆಳೆಸಿದ, 40 ವರ್ಷಕ್ಕೂ ಹೆಚ್ಚಿನ ಕಾಲ ಆ ಪಕ್ಷಕ್ಕೆ ದುಡಿದಿರುವ ಹಿರಿಯ ನಾಯಕರೊಬ್ಬರು ತಮ್ಮದೇ ಪಕ್ಷದ ಸಚಿವರ ವಿರುದ್ಧ ಇಂತಹ ಗಂಭೀರ ಆರೋಪ ಮಾಡಿರುವುದನ್ನ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಜೊತೆಗೆ ಈ ಕುರಿತಾಗಿ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಜೊತೆಗೆ ನಿನ್ನೆಯಿಂದ ಕಾಂಗ್ರೆಸ್ ನ ಕೆಲ ಮುಖಂಡರು ಸುಂದರೇಶ್ ಗೆ ಆರೋಗ್ಯ ಸಮಸ್ಯೆ ಮಾನಸಿಕ ಒತ್ತಡ ಹಾಗೂ ಇನ್ನಿತರ ಕಾರಣ ಗಳಿಂದ ಅ ರೀತಿಯ ಹೇಳಿಕೆ ನೀಡಿರುವುದಾಗಿ ಹೇಳಿಕೆಯನ್ನು ನೀಡುತ್ತಿದ್ದಾರೆ ಇದು ತಮ್ಮ ಪಕ್ಷದಲ್ಲಿರುವ ಗೊಂದಲ ಮತ್ತು ಭ್ರಷ್ಟಾಚಾರವನ್ನು ಮರೆಮಾಚುವ ಹೇಳಿಕೆಯಾಗಿದೆ ಎಂದರು..
ಹೊಸನಗರ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಿ.
ಇದೇ ಸಂದರ್ಭದಲ್ಲಿ ತೀರ್ಥಹಳ್ಳಿ ಹಾಗೂ ಸಾಗರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆಯಾಗಿದೇ ಆದರೆ ಹೊಸನಗರ ತಾಲೂಕನ್ನು ಕೈ ಬಿಡಲಾಗಿದೆ ಈ ತಾರತಮ್ಯ ಯಾಕೆ ಈ ಭಾಗದಲ್ಲಿಯೂ ಸಹ ಮಳೆಯ ಪ್ರಮಾಣ ಕಡಿಮೆ ಇದ್ದು ಈ ಕ್ಷೇತ್ರದ ಶಾಸಕರಿಗೆ ಹೊಸನಗರದ ಮಳೆಯ ಕೊರತೆ ಕಾಣಲಿಲ್ಲವೆ ಎಂದರು ಇನ್ನಾದರೂ ಶಾಸಕರು ಈ ಬಗ್ಗೆ ಗಮನಹರಿಸಬೇಕು ಜೊತೆಗೆ ಇದನ್ನ ತಾಲೂಕು ಬಿಜೆಪಿ ಸಹ ಆಗ್ರಹಿಸುತ್ತದೆ ಎಂದರು.
ಈ ಸಂದರ್ಬದಲ್ಲಿ ಯುವರಾಜ್ ಎ ವಿ ಮಲ್ಲಿಕಾರ್ಜುನ್, ಮೆಣಸೆ ಆನಂದ,ಶಿವಾನಂದ, ವಿಶ್ವನಾಥ್, ಗಣೇಶ್,ಕಿರಣ್,ಮುಂತಾದವರು ಉಪಸ್ಥಿತರಿದ್ದರು.
RESUGNATION..
Discover more from Prasarana news
Subscribe to get the latest posts sent to your email.
