

ಹೊಸನಗರ:ದೇಶದ ಪ್ರಪ್ರಥಮ ಗೃಹ ಸಚಿವ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಹೊಸನಗರದಲ್ಲಿ ಶುಕ್ರವಾರ 'ಏಕತಾ ನಡಿಗೆ' ಓಟ ನೆಡಿಯಿತು. ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸನಗರ ಪೊಲೀಸ್ ಠಾಣಾ ವೃತ್ತ ನಿರೀಕ್ಷಕರಾದ ಮುತ್ತನಗೌಡ ಏಕತಾ ನಡಿಗೆಗೆ ಪ್ರಮಾಣ ವಚನ ಬೋಧಿಸಿ, ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

ಬಳಿಕ ಹೊಸನಗರ ಪೊಲೀಸ್ ಠಾಣೆ ಸಿಬ್ಬಂದಿಗಳು ಹೊಸನಗರ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಸ್ಕೌಟ್ ಮತ್ತು ಗೈಡ್ಸ್, ಎನ್ ಎಸ್ ಎಸ್ ಹಳೆ ವಿದ್ಯಾರ್ಥಿಗಳ ಸಂಘ, ಜೆಸಿಐ ಹೊಸನಗರ ಡೈಮಂಡ್ ಜೆ ಸಿ ಐ ಹೊಸನಗರ ಕೊಡಚಾದ್ರಿ ಹಾಗೂ ವರ್ತಕರ ಸಂಘದ ಸದಸ್ಯರು ಏಕತಾ ನಡಿಗೆಯಲ್ಲಿ ಹೆಜ್ಜೆ ಹಾಕಿದರು. ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಿಂದ ನಿಂದ ಆರಂಭವಾದ ನಡಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೊಸನಗರ ಖಾಸಗಿ ಬಸ್ ನಿಲ್ದಾಣ ತಲುಪಿ ಮುಕ್ತಾಯಗೊಂಡಿತು ಏಕತ ನಡಿಗೆಯಲ್ಲಿ ಪಿಎಸ್ಐ ಶಂಕರ್ ಗೌಡ ಪಾಟೀಲ್, ವರ್ತಕ ಸಂಘದ ಅಧ್ಯಕ್ಷರಾದ ಪೂರ್ಣೇಶ್ ಮಲೆ ಬೈಲ್, ಹಾಲಗದ್ದೆ ಉಮೇಶ್.ಬಿ ಎಸ್ ಸುರೇಶ್, ರಾಧಾಕೃಷ್ಣ ಪೂಜಾರಿ, ಸಂತೋಷ್ ಶೇಟ್, ವಿಜೇಂದ್ರ ಶೇಟ್, ಲೋಕೇಶ್, ಶೈಲ ಕೇಶವ, ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.
UNITY-WALK..
Discover more from Prasarana news
Subscribe to get the latest posts sent to your email.
