
ಹೊಸನಗರ: ಜಿಲ್ಲಾ ಪಂಚಾಯತ್ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ ಈ ನಡುವೆ ಜಿಲ್ಲಾ ಪಂಚಾಯತ್ ರಾಜಕೀಯ ಪಕ್ಷಗಳ ಟಿಕೆಟಿಗೆ ಹಲವು ಪಕ್ಷಗಳ ಮುಖಂಡರು ಪೈಪೋಟಿಯನ್ನು ನಡೆಸುತ್ತಿದ್ದಾರೆ ಈ ನಡುವೆ ನಗರ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸಾಮಾಜಿಕ ಹೋರಾಟಗಾರ ಸುಧೀಂದ್ರ ಪಂಡಿತ್ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುತ್ತಾರೆ.
ಈ ಕುರಿತಂತೆ ಮಾತನಾಡಿದ ಅವರು ನಗರ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಈ ಬಾರಿ ಸ್ಪರ್ಧಿಸಲಿದ್ದು ನಾನು ಅಧಿಕಾರದ ಆಸೆಗಾಗಿ ಚುನಾವಣೆಗೆ ನಿಲ್ಲುತ್ತಿಲ್ಲ. ವ್ಯವಸ್ಥೆಯಲ್ಲಿ ಬದಲಾವಣೆ ತರಲು ಮತ್ತು ಕ್ಷೇತ್ರದ ಕೊನೆಯ ಪ್ರಜೆಗೂ ಸರ್ಕಾರದ ಸೌಲಭ್ಯಗಳು ತಲುಪುವಂತೆ ಮಾಡಲು ಈ ನಿರ್ಧಾರ ಕೈಗೊಂಡಿದ್ದೇನೆ ಎಂದರು. ಯಾವುದೇ ಪಕ್ಷದ ಹಂಗಿಲ್ಲದ ಸಾರ್ವಜನಿಕರೇ ನನ್ನ ಹೈಕಮಾಂಡ್ ಹಾಗಾಗಿ ನಗರ ಕ್ಷೇತ್ರದ ಬುದ್ಧಿವಂತ ಮತದಾರರು ನನ್ನ ಕೈ ಹಿಡಿಯಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದರು.
ಈ ಹಿಂದೆ ಸಂಪೇಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ ಸದಸ್ಯನಾಗಿ ರಾಜಕೀಯ ಅನುಭವವನ್ನು ಪಡೆದಿರುವ ನಾನು ಹಲವು ಜನಪರ ಸಾಮಾಜಿಕ ಹೋರಾಟಗಳನ್ನು ಮಾಡಿದ್ದೇನೆ ಆದ್ದರಿಂದ ಈ ಬಾರಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನಗರ ಕ್ಷೇತ್ರದಲ್ಲಿ ಮತದಾರರು ನನಗೆ ಆಶೀರ್ವದಿಸಲಿದ್ದಾರೆ ಎಂದು ಸುಧೀಂದ್ರ ಪಂಡಿತ್ ತಿಳಿಸಿದರು.
INDEPENDENT..
Discover more from Prasarana news
Subscribe to get the latest posts sent to your email.
