CONGRESS:ಬೇಳೂರು ಗೋಪಾಲಕೃಷ್ಣರ ಜನಪ್ರಿಯತೆ ಸಹಿಸದೆ ಹರತಾಳು ಹಾಲಪ್ಪರಿಂದ ಆಧಾರ ರಹಿತ ಆರೋಪ..

ಹೊಸನಗರ: ಶಾಸಕ ಗೋಪಾಲಕೃಷ್ಣ ಬೇಳೂರು ರವರ ಜನಪ್ರಿಯತೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೆ ಮಾಜಿ ಶಾಸಕ ಹರತಾಳು ಹಾಲಪ್ಪನವರು ಆಧಾರ ರಹಿತ ಆರೋಪವನ್ನು ಮಾಡುತ್ತಿದ್ದಾರೆ ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿಜಿ ಚಂದ್ರಮೌಳಿ ಆರೋಪಿಸಿದ್ದರು.
ಶನಿವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದಆವರು ಮಾಜಿ ಶಾಸಕ ಹರತಾಳು ಹಾಲಪ್ಪನವರು  ಶುಕ್ರವಾರ ಸಾಗರದ ಏಸಿ ಕಚೇರಿಯ ಮುಂಭಾಗದಲ್ಲಿ ನಮ್ಮ ಶಾಸಕರ ವಿರುದ್ಧ ವಿವಿಧ ಆಧಾರ ರಹಿತ ಆರೋಪವನ್ನು ಮಾಡಿ ಪ್ರತಿಭಟನೆಯನ್ನು ನಡೆಸಿದ್ದು ಇದು ಕೇವಲ ಶಾಸಕರ ಜನಪ್ರಿಯತೆ ಹಾಗೂ ಅಭಿವೃದ್ಧಿಯನ್ನು ಸಹಿಸಲಾಗದ ಮಾಡಿದಂತಹ ಸುಳ್ಳು ಆರೋಪ ಎಂದರು. ಹರತಾಳು ಹಾಲಪ್ಪನವರು ಪ್ರತಿಭಟನೆಯ ವೇಳೆ ಶಾಸಕರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನಹರಿಸದೆ ಕೇವಲ ಸಚಿವ ಸ್ಥಾನದ ಲಾಭಗಾಗಿ ಹೋರಾಡುತ್ತಿದ್ದಾರೆ ಅಲ್ಲದೆ ತಮಗೆ ಸಚಿವ ಸ್ಥಾನ ದೊರಕುವುದಿಲ್ಲ ಎಂದು ಖಚಿತವಾದ ಬಳಿಕ ಬಿಜೆಪಿ ಪಕ್ಷದ ಮುಖಂಡರನ್ನು ಸಂಪರ್ಕಿಸಿದ್ದು ಪಕ್ಷಕ್ಕೆ ಸೇರ್ಪಡೆಯಾಗುವ ಕುರಿತು ಚರ್ಚಿಸಿದ ಬಗ್ಗೆ ಹಾಗೂ ಕಳೆದ ಕೆಲ ತಿಂಗಳುಗಳಿಂದ ಕ್ಷೇತ್ರಕ್ಕೆ ಬಾರದೆ ಕೇವಲ ಸಚಿವ ಸ್ಥಾನದ ಲಾಬಿಯಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಅವರ ಈ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾದುದ್ದು ಶಾಸಕರು ಹಲವು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದು ಕೆಡಿಪಿ ಸಭೆಗಳನ್ನು ಸಹ ನಡೆಸಿದ್ದಾರೆ ಜೊತೆಗೆ ಮಳೆ ಹನಿ ಸಂಭವಿಸಿದ ಕೆಲವು ಸ್ಥಳಗಳಿಗೂ ಸಹ ಅವರು ಭೇಟಿ ನೀಡಿದ್ದು ಅವುಗಳಿಗೆ ದಾಖಲೆಗಳಿವೆ ಎಂದರು ಅಲ್ಲದೆ ಮೂರು ಬಾರಿ ಶಾಸಕರಾದವರು ಸಚಿವ ಸ್ಥಾನಕ್ಕೆ ಲಾಬಿ ಮಾಡುವುದರಲ್ಲಿ ತಪ್ಪೇನಿದೆ ನೀವು ಸಹ ನಿಮ್ಮ ಅಧಿಕಾರ ಅವಧಿಯಲ್ಲಿ ಸಚಿವ ಸ್ಥಾನಕ್ಕೆ ಲಾಭಿ ಮಾಡಿರಲಿಲ್ಲವೇ ಅವಕಾಶ ಕೈ ತಪ್ಪಿದಾಗ ಕಾಂಗ್ರೆಸ್ ಪಕ್ಷವನ್ನು ಸೇರಲು ಮುಖಂಡರನ್ನು ಭೇಟಿಯಾಗಿರಲಿಲ್ಲವೇ ಎಂದು ಪ್ರಶ್ನಿಸಿದರು ಜೊತೆಗೆ ಕ್ಷೇತ್ರದಲ್ಲಿ ಅವರು ಇಲ್ಲದಿರುವ ಸಂದರ್ಭದಲ್ಲಿ ಅವರ ಆಪ್ತ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ನ ಮುಖಂಡರುಗಳಿಗೆ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಉಂಟಾದಲ್ಲಿ ತಕ್ಷಣ ಅಲ್ಲಿಗೆ ಭೇಟಿ ನೀಡಿ ಅವುಗಳಿಗೆ ಪರಿಹಾರವನ್ನ ಸೂಚಿಸಲು ತಿಳಿಸಿದ್ದು ಅದರಂತೆ ಅವರ ಆಪ್ತ ಕಾರ್ಯದರ್ಶಿಗಳು ಹಾಗೂ ಮುಖಂಡರು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು ಜೊತೆಗೆ ಹಾಲಪ್ಪನವರಿಗೆ ನಮ್ಮ ಶಾಸಕರು ಎಲ್ಲಿ ಸಚಿವರಾಗುತ್ತಾರೋ ಶಾಸಕರಾಗಿಯೇ ಇಷ್ಟೊಂದು ಜನಪ್ರಿಯತೆಯನ್ನು ಹೊಂದಿರುವ ಇವರು ಸಚಿವರಾದ ಬಳಿಕ ಇನ್ನಷ್ಟು ಜನಪ್ರಿಯತೆಯ ಜೊತೆಗೆ  ಕ್ಷೇತ್ರದ ಅಭಿವೃದ್ಧಿ ಆಗಲಿದೆ ಎಂಬ ಕಾರಣದಿಂದ ಇಂತಹ ಸುಳ್ಳು ಆರೋಪಗಳನ್ನ ಮಾಡುತ್ತಿದ್ದಾರೆ ಎಂದರು.
ಇದರ ಜೊತೆಗೆ ಗ್ರಾಮ ಪಂಚಾಯತ್ ಮೀಸಲಾತಿ ಪ್ರಕಟಣೆಯಲ್ಲಿ ಲೋಪವಾಗಿದೆ ಇದು ಕಾಂಗ್ರೆಸ್ ಕಚೇರಿಯಲ್ಲಿ ಸಿದ್ದವಾದಂತ ಮೀಸಲಾತಿ ಎಂದು ಅವರು ಆರೋಪಿಸಿದ್ದು ಮೂರು ಬಾರಿ ಶಾಸಕರಾದ ಹರತಾಳ ಹಾಲಪ್ಪ ನವರಿಗೆ ಮೀಸಲಾತಿ ಹೇಗೆ ಸಿದ್ಧವಾಗಲಿದೆ ಎಂಬ ಸಾಮಾನ್ಯ ತಿಳುವಳಿಕೆಯು ಇಲ್ಲದಿರುವುದು ವಿಪರ್ಯಾಸ ಅದನ್ನ ಯಾವುದೇ ಪಕ್ಷ ಮಾಡುವುದಲ್ಲ ಚುನಾವಣೆ ಆಯೋಗ ಒಂದಿಷ್ಟು ಮಾನದಂಡಗಳ ಅಡಿಯಲ್ಲಿ ಮಾಡಲಿದೆ ಅದನ್ನ ತಿಳಿದುಕೊಳ್ಳಲಿ ಎಂದರು.
ಬಳಿಕ ಮಾತನಾಡಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ ಹೂವಿನ ಕೋಣೆ ಶಾಸಕರ ಜನಪ್ರಿಯತೆ ಹಾಗೂ ಅವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಹರತಾಳು ಹಾಲಪ್ಪನವರಿಗೆ ನಾನು ಮುಂದಿನ ಬಾರಿಯೂ ಮಾಜಿಯಾಗಿ ಉಳಿಯುತ್ತೇನೆ ಎಂಬ ಹತಾಶೆಯಿಂದ ನಮ್ಮ ಶಾಸಕರ ವಿರುದ್ಧ ಸುಳ್ಳು ಆರೋಪಗಳನ್ನ ಮಾಡುತ್ತಿದ್ದು ಇದನ್ನು ಕಾಂಗ್ರೆಸ್ ಪಕ್ಷ ಕಟುವಾಗಿ ವಿರೋಧಿಸುತ್ತದೆ ನಮ್ಮ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿಯನ್ನ ನಡೆಸುತ್ತಿರುವುದು ನಿಜ ಆದರೆ ನಿಮ್ಮ ಹಾಗೆ ಅಧಿಕಾರ ಅವಧಿಯಲ್ಲಿ ತಿಂಗಳುಗಳ ಗಟ್ಟಲೆ ಆರೋಗ್ಯ ಸಮಸ್ಯೆ ಇದೆ ಎಂದು ಹೇಳಿ ಮನೆಯಲ್ಲಿಯೇ ಇರಲಿಲ್ಲ. ಕ್ಷೇತ್ರದ ಅಭಿವೃದ್ಧಿ ಜನರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುವ ಕೆಲಸವನ್ನ ಅವರು ಎಲ್ಲೇ ಇದ್ದರೂ ಮಾಡುತ್ತಿದ್ದಾರೆ ಎಂದರು.

ಕಸ್ತೂರಿ ರಂಗನ್ ವರದಿಗೆ ವಿರೋಧ..

ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಕಸ್ತೂರಿ ರಂಗನ್ ವರದಿಯಲ್ಲಿ ಮಲೆನಾಡಿನ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಅಧಿಸೂಚನೆಯನ್ನು ಹೊರಡಿಸಿದ್ದು ಅದನ್ನ ಕೂಡಲೇ ಅದನ್ನು ಕೈ ಬಿಡಬೇಕು ಇದರಿಂದ ಮಲೆನಾಡಿನ ರೈತರ ಬದುಕು ಇನ್ನಷ್ಟು ಕಷ್ಟಕರವಾಗಲಿದ್ದು ಕಾಂಗ್ರೆಸ್ ಪಕ್ಷ ಹಿಂದೆಯೂ ಸಹ ಇದನ್ನ ವಿರೋಧಿಸಿದ್ದು ಮುಂಬರುವ ದಿನಗಳಲ್ಲಿ ಈ ಪ್ರಕ್ರಿಯೆಯನ್ನು ಕೈ ಬಿಡದಿದ್ದಲ್ಲಿ ಉಗ್ರ ಹೋರಾಟವನ್ನು ಮಾಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.ಈ ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜಯಶೀಲಪ್ಪಗೌಡ, ಪ್ರಭಾಕರ್, ಸದಾಶಿವ ಶೆಟ್ಟಿ, ಎಂಪಿ ಸುರೇಶ್, ಗಣೇಶ್, ರಾಧಿಕಾರತ್ನಾಕರ, ವುಬೇದ್, ಮುಂತಾದವರು ಉಪಸ್ಥಿತರಿದ್ದರು.

CONGRESS..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading