Flash News

ELECTION:ತಳಮಟ್ಟದ ಶ್ರಮಕ್ಕೆ ಸಿಗಲಿದೆ ಮನ್ನಣೆ: ಮಾರುತಿಪುರ ಜಿ.ಪಂ. ಟಿಕೇಟ್ ಆಕಾಂಕ್ಷಿ ಸಂತೋಷ್ ಮಂಡ್ರಿ ವಿಶ್ವಾಸದ ನುಡಿ”

ಹೊಸನಗರ:ಪಕ್ಷಕ್ಕಾಗಿ ಹಗಲಿರುಳು ತಳಮಟ್ಟದಲ್ಲಿ ದುಡಿದ ನಿಷ್ಠಾವಂತ ಕಾರ್ಯಕರ್ತರ ಶ್ರಮವನ್ನು ಬಿಜೆಪಿ ಎಂದಿಗೂ ಕೈಬಿಡುವುದಿಲ್ಲ. ಪಕ್ಷವು ಅವರ ಕೊಡುಗೆಯನ್ನು ಖಂಡಿತವಾಗಿ ಗುರುತಿಸಲಿದೆ," ಎಂದು ಮಾರುತಿಪುರ ಕ್ಷೇತ್ರದ ಜಿಲ್ಲಾ ಪಂಚಾಯತ್ ಬಿಜೆಪಿ ಟಿಕೆಟ್ ಆಕಾಂಕ್ಷಿ ಸಂತೋಷ್ ಮಂಡ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಈ ಕುರಿತು ಮಾತನಾಡಿದ ಅವರು
ಬಿಜೆಪಿ ಸದಾ ಕಾರ್ಯಕರ್ತರ ಆಧಾರದ ಮೇಲೆ ಬೆಳೆದ ಪಕ್ಷ. ತಳಮಟ್ಟದಲ್ಲಿ ಬೂತ್ ಮಟ್ಟದಿಂದ ಪಕ್ಷದ ಸಂಘಟನೆಗಾಗಿ ಪ್ರಾಮಾಣಿಕವಾಗಿ ದುಡಿದವರಿಗೆ ಸೂಕ್ತ ಗೌರವ ಮತ್ತು ಅವಕಾಶ ಸಿಗಲಿದೆ ಎಂಬ ನಂಬಿಕೆ ನನಗಿದೆ ಎಂದರು.  ಸ್ಥಳೀಯ ಮಟ್ಟದಲ್ಲಿ ಯುವಕರನ್ನು ಒಗ್ಗೂಡಿಸಿ, ಪಕ್ಷದ ಸಂಘಟನೆಗೆ ಹೆಚ್ಚಿನ ಉತ್ಪನ್ನ ನೀಡುತ್ತಿರುವ ನನಗೆ ಈ ಬಾರಿ ಮಾರುತಿಪುರ ಜಿಲ್ಲಾ ಪಂಚಾಯತ್ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದರು.


ತಾಲೂಕಿನಲ್ಲಿ ಪಕ್ಷ ಸಂಘಟನೆ ವಿಷಯದಲ್ಲಿ ನಾನು ಪ್ರಾಮಾಣಿಕವಾಗಿ ಶ್ರಮಿಸಿದ್ದು ಟಿಕೆಟ್ ಆಕಾಂಕ್ಷಿಯಾಗುವುದು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಇರುವ ಹಕ್ಕು. ಆದರೆ, ಪಕ್ಷದ ಹಿರಿಯ ನಾಯಕರು ಕ್ಷೇತ್ರದ ವಸ್ತುಸ್ಥಿತಿ ಮತ್ತು ನನ್ನ ಪಕ್ಷ ನಿಷ್ಠೆಯನ್ನು ಗುರುತಿಸಿ ಈ ಬಾರಿ ನನಗೆ ಅವಕಾಶವನ್ನು ನೀಡಲಿದ್ದಾರೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

ELECTION..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading