NOVEL LAUNCH::ಸಾಹಿತಿ ಸುಧೀಂದ್ರ ಭಂಡಾರ್ಕರ್ ರಚನೆಯ ಅವಳಿ ಕಾದಂಬರಿ ಸಾಯ್ಬಿಣಿ ಹಾಗೂ ವಿ_ ಚಕ್ರ ಬಿಡುಗಡೆ…

ಹೊಸನಗರ: ಸಾಹಿತಿ ಸುಧೀಂದ್ರ ಭಂಡಾರ್ಕರ್ ರಚನೆಯ ಸಾಯ್ಬಿಣಿ ಹಾಗೂ ವಿ_ಚಕ್ರ ಅವಳಿ ಕಾದಂಬರಿಗಳು ಜನವರಿ 16 ರಂದು ಬಿಡುಗಡೆ ಗೊಂಡವು.
ಹೆಸರೇ ಸೂಚಿಸುವಂತೆ ವಿಶಿಷ್ಟ ವಿಭಿನ್ನ ಕಥಾನಕ. ಇತಿಹಾಸ ಕುತೂಹಲ ಜೊತೆಗೆ ಮನೋವಿಜ್ಞಾನ ಸಂಗತಿಗಳನ್ನು ಹೊಂದಿರುವ ಈ ಕಾದಂಬರಿ ನಗರದ ವೆಂಕಟರಮಣ ಕಲಾಭವನದಲ್ಲಿ ಲೋಕಾರ್ಪಣೆ ಗೊಂಡವು.
ಅವಳಿ ಕಾದಂಬರಿಯನ್ನು ಮುಖಂಡರಾದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಮತ್ತು ಸುಮಸುಬ್ರಮಣ್ಯ ಜೊತೆಗೂಡಿ ನಾರಾಯಣ ಕಾಮತ್ ದಂಪತಿಗಳು ಬಿಡುಗಡೆ ಗೊಳಿಸಿದರು.
ಕಾದಂಬರಿಯ ಕುರಿತಾಗಿ ಸಾಹಿತಿ ಉಪನ್ಯಾಸಕ ಡಾ ಶ್ರೀಪತಿ ಹಳಗುಂದ ಮತ್ತು ಶ್ರೀಮತಿ ವಸುಧ ಚೈತನ್ಯ ರವರು ವಿಶ್ಲೇಷಣೆ ಮಾಡಿ ಮಾತನಾಡಿ ಸಾಯ್ಬಿಣಿ... ಅಂದರೆ ತಾಯಿ,  ದೇವಿ. ಕಾಮಾಖ್ಯಾ ದೇವಿ ಯ ಅನುಗ್ರಹ ಆವೇಶವನ್ನು ಮೈಗೂಡಿಸಿಕೊಂಡು ಬದುಕಿನ ಎಲ್ಲ ಏಳುಬೀಳುಗಳನ್ನು ಅನುಭವಿಸುವ ಕಥಾನಕ . ಇದು ಚರಿತ್ರೆ, ನಂಬಿಕೆ, ,ಶ್ರದ್ಧೆ, ವೈಚಾರಿಕತೆ, ವಿಜ್ಞಾನ, ಮನೋವಿಜ್ಞಾನದ ಅಂಶಗಳನ್ನೊಳಗೊಂಡಿದೆ. ಮುಂಬೈನಿಂದ ಶುರುವಾಗುವ ಜೀವನ ಯಾನವು ಸಹಜವಾಗಿ ಸುಖ ಕಷ್ಟಗಳನ್ನು ತೆರೆದಿಟ್ಟಂತಿದ್ದರೂ ಓದುಗನ ಊಹೆಗೆ ಅನೇಕ ಸಂಗತಿಗಳನ್ನು ಬಿಡುತ್ತದೆ. ಕಿರಿದರಲ್ಲಿ ಹಿರಿದರ್ಥವನ್ನು ನೀಡುವ ಪರಿಯೇ ವಿಶೇಷ ಎಂದರು ಹಾಗೆಯೇ ವಿ_ಚಕ್ರ  ಕಾದಂಬರಿಯಲ್ಲಿ ಮುಳುಗಿದ್ದು ಕೇವಲ ಜಮೀನಲ್ಲ... ಶತಶತಮಾನಗಳ ಸಂಭ್ರಮ‌.,ಸಂಸ್ಕೃತಿ.
ಇಲ್ಲಿ ಬರುವ ಪಾತ್ರಗಳು ನಮ್ಮ ಸುತ್ತಮುತ್ತಲೇ ಇವೆ ಎನಿಸುತ್ತದೆ. ಮನುಷ್ಯನ ಬೆಳವಣಿಗೆಯ ಮೇಲೆ ಪರಿಸರ ಅಪಾರವಾಗಿ ಪ್ರಭಾವ ಬೀರುವ ಬಗೆಯನ್ನು ಕಾದಂಬರಿ ಅರ್ಥವತ್ತಾಗಿ ಚಿತ್ರಿಸಲಾಗಿದೆ ಎಂದು ತಿಳಿಸಿದರು..
ಸಾಹಿತಿ ಸುಧೀಂದ್ರ ಭಂಡಾರ್ಕರ್ ಕಾರ್ಯಕ್ರಮದಲ್ಲಿ ಸ್ವಾಗತ ಕೋರುವ ಜೊತೆಗೆ ಅವಳಿ ಕೃತಿಗಳ ಬಗ್ಗೆ ಪ್ರಸ್ತಾವಿಕ ನುಡಿಗಳನ್ನು ಆಡಿದರು ಅಶ್ವಿನಿ ಪಂಡಿತ್ ಕಾರ್ಯಕ್ರಮವನ್ನು ನಿರೂಪಿಸಿದರು ಕಾರ್ಯಕ್ರಮದಲ್ಲಿ ಸಾಹಿತ್ಯ ಆಸಕ್ತರು ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.

NOVEL LAUNCH..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe