
ಹೊಸನಗರ: ಸರ್ಕಾರದ ಆಶ್ರಯ ಯೋಜನೆ ಅಡಿ ಮತ್ತು ಸರ್ಕಾರದ ಇತರೆ ವಸತಿ ಯೋಜನೆ ಅಡಿಯಲ್ಲಿ ನೀಡಲಾದಂತಹ ಮನೆಗಳಿಗೆ ವಿದ್ಯುತ್ ನಿರಾಕ್ಷೇಪಣಾ ಪತ್ರ ಹಾಗೂ ಸ್ವಾಧೀನ ಪತ್ರವನ್ನು ಕೂಡಲೇ ಫಲಾನುಭವಿಗಳಿಗೆ ನೀಡಲು ಆದೇಶಿಸುವಂತೆ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಜಿ ಎನ್ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿಯನ್ನ ಮಾಡಿದ್ದಾರೆ.
ಈ ಕುರಿತಾಗಿ ಮಾತನಾಡಿದವರು ಈಗಾಗಲೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಹಳಷ್ಟು ಆಶ್ರಯ ಮನೆಗಳನ್ನು ನೀಡಲಾಗಿದ್ದು ಅವರಿಗೆ ಈವರೆಗೂ ವಿದ್ಯುತ್ ನಿರಾಕ್ಷೇಪಣಾ ಪತ್ರವನ್ನಾಗಲಿ ಸ್ವಾಧೀನ ಪತ್ರವನ್ನಾಗಲಿ ನೀಡಲು ಆಗಲಿಲ್ಲ ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಂತಹ ಯೋಜನೆಗಳನ್ನು ಜಾರಿಗೆ ತಂದಿದ್ದು ಆದರೆ ಮುಕ್ತಾಯಗೊಂಡಂತಹ ಮನೆಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಲು ವಿಳಂಬವಾಗುತ್ತಿರುವುದು ಸರಿಯಲ್ಲ. ಪ್ರತಿನಿತ್ಯ ಫಲಾನುಭವಿಗಳು ಇದಕ್ಕಾಗಿ ಕೆಲಸ ಕಾರ್ಯಗಳನ್ನು ಬಿಟ್ಟು ಕಚೇರಿಗಳಿಗೆ ಓಡಾಡುವಂತಾಗಿದೆ ಕೆಲ ದಿನಗಳ ಹಿಂದೆ ನಗರಾ ಗ್ರಾಮ ಪಂಚಾಯತ್ ಸದಸ್ಯರಾದ ಕರುಣಾಕರ ಶೆಟ್ಟಿ, ಈ ಕುರಿತಾಗಿ ಪ್ರತಿಭಟನೆಯನ್ನು ಸಹ ಮಾಡಿದ್ದರು ಆದ್ದರಿಂದ ಕೂಡಲೇ ಇಲಾಖೆ ಈ ಬಗ್ಗೆ ಗಮನ ಹರಿಸಿ ಶೀಘ್ರ ಆದೇಶವನ್ನು ಹೊರಡಿಸಬೇಕು ಎಂದು ಅವರು ಆಗ್ರಹಿಸಿದರು.
ASHRAYA MANE...
