PROTEST BJP:ರಾಜ್ಯ ಸರ್ಕಾರ ವೈಫಲ್ಯ ವಿರೋದಿಸಿ.. ಹೋಸನಗರದಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ…

ಹೊಸನಗರ:ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ಮೂರೂವರೆ ವರ್ಷ ಕಳೆದಿದ್ದರೂ ತಾಲ್ಲೂಕಿನ ಅಭಿವೃದ್ಧಿಗೆ ಸೂಕ್ತ ಆದ್ಯತೆ ದೊರೆತಿಲ್ಲ ಮತ್ತು ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳಯನ್ನು ಬಿಜೆಪಿ ಪಕ್ಷ ಕಟುವಾಗಿ ವಿರೋಧಿಸುತ್ತದೆ ಎಂದು ಶಾಸಕ ಆರಗಜ್ಞಾನೇಂದ್ರ ತಿಳಿಸಿದರು.
ಸೋಮವಾರ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಹೊಸನಗರ ತಾಲ್ಲೂಕಿನ ಅಭಿವೃದ್ಧಿಗೆ ನಿರ್ಲಕ್ಷ್ಯ ತೋರುತ್ತಿರುವ ಆರೋಪಿಸಿ ಬಿಜೆಪಿ ತಾಲ್ಲೂಕು ಮಂಡಲ ತಾಲೂಕು ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು
ರಾಜ್ಯಕ್ಕೆ ವಿದ್ಯುತ್ ನೀಡಲು ತನ್ನ ನೆಲ, ಹೊಲ ಆಸ್ತಿಯನ್ನ ಕಳೆದುಕೊಂಡಿರುವ ಅನೇಕ ಕುಟುಂಬಗಳಿರುವರು ಆದರೆ ಹೊಸನಗರ ತಾಲ್ಲೂಕು ಇಂದು ವಿದ್ಯುತ್ ಹಾಗೂ ಮೂಲಸೌಕರ್ಯ ಸಮಸ್ಯೆಗಳಿಂದ ಬಳಲುತ್ತಿದೆ ಎಂದು ಆರೋಪಿಸಿದರು.


ಜನರು ಈಗಲೇ ಎಚ್ಚರಗೊಳ್ಳಬೇಕು ಎಂದು ಅವರು ಕರೆ ನೀಡಿದರು.
ಸರ್ಕಾರದ ಹಣಕಾಸಿನ ಸ್ಥಿತಿ, ಸಚಿವ ಸಂಪುಟ ಹಾಗೂ ವಿವಿಧ ಆಡಳಿತಾತ್ಮಕ ವಿಚಾರಗಳ ಕುರಿತು ರಾಜ್ಯ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡಿದರು ಅಲ್ಲದೇ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಂಡರೆ ಪಕ್ಷವು ಸುಮ್ಮನಿರುವುದಿಲ್ಲ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಬಳಿಕ ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಹೊಸನಗರ ತಾಲ್ಲೂಕಿನಲ್ಲಿ ಸುಮಾರು 3,500 ಫಲಾನುಭವಿಗಳಿಗೆ ಕಳೆದ ಆರು ತಿಂಗಳಿಂದ ಹಣ ಪಾವತಿಯಾಗಿಲ್ಲ ಎಂದು ಆರೋಪಿಸಿದರು. ಪ್ರತಿ ತಿಂಗಳು ಸುಮಾರು ₹35 ಲಕ್ಷದಷ್ಟು ಹಣ ಫಲಾನುಭವಿಗಳಿಗೆ ತಲುಪದೆ ಉಳಿಯುತ್ತಿದೆ ಎಂದು ಅವರು ಹೇಳಿದರು.
ಹೊಸನಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಕ್ಷೇತ್ರದ ಅಭಿವೃದ್ಧಿಗಿಂತ ಸಚಿವ ಸ್ಥಾನಕ್ಕಾಗಿ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂದು ಆರೋಪಿಸಿದ ಹಾಲಪ್ಪ, ತಾಲ್ಲೂಕಿನಲ್ಲಿ ಬೆಳೆ ಪರಿಹಾರ, ಮಳೆಮಾಪನ, ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಹಲವು ಸಮಸ್ಯೆಗಳು ಬಾಕಿ ಉಳಿದಿವೆ ಎಂದು ಆರೋಪಿಸಿದರು.
ಈ ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಸತೀಶ್ ಏನ್, ಪ್ರಮುಖರಾದ ಉಮೇಶ್ ಕಂಚುಗಾರ್, ಏನ್ ಆರ್ ದೇವಣ್ಣ, ಗಣಪತಿ ಬೆಳಗೋಡು, ಎ ವಿ ಮಲ್ಲಿಕಾರ್ಜುನ, ಸುರೇಶ ಸ್ವಾಮೀರಾವ್, ಪ್ರಶಾಂತ್,ವಿರೇಶ್ ಆಲವಳ್ಳಿ, ರಾಘವೇಂದ್ರ ಕಲ್ಕೋಪ್ಪ, ಪದ್ಮಿನಿ ರಾವ್, ಪದ್ಮ ಸುರೇಶ, ಶಶಿಕಲಾ ಅನಂತ್, ರುಕ್ಮಿಣಿ ರಾಜು, ಮಂಜುಳ ಕೇತಾಜಿ ರಾವ್, ನಾಗೇಂದ್ರಪ್ಪ ಕಲ್ಲೂರು, ನಿರ್ಮಲ ಗಣೇಶ್, ಎಂ ಏನ್ ಸುಧಾಕರ್, ಕೆ ವಿ ಕೃಷ್ಣಮೂರ್ತಿ, ಯುವರಾಜ್ ಗೌಡ್ರು, ನಗರ ನಿತಿನ್, ಶಿವಾನಂದ್ ಹಿರೇಮಣತಿ, ರಾಜೇಶ್ ಬುಕ್ಕಿವರೆ, ಗಿರೀಶ್ ಮುಳುಗುಡ್ಡೆ, ಲಿಂಗಾಮೂರ್ತಿ, ಶ್ರೀಪತಿ ರಾವ್, ರಮೇಶ್ ನೇರಳೆ, ಸುಂದರೇಶ್, ವಿಶ್ವನಾಥ್, ಶ್ರೀಧರ ಚಿಕ್ಕನಕೊಪ್ಪ ಮುಂತಾದವರು ಉಪಸ್ಥಿತರಿದ್ದರು.

PROTEST BJP..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading