BJP PROTEST:ಸ್ವಾಭಿಮಾನಿ ಕಾರ್ಯಕರ್ತರಿಗೆ ತೊಂದರೆ ಕೊಡುವ ಕೆಲಸವನ್ನು ಸಹಿಸುವುದಿಲ್ಲ: ಬಿ ವೈ ಆರ್

ಹೊಸನಗರ: ಸ್ಥಳೀಯ ಕಾಂಗ್ರೆಸ್ ಶಾಸಕರ ಅಣತಿಯಂತೆ ಬಿಜೆಪಿಯ ಸ್ವಾಭಿಮಾನಿ ಕಾರ್ಯಕರ್ತರಿಗೆ ತೊಂದರೆ ಕೊಡುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದ್ದು ಇದನ್ನು ಸಹಿಸುವುದಿಲ್ಲ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.
ಪಟ್ಟಣದ ಪೊಲೀಸ್ ಇಲಾಖೆ ಮುಂಬಾಗ ಏರ್ಪಡಿಸಲಾಗಿದ್ದ  ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಕಂಡಿಹಿಸಿ ಏರ್ಪಡಿಸಲಾಗಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಶಾಸಕರ ಮಾತನ್ನು ಕೇಳಿ ನಮ್ಮ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸುವುದು ನ್ಯಾಯತವಾಗಿ ದುಡಿಮೆಯನ್ನು ಮಾಡಿಕೊಂಡಿರುವ ಕಾರ್ಯಕರ್ತರಿಗೆ ತೊಂದರೆಯನ್ನು ನೀಡುವಂತ ಕೆಲಸವನ್ನು ಇಲ್ಲಿನ ಅಧಿಕಾರಿಗಳು ಮಾಡುತ್ತಿದ್ದು ಇದರಿಂದ ವಿರೋಧ ಪಕ್ಷವನ್ನ ಹೆದರಿಸುವ ಕೆಲಸವನ್ನು ಮಾಡುತ್ತಿದ್ದೀರಾ ಇಂತಹ ಕೆಲಸಗಳಿಗೆ ಬಿಜೆಪಿ ಪಕ್ಷವಾಗಲಿ ಕಾರ್ಯಕರ್ತರಾಗಲಿ ಎಂದಿಗೂ ಹೆದರುವುದಿಲ್ಲ ಎಂದರು. ಹೊಸನಗರ ಪಟ್ಟಣದಲ್ಲಿ ಹಿಂದೆ ಆದಂತಹ ಅಭಿವೃದ್ಧಿ ಕೆಲಸಗಳ  ಹಿಂದೆ ಬಿಜೆಪಿ ಕಾರ್ಯಕರ್ತರ ಶ್ರಮವಿದೆ ಅವರ ಆಶೀರ್ವಾದದಿಂದ ಸನ್ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿ ಶಾಸಕರಾದ ಅರಗ ಜ್ಞಾನೇಂದ್ರ ಹರತಾಳು ಹಾಲಪ್ಪ ಹಾಗೂ ಹಿಂದೆ ನಮ್ಮ ಪಕ್ಷದಲ್ಲಿದ್ದು ಪಕ್ಷವನ್ನ ಬಿಟ್ಟುಹೋದ ಶಾಸಕರ ಅವಧಿಯಲ್ಲಿ ಇಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿದ್ದವು ಅವರು ಪಕ್ಷವನ್ನ ಬಿಟ್ಟು ಹೋದರು ಸಹ ಇಲ್ಲಿ ಅಭಿವೃದ್ಧಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ ಆಗ ದುಡಿದದ್ದು ನಮ್ಮ ಪಕ್ಷದ ಕಾರ್ಯಕರ್ತರೇ.
ಹಿಂದೆ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಹಾಗೂ ಶಾಸಕರಾಗಿದ್ದ ಹರತಾಳು ಹಾಲಪ್ಪ ಎಂದಿಗೂ ಸಹ ಪೊಲೀಸ್ ಇಲಾಖೆಯನ್ನ ಅಥವಾ ಇನ್ಯಾವುದೇ ಇಲಾಖೆಯನ್ನ ದುರುಪಯೋಗ ಪಡಿಸಿಕೊಂಡಿಲ್ಲ ಆದರೆ ಇಂದು ಆ ಕೆಲಸ ಸ್ಥಳೀಯ ಶಾಸಕರಿಂದ ಆಗುತ್ತಿದೆ ಎಂದರು. ಅಲ್ಲದೆ ಕಾರ್ಯಕರ್ತರ ಮೇಲೆ ಮಾಡಲಾದ ಪ್ರಕರಣ ಕುರಿತು ಸಮಗ್ರ ತನಿಖೆಯ ಜೊತೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದರು.



ಪೂರ್ವ ನಿಯೋಜಿತ ಪ್ರಕರಣ ದಾಖಲು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಕೆಲ ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತರ ಮೇಲೆ ಆದಂತಹ ಪ್ರಕರಣ ಪೂರ್ವ ನಿಯೋಜಿತ ಇದರಲ್ಲಿ ಇಲ್ಲಿನ ಕಾಂಗ್ರೆಸ್ ಶಾಸಕರು ಹಾಗೂ ಅವರ ಆಪ್ತರ ಹಸ್ತಕ್ಷೇಪವಿದ್ದು ಅವರ ಅನತಿಯಂತೆ ಪೋಲಿಸ್ ಇಲಾಖೆ ಪ್ರಕರಣವನ್ನ ದಾಖಲಿಸಿದ್ದು ಈ ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆಯಾಗುವ ಜೊತೆಗೆ ಇದರ ಸತ್ಯ ಸತ್ಯತೆ ಹೊರಗೆ ಬರಬೇಕು ಸಾಗರ ಹಾಗೂ ಹೊಸನಗರ ಭಾಗದಲ್ಲಿ ಬಿಜೆಪಿ ಕಾರ್ಯಕರ್ತರನ್ನ ಗುರಿಯಾಗಿಸಿಕೊಂಡು ಪೋಲಿಸ್ ಇಲಾಖೆ ಸುಳ್ಳು ಪ್ರಕರಣವನ್ನು ದಾಖಲಿಸುತ್ತಿದ್ದು ಇದನ್ನು ಪಕ್ಷ ಎಂದಿಗೂ ಸಹಿಸುವುದಿಲ್ಲ ಅದರಂತೆಯೇ ಹೊಸನಗರದಲ್ಲಿ ವಿದ್ಯುತ್ ಸಮಸ್ಯೆ ಬಗರ್ ಕುಂ ರೈತರ ಸಮಸ್ಯೆ ಹಾಗೆಯೇ ಉಳಿದಿದ್ದು ಅದನ್ನು ಸರಿಪಡಿಸುವ ಕೆಲಸವನ್ನು ಮಾಡುವ ಬದಲು ಸ್ಥಳೀಯ ಶಾಸಕರು ದ್ವೇಷ ರಾಜಕಾರಣವನ್ನು ಮಾಡುತ್ತಿದ್ದು ಇಲ್ಲಿರುವ ಅಧಿಕಾರಿಗಳು ಶಾಸಕರ ನಿರ್ದೇಶನದಂತೆ ಕೆಲಸವನ್ನ ನಿರ್ವಹಿಸುತ್ತಿದ್ದು ಇಂತಹ ದುರಾಡಳಿತವನ್ನು ಹಿಂದಿಯಲ್ಲಿಯೂ ಕಂಡಿಲ್ಲ ಎಂದರು ಈ ಪ್ರಕರಣ ಕುರಿತು ಸೂಕ್ತವಾದ ತನಿಖೆಯಾಗುವವರೆಗೂ ನಾವು ಹೋರಾಟವನ್ನು ಮುಂದುವರಿಸುತ್ತೇವೆ ಜೊತೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳಿಗೆ ಸೂಕ್ತ ಕ್ರಮವನ್ನು ಮಾಡಬೇಕು ಎಂಬ ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿಯನ್ನು ಮಾಡಿದರು.


ಈ ಪ್ರತಿಭಟನೆಯಲ್ಲಿ ಶಾಸಕರಾದ ಆರಗ ಜ್ಞಾನೇಂದ್ರ. ಶಿವಮೊಗ್ಗ ಶಾಸಕರಾದ ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಡಿ ಎಸ್ ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಬಿಜೆಪಿ ತಾಲೂಕು ಅಧ್ಯಕ್ಷರಾದ ಸತೀಶ್, ಟಿಡಿ ಮೇಘರಾಜ್, ಎಂ ಎನ್ ಸುಧಾಕರ್, ಪದ್ಮಿನಿ ರಾವ್ ಉಮೇಶ್ ಕಂಚುಗಾರ್ ಆರ್ ಟಿ ಗೋಪಾಲ್ ಹಾಲಗದ್ದೆ ಉಮೇಶ್ ವೀರೇಶ್      ಅಲವಳ್ಳಿ , ಸುರೇಶ್ ಸ್ವಾಮಿರಾಮ್ ಮುಂತಾದವರು ಪಾಲ್ಗೊಂಡಿದ್ದರು.

BJP PROTEST


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading